ಭೂಮಿ ಮತ್ತು ಚಂದ್ರನ ಚಿತ್ರ ಜತೆ ಸೆಲ್ಫಿ ಕ್ಲಿಕ್ ಮಾಡಿದ ಭಾರತದ ಸೌರ ಮಿಷನ್ ಆದಿತ್ಯ-L1

ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಭೂಮಿ ಮತ್ತು ಚಂದ್ರ ಫೋಟೊ ಕ್ಲಿಕ್ ಮಾಡಿದ ಆದಿತ್ಯ ಎಲ್-1. ಇಸ್ರೋ ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ. ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೌರ ಮಿಷನ್ ಉಡಾವಣೆಯಾಗಿತ್ತು.

ಭೂಮಿ ಮತ್ತು ಚಂದ್ರನ ಚಿತ್ರ ಜತೆ ಸೆಲ್ಫಿ ಕ್ಲಿಕ್ ಮಾಡಿದ ಭಾರತದ ಸೌರ ಮಿಷನ್ ಆದಿತ್ಯ-L1
ಆದಿತ್ಯ ಕ್ಲಿಕ್ ಮಾಡಿದ ಚಿತ್ರ
ರಶ್ಮಿ ಕಲ್ಲಕಟ್ಟ

Updated on: Sep 07, 2023 | 1:04 PM

ದೆಹಲಿ  ಸೆಪ್ಟೆಂಬರ್ 07: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ, ಆದಿತ್ಯ-ಎಲ್ 1 ( Aditya-L1), ಗುರುವಾರ ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (L1) ಗೆ ಹೋಗುತ್ತಿರುವಾಗ ಭೂಮಿ (Earth) ಮತ್ತು ಚಂದ್ರ (Chandra) ಫೋಟೊ ಕ್ಲಿಕ್ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.

ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಿಷನ್ ಉಡಾವಣೆಯಾಗಿತ್ತು.


ಬಾಹ್ಯಾಕಾಶ ನೌಕೆಯು ಈಗಾಗಲೇ ಎರಡು ಭೂಮಿಗೆ ಸುತ್ತುವರಿದ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಲ್ಯಾಗ್ರೇಂಜ್ ಪಾಯಿಂಟ್ L1 ಕಡೆಗೆ ವರ್ಗಾವಣೆ ಕಕ್ಷೆಯಲ್ಲಿ ಇರಿಸುವ ಮೊದಲು ಇನ್ನೆರಡನ್ನು ನಿರ್ವಹಿಸುತ್ತದೆ. ಆದಿತ್ಯ-L1 125 ದಿನಗಳ ನಂತರ L1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ.

ಆಗಸ್ಟ್ ಅಂತ್ಯದಲ್ಲಿ ಭಾರತ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವಕ್ಕೆ ಇಳಿದ ನಂತರ ಸೌರಯಾನ ನಡೆಸುವ ಮೂಲಕ ಒಂದು ತಿಂಗಳೊಳಗೆ ಇಸ್ರೋ ತನ್ನ ಎರಡನೇ ಸಾಧನೆಯನ್ನು ಮಾಡಿದೆ.

ಇದನ್ನೂ ಓದಿ: Aditya L1 Mission: ಮೊದಲ ಕಕ್ಷೆಯನ್ನು ಪೂರ್ಣಗೊಳಿಸಿ ಸೂರ್ಯನತ್ತ ಮತ್ತೊಂದು ಹೆಜ್ಜೆ ಇಟ್ಟ ಆದಿತ್ಯ

ಭಾರತದ ಇತರ ಚಾಲ್ತಿಯಲ್ಲಿರುವ ಯೋಜನೆಗಳು ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಒಳಗೊಂಡಿವ. ಇದು ಗಗನಯಾತ್ರಿಗಳನ್ನು ಮೊದಲ ಬಾರಿಗೆ 2025 ರ ವೇಳೆಗೆ ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us