ಮುಂಬೈ(Mumbai) ನಿಂದ ಬಂದಿದ್ದ ಇಂಡಿಗೋ ವಿಮಾನ(IndiGo Flight) 6E-203 ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಹಿಂಭಾಗ ನೆಲಕ್ಕೆ ಡಿಕ್ಕಿ ಹೊಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 14 ರಂದು 6E 203 ವಿಮಾನವು ಮುಂಬೈನಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಇಂಡಿಗೋ ಹೇಳಿಕೆಯಲ್ಲಿ, 14 ಏಪ್ರಿಲ್ 2023 ರಂದು, ಮುಂಬೈನಿಂದ 6E 203 ವಿಮಾನವು ನಾಗ್ಪುರದಲ್ಲಿ ಇಳಿಯುವಾಗ ಹಿಂಬದಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಏರ್‌ಲೈನ್ಸ್ ತಿಳಿಸಿದೆ. ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ರೆಕ್ಕೆಗಳು ನೆಲಕ್ಕೆ ಅಥವಾ ಯಾವುದೇ ಇತರ ಸ್ಥಿರ ವಸ್ತುವಿಗೆ ಡಿಕ್ಕಿ ಹೊಡೆದಾಗ ಟೈಲ್ ಸ್ಟ್ರೈಕ್ ಸಂಭವಿಸುತ್ತದೆ.
ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ
ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡಿತ್ತು ಬೆಂಕಿ
ಏರ್ ಇಂಡಿಯಾ ವಿಮಾನದ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅಬುದಾಬಿಯಿಂದ ಕ್ಯಾಲಿಕಟ್‍ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದೆ. ಯಾವುದೇ ಅಪಾಯ ಪ್ರಕರಣಗಳು ಜರುಗಿಲ್ಲದ ಕಾರಣ ಆತಂಕ ದೂರವಾಗಿದೆ.
ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಬುದಾಬಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಹೇಳಿದೆ. ಏರ್ ಇಂಡಿಯಾ ಎಕ್ಸ್‍ಪ್ರೆಸ್ ಬಿ737- 800 ವಿಮಾನ ವಿಟಿಎವೈಸಿ ಆಪರೇಟಿಂಗ್ ಫ್ಲೈಟ್-ಐ್ಡ348 (ಅಬುದಾಬಿ ಕ್ಯಾಲಿಕಟ್) ನಂ.1 ಎಂಜಿನ್ ಫ್ಲಾಮ್‍ಔಟ್‍ನಿಂದ ಏರ್‍ಟರ್ನ್ ಬ್ಯಾಕ್‍ನಲ್ಲಿ ಸಾವಿರ ಅಡಿಗಳ ಎತ್ತರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದರು.
ಕೂಡಲೇ ವಿಮಾನವು ಅಬುದಾಬಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಹಿಂದಿರುಗಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್ ತಿಳಿಸಿತ್ತು. ಒಂದು ವಾರದಲ್ಲಿ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಎರಡನೇ ಘಟನೆ ಇದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Tue, 18 April 23