ರಾಜ್ಯದಲ್ಲಿ ಈಗ ಮಾಫಿಯಾ ಯಾರನ್ನೂ ಹೆದರಿಸಲು ಸಾಧ್ಯವಿಲ್ಲ: ಅತೀಕ್, ಅಶ್ರಫ್ ಹತ್ಯೆ ಬಳಿಕ ಸಿಎಂ ಯೋಗಿ ಮಾತು
ಇದೀಗ ಮಾಫಿಯಾವು ರಾಜ್ಯದಲ್ಲಿ ಯಾರನ್ನೂ ಹೆದರಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗ್ಯಾಂಗ್ಸ್ಟರ್ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ಬಳಿಕ ಮೊದಲ ಬಾರಿಗೆ ಯೋಗಿ ಮಾತನಾಡಿದ್ದಾರೆ.
ಇದೀಗ ಮಾಫಿಯಾವು ರಾಜ್ಯದಲ್ಲಿ ಯಾರನ್ನೂ ಹೆದರಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ. ಗ್ಯಾಂಗ್ಸ್ಟರ್ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ಬಳಿಕ ಮೊದಲ ಬಾರಿಗೆ ಯೋಗಿ ಮಾತನಾಡಿದ್ದಾರೆ. 2017 ಕ್ಕಿಂತ ಮೊದಲು ಯುಪಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು ಮತ್ತು ರಾಜ್ಯದಲ್ಲಿ ಪ್ರತಿದಿನ ಗಲಭೆಗಳು ನಡೆಯುತ್ತಿತ್ತು ಎಂದು ಹೇಳಿದರು. 2017ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ, ನಮ್ಮ ಸರ್ಕಾರ ರಾಜ್ಯವನ್ನು ಗಲಭೆ ಮುಕ್ತ ಮಾಡಿದೆ ಎಂದು ಸಿಎಂ ಹೇಳಿದರು.
2005 ರ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಹತ್ಯೆ ಮಾಡಲಾಗಿತ್ತು. ರಾಜ್ಯದಲ್ಲಿ ಪ್ರತಿದಿನ ಗಲಭೆ ನಡೆಯುತ್ತಿತ್ತು. 2012 ರಿಂದ 2017 ರವರೆಗೆ 700 ಕ್ಕೂ ಹೆಚ್ಚು ಗಲಭೆಗಳು ನಡೆದಿವೆ. ಯುಪಿಯಲ್ಲಿ 2017 ರಿಂದ 2023 ರವರೆಗೆ ಒಂದೇ ಒಂದು ಗಲಭೆ ನಡೆದಿಲ್ಲ. ಯುಪಿಯಲ್ಲಿ ಒಮ್ಮೆಯೂ ಕರ್ಫ್ಯೂ ಹೇರಿಲ್ಲ. ಈಗ ಯಾವುದೇ ಕ್ರಿಮಿನಲ್ ಅಥವಾ ಮಾಫಿಯಾ ಯಾವುದೇ ಉದ್ಯಮಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಆ ಪ್ರಮಾಣದಲ್ಲಿ ಭದ್ರತೆ ಒದಗಿಸಲಾಗಿದೆ.
ಮತ್ತಷ್ಟು ಓದಿ: Atiq Ahmad Killers: ಪ್ರತಾಪ್ಗಢ ಕಾರಾಗೃಹಕ್ಕೆ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹಂತಕರ ಸ್ಥಳಾಂತರ
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಏಕೈಕ ದಾಳಿಕೋರ ಗುಡ್ಡು ಮುಸ್ಲಿಂ. ಉಮೇಶ್ ಪಾಲ್ ಹತ್ಯೆ ವೇಳೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದು ನಂತರ ಏಳು ಜನರ ತಂಡ ಗುಂಡಿಕ್ಕಿ ಹತ್ಯೆ ಮಾಡಿತ್ತು. ಉಮೇಶ್ ಪಾಲ್ ಮತ್ತು ಪೊಲೀಸ್ ಅಂಗರಕ್ಷಕರ ಮೇಲೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ನಂತರ ತಲೆ ಮರೆಸಿಕೊಂಡಿದ್ದ ಗುಡ್ಡು ಮುಸ್ಲಿಂ ಇದೀಗ ಕರ್ನಾಟಕದಲ್ಲಿ ಓಡಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಿಂಗಳಿಂದ ಪತ್ತೆ ಹಚ್ಚಲಾಗಿದೆ. ಆತನ ಬಂಧನಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ.
#WATCH | Now mafia cannot threaten anyone in Uttar Pradesh, says CM Adityanath days after Mafia brothers Atiq-Ashraf were killed amid police presence & Atiq’s son Asad was killed in a police encounter pic.twitter.com/hjfeBVF6qt
— ANI (@ANI) April 18, 2023
ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ನಂತರ ಎರಡು ತಿಂಗಳೊಳಗೆ ಮಾಫಿಯಾ ಡಾನ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸಂಬಂಧಿಸಿದ ಆರು ಜನರು ಹತ್ಯೆ ಮಾಡಲಾಗಿದೆ. ಆರು ಮಂದಿಯ ಪಟ್ಟಿಯಲ್ಲಿ ಅತೀಕ್, ಅವರ ಪುತ್ರ ಅಸಾದ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಮ್ ಹಸನ್ ಸೇರಿದ್ದಾರೆ.
2005ರ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಫೆಬ್ರವರಿ 24ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಸೋಲಿಸುವ ಮೂಲಕ ಅಲಹಾಬಾದ್ ವಿಧಾನಸಭಾ ಸ್ಥಾನವನ್ನು ಚುನಾವಣೆ ಗೆದ್ದ ತಿಂಗಳ ಬಳಿಕ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ