Indian Railways: ಕೇವಲ ಒಂದು ವರ್ಷದಲ್ಲೇ ಭಾರತೀಯ ರೈಲ್ವೆಗೆ ಬರೋಬ್ಬರಿ 2.40 ಲಕ್ಷ ಕೋಟಿ ರೂ, ಆದಾಯ
2022-23ನೇ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯು 2.40 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಆದಾಯವನ್ನು ಗಳಿಸಿದೆ.
ದೆಹಲಿ: ಉತ್ತಮ ಸೇವೆ, ವಿಶೇಷವಾದ ಟೂರಿಂಗ್ ಪ್ಯಾಕೇಜ್ಗಳಿಂದ ಹೆಸರು ಮಾಡಿರುವ ನಮ್ಮ ಭಾರತೀಯ ರೈಲ್ವೆ(Indian Railways) 2022 ಮತ್ತು 2023ನೇ ಸಾಲಿನಲ್ಲಿ ಭರ್ಜರಿ ಆದಾಯ ಗಳಿಸಿದೆ. 2022-23ನೇ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯು 2.40 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಆದಾಯವನ್ನು ಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು 49,000 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಸೋಮವಾರ ಸಚಿವಾಲಯ ಮಾಹಿತಿ ನೀಡಿದೆ.
2022-23 ರಲ್ಲಿ, ಸರಕು ಸಾಗಣೆ ಆದಾಯ ಕೂಡ ರೂ 1.62 ಲಕ್ಷ ಕೋಟಿಗೆ ವೃದ್ಧಿಸಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 15 ಪ್ರತಿಶತದಷ್ಟು ಏರಿಕೆಯಾಗಿದೆ. ಭಾರತೀಯ ರೈಲ್ವೇಯ ಪ್ರಯಾಣಿಕರ ಸಂಚಾರದಿಂದ ಬಂದ ಆದಾಯವು 61 ಶೇಕಡಾ ಏರಿಕೆಯಾಗಿದೆ. ಅಂದ್ರೆ 63,300 ಕೋಟಿ ರೂಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಮೂರು ವರ್ಷಗಳ ನಂತರ, ಭಾರತೀಯ ರೈಲ್ವೆಯು ಪಿಂಚಣಿ ವೆಚ್ಚಗಳನ್ನು ಸಂಪೂರ್ಣವಾಗಿ ಪೂರೈಸಲು ಸಮರ್ಥವಾಗಿದೆ. ಆದಾಯದಲ್ಲಿನ ಹೆಚ್ಚಳ ಮತ್ತು ಬಿಗಿಯಾದ ವೆಚ್ಚ ನಿರ್ವಹಣೆಯ ಪರಿಣಾಮ RE ಗುರಿಯೊಳಗೆ 98.14 ಶೇಕಡಾ ಕಾರ್ಯಾಚರಣಾ ಅನುಪಾತವನ್ನು ಸಾಧಿಸಲು ಸಹಾಯ ಮಾಡಿದೆ. ಎಲ್ಲಾ ಆದಾಯ ವೆಚ್ಚಗಳನ್ನು ಪೂರೈಸಿದ ನಂತರ, ರೈಲ್ವೆ 3,200 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಕೂಡ ಗಳಿಸಿದೆ. ರೈಲ್ವೇ ತನ್ನ ಪಿಂಚಣಿ ಹೊರೆಯ ಭಾಗಗಳನ್ನು ಭರಿಸುವಂತೆ ಹಲವು ವರ್ಷಗಳಿಂದ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಿತ್ತು.
ಪ್ರಯಾಣಿಕರ ಮೂಲದಿಂದ ರೈಲ್ವೆ 2022-23ರಲ್ಲಿ 63,300 ಕೋಟಿ ರೂ, 2021-22ರಲ್ಲಿ 39,214 ಕೋಟಿ ರೂ. ಗಳಿಸಿದೆ. ಅಂದರೆ 61% ವೃದ್ಧಿಸಿದೆ. 2021-22ರಲ್ಲಿ ಒಟ್ಟಾರೆ ಆದಾಯ 1,91,278 ಕೋಟಿ ರೂ. ಇದ್ದರೆ 2022-23ರಲ್ಲಿ 2,39,803 ಕೋಟಿ ರೂ.ಗಳಾಗಿತ್ತು. ರೈಲ್ವೆ ಸೇಫ್ಟಿ ಫಂಡ್‌ನಲ್ಲಿ 2022-23ರಲ್ಲಿ 30,001 ಕೋಟಿ ರೂ. ವ್ಯಯಿಸಲಾಗಿತ್ತು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ