IRCTC Tour: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಒಂದೇ ದಿನದಲ್ಲಿ ಸ್ವಾಮಿಯ ದರ್ಶನ! ರೈಲ್ವೆ ಇಲಾಖೆಯ ಈ ಟೂರ್ ಪ್ಯಾಕೇಜ್ ಗಮನಿಸಿ

IRCTC tourism Package: ಈ ಪ್ರವಾಸದಲ್ಲಿ ಒಂದು ದಿನದಲ್ಲಿ ತಿರುಪತಿಗೆ ಭೇಟಿ ನೀಡುವ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ IRCTC ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಭೇಟಿ ನೀಡಿ.

IRCTC Tour: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಒಂದೇ ದಿನದಲ್ಲಿ ಸ್ವಾಮಿಯ ದರ್ಶನ! ರೈಲ್ವೆ ಇಲಾಖೆಯ ಈ ಟೂರ್ ಪ್ಯಾಕೇಜ್ ಗಮನಿಸಿ
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 13, 2023 | 4:11 PM

ಆರಾಧ್ಯ ದೈವ ತಿಮ್ಮಪ್ಪನ ದರ್ಶನಕ್ಕಾಗಿ ಹೆಚ್ಚು ದಿನ ಮೀಸಲಿಡಲು ಸಾಧ್ಯವಾಗದ ಭಕ್ತರಿಗೆ IRCTC ಶುಭ ಸುದ್ದಿ ನೀಡಿದೆ. ದಿಢೀರ್​ ಅಂತಾ ತಿರುಮಲ ಪ್ರವಾಸ ಮಾಡಿ, ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ತಿಮ್ಮಪ್ಪನ ( Tirupati Sri Venkateswara) ಭಕ್ತರ ಅನುಕೂಲಕ್ಕಾಗಿ 1000 ರೂಪಾಯಿ ಪ್ಯಾಕೇಜ್ ಅನುಸಾರ ಭಕ್ತರಿಗೆ ಸುಲಲಿತವಾಗಿ ದರ್ಶನ ಪ್ರಾಪ್ತಿಯಾಗುವಂತೆ ಮಾಡಲಾಗಿದೆ. ಒಂದು ದಿನದ ಪ್ರವಾಸದಲ್ಲಿ (Tourism) ಭಕ್ತರಿಗೆ ಈ ಯೋಜನೆ ಪ್ರಕಟಿಸಲಾಗಿದೆ.

ಮನುಷ್ಯರನ್ನು ಸಂಕಷ್ಟದಿಂದ ಪಾರು ಮಾಡಲು ಅವತರಿಸಿದ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗದಲ್ಲಿ ಜೀವಂತ ದೇವತೆಯಾಗಿ ಪೂಜಿಸಲಾಗುತ್ತದೆ. ತಿರುಮಲ ತಿರುಪತಿಯನ್ನು ವೈಕುಂಠ ಎಂದು ಪರಿಗಣಿಸಲಾಗಿದೆ. ತಮ್ಮ ಜೀವನದಲ್ಲಿ ಒಂದು ದಿನವಾದರೂ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿ ನಮನ ಸಲ್ಲಿಸಬೇಕು ಎಂದು ಅವರು ಭಾವಿಸುತ್ತಾರೆ. ಆದರೆ ತಿರುಮಲ ಪ್ರವಾಸಕ್ಕೆ ಹೆಚ್ಚು ದಿನ ಮೀಸಲಿಡಲು ಸಾಧ್ಯವಾಗದ ಭಕ್ತರಿಗೆ IRCTC ಶುಭ ಸುದ್ದಿ ನೀಡಿದೆ. ಈ ಯಾತ್ರೆಯಲ್ಲಿ ನೀವು ತಿರುಮಲ ತಿಮ್ಮಪ್ಪನನ್ನಷ್ಟೇ ಅಲ್ಲದೆ ವೆಂಕಟರಮಣ ಸ್ವಾಮಿಯ ಪತ್ನಿ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಿರುವ ತಿರುಚಾನೂರು-ಪದ್ಮಾವತಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.

ಇದು ಯಾವ ದಿನಾಂಕದಂದು ಲಭ್ಯವಿರುತ್ತದೆ? ಭಾರತೀಯ ರೈಲ್ವೆರ IRCTC ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡಲು ಬಯಸುವ ಭಕ್ತರಿಗೆ ಏಪ್ರಿಲ್ 15 ರಂದು ಪ್ರವಾಸವನ್ನು ಲಭ್ಯವಾಗುವಂತೆ ಮಾಡಲಾಗಿದೆ (DIVINE BALAJI DARSHAN  – SHG07).

ಪ್ರಯಾಣ/ದರ್ಶನಕ್ಕಾಗಿ IRCTC ವೆಬ್‌ಸೈಟ್ ಗೆ ಭೇಟಿ ನೀಡಬಹುದು. ಭಕ್ತರನ್ನು ತಿರುಪತಿ ರೈಲ್ವೇ ನಿಲ್ದಾಣದಲ್ಲಿ 08:00 AM ಕ್ಕೆ ತಿರುಮಲ ಬೆಟ್ಟಕ್ಕೆ ಕರೆದೊಯ್ಯಲಾಗುತ್ತದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ವಿಶೇಷ ಪ್ರವೇಶ ದರ್ಶನವನ್ನು ಮಧ್ಯಾಹ್ನ 1 ಗಂಟೆಗೆ ಮಾಡಲಾಗುತ್ತದೆ. ಆದರೆ, ಈ ದರ್ಶನ ಸಮಯವು ಆ ದಿನ ಬೆಟ್ಟದ ಮೇಲಿನ ಜನ ದಟ್ಟಣೆಯ ಮೇಲೆ ಅವಲಂಬಿತವಾಗಿರುತ್ತದೆ (The Land Tour Packages will commence and terminate at Tirupati Railway Station). ದರ್ಶನದ ನಂತರ, ಭಕ್ತರು ಸ್ವಾಮಿಯ ಅನ್ನ ಪ್ರಸಾದವನ್ನು ತೆಗೆದುಕೊಳ್ಳಬಹುದು. ನಂತರ.. ಪದ್ಮಾವತಿಯ ದರ್ಶನಕ್ಕಾಗಿ ತಿರುಚಾನೂರಿಗೆ ಕರೆದೊಯ್ಯಲಾಗುತ್ತದೆ. ನಂತರ ಅಂದು ಸಂಜೆ ತಿರುಪತಿ ರೈಲು ನಿಲ್ದಾಣಕ್ಕೆ ಭಕ್ತರನ್ನು ವಾಪಸ್​​ ಕರೆತರಲಾಗುವುದು.

ಈ ಪ್ಯಾಕೇಜ್‌ನ ಭಾಗವಾಗಿ ನೀವು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಬಯಸಿದರೆ.. IRCTC ಎಕ್ಸಿಕ್ಯೂಟಿವ್/ TIFC ಅನ್ನು ಸಂಪರ್ಕಿಸಿ. ಪ್ಯಾಕೇಜ್ ದರವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದಾಗ್ಯೂ ಈ ಪ್ರವಾಸದ ಪ್ಯಾಕೇಜ್‌ನ ಬೆಲೆಯು IRCTC/ ಸರಕಾರದ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತದೆ. ಈ ಪ್ರವಾಸದಲ್ಲಿ ಒಂದು ದಿನದಲ್ಲಿ ತಿರುಪತಿಗೆ ಭೇಟಿ ನೀಡುವ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ IRCTC ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಭೇಟಿ ನೀಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:10 pm, Thu, 13 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ