Air India Flight : ಏರ್ ಇಂಡಿಯಾ ಪೈಲಟ್‌, ಕ್ಯಾಬಿನ್ ಸಿಬ್ಬಂದಿಗಳ ವೇತನ ಹೆಚ್ಚಳ

ಏರ್ ಇಂಡಿಯಾ ವಿಮಾನ ಸಂಸ್ಥೆಯ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ವೇತನವನ್ನು ಕೂಡ ಹೆಚ್ಚು ಮಾಡಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಹೊಸ ನಿಯಮಗಳ ಪ್ರಕಾರ, ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನ ಈ ಕ್ರಮ ಐದು ವರ್ಷಗಳ ರೂಪಾಂತರ ಯೋಜನೆಯ ಭಾಗವಾಗಿದೆ.

Air India Flight : ಏರ್ ಇಂಡಿಯಾ ಪೈಲಟ್‌, ಕ್ಯಾಬಿನ್ ಸಿಬ್ಬಂದಿಗಳ ವೇತನ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
|

Updated on:Apr 18, 2023 | 11:01 AM

ದೆಹಲಿ: ಏರ್ ಇಂಡಿಯಾ ವಿಮಾನ ಸಂಸ್ಥೆ (Air India Flight) ತನ್ನ ಪೈಲಟ್‌ಗಳಿಗೆ ಪ್ರತಿ ಗಂಟೆಗೆ ಹಾರಾಟದ ದರವನ್ನು ಹೆಚ್ಚಿಸಿರುವುದರ ಜತೆಗೆ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ವೇತನವನ್ನು ಕೂಡ ಹೆಚ್ಚು ಮಾಡಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಹೊಸ ನಿಯಮಗಳ ಪ್ರಕಾರ, ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನ ಈ ಕ್ರಮ ಐದು ವರ್ಷಗಳ ರೂಪಾಂತರ ಯೋಜನೆಯ ಭಾಗವಾಗಿದೆ. ಏರ್ ಇಂಡಿಯಾ ಮತ್ತು AIX ಕನೆಕ್ಟ್ (ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ) 2,700ಕ್ಕೂ ಹೆಚ್ಚು ಪೈಲಟ್‌ಗಳಿಗೆ ವೇತನವನ್ನು ಹೆಚ್ಚಿಸಲಾಗುವುದು. ಏರ್ ಇಂಡಿಯಾದ 5,600 ಕ್ಯಾಬಿನ್ ಸಿಬ್ಬಂದಿಗೂ ಕೂಡ ವೇತನವನ್ನು ಹೆಚ್ಚು ಮಾಡಲಾಗಿದೆ.

ಎಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ವೇತನವನ್ನು ಪರಿಷ್ಕರಣೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಸಂಸ್ಥೆ ಹೊರಡಿಸಿದ ಆಂತರಿಕ ಸುತ್ತೋಲೆಯ ಪ್ರಕಾರ ನಮ್ಮ ಸಿಬ್ಬಂದಿಗಳಿಗೆ ಸಂಸ್ಥೆಯ ನಿಮಯದ ಪ್ರಕಾರ 5 ವರ್ಷಕ್ಕೊಮ್ಮೆ ವೇತನದ ಮತ್ತು ಇತರ ವ್ಯವಸ್ಥೆಗಳಲ್ಲಿ ಸರಳೀಕರಿಸುವ ಕ್ರಮವನ್ನು ತರಲಾಗುವುದು ಎಂದು ತಿಳಿಸಿದೆ. ಪರಿಷ್ಕರಣೆ ಘೋಷಣೆ ನಂತರ, ಹಾರಾಟದ ಭತ್ಯೆಯನ್ನು ಕೂಡ ಪ್ರಸ್ತುತ 20 ಗಂಟೆಗಳಿಂದ 40 ಗಂಟೆಗಳವರೆಗೆ ದ್ವಿಗುಣಗೊಳಿಸಲಾಗಿದೆ. ಕೊರೊನಾದ ಮೊದಲು ಏರ್ ಇಂಡಿಯಾ ಪೈಲಟ್‌ಗಳು 70 ಗಂಟೆಗಳ ಹಾರಾಟ ನಡೆಸುತ್ತಿದ್ದರು, ಆದರೆ ಇದೀಗ ಆ ಅವಧಿಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ ಎಂದು ಹೇಳಿದೆ.

ಟ್ರೈನಿ ಪೈಲಟ್‌ನ ಒಂದು ವರ್ಷದ ಸಿಟಿಸಿ ಈಗ 50,000 ರೂ. ಆಗಿದ್ದರೆ , ಹಿರಿಯ ಕಮಾಂಡರ್ ತಿಂಗಳಿಗೆ 8.50 ಲಕ್ಷ ರೂ. ಗಳಿಸುತ್ತಾರೆ. ಅದೇ ರೀತಿ, ಹೊಸ ಕ್ಯಾಬಿನ್ ಸಿಬ್ಬಂದಿಯ ವೇತನವನ್ನು ತಿಂಗಳಿಗೆ 25,000 ರೂ. ಎಂದು ನಿಗದಿಪಡಿಸಲಾಗಿದೆ , ಆದರೆ ಕ್ಯಾಬಿನ್ ಕಾರ್ಯನಿರ್ವಾಹಕರು ತಿಂಗಳಿಗೆ 78,000 ರೂ. ಪಡೆಯುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಮಾಂಡ್ ಅಪ್‌ಗ್ರೇಡ್ ಮತ್ತು ತರಬೇತಿ ಪಡೆಯುತ್ತಿರುವ ಪೈಲಟ್‌ಗಳಿಗೆ ಭೂ ಮತ್ತು ಸಿಮ್ಯುಲೇಟರ್ ತರಬೇತಿಗಾಗಿ ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಏರ್​ಪೋರ್ಟ್​ಗಳಿವು, ಇಲ್ಲಿವೆ ಟಾಪ್ 20 ವಿಮಾನ ನಿಲ್ದಾಣಗಳ ಪಟ್ಟಿ

ಇದಲ್ಲದೆ, ಏರ್ ಇಂಡಿಯಾ ಪೈಲಟ್‌ಗಳ ಪ್ರತಿ ಗಂಟೆಗೆ ಹಾರಾಟದ ಭತ್ಯೆ ದರಗಳನ್ನು ಸಹ ಹೆಚ್ಚಿಸಿದೆ. ವಿಮಾನಯಾನ ಸಂಸ್ಥೆಯು ತನ್ನ ಸೇವಾವಧಿಯ ಸಿಬ್ಬಂದಿಯ ಸುದೀರ್ಘ ಸೇವೆಯನ್ನು ಗುರುತಿಸಲು ಹೆಚ್ಚುವರಿ ಬಹುಮಾನವನ್ನು ಕೂಡ ನೀಡುತ್ತದೆ ಜತೆಗೆ ಟ್ರೈನಿ ಪೈಲಟ್‌ಗಳಿಗೆ ಸ್ಟೈಫಂಡ್​​ನ್ನು ದ್ವಿಗುಣಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಇತರರ ಪೈಕಿ, ಸುಮಾರು 800 ಎಫ್‌ಟಿಸಿ (ಫಿಕ್ಸೆಡ್ ಟರ್ಮ್ ಕಾಂಟ್ರಾಕ್ಟ್) ಪೈಲಟ್‌ಗಳ ಒಪ್ಪಂದಗಳನ್ನು ಮೊದಲು 5 ವರ್ಷಗಳವರೆಗೆ ನವೀಕರಿಸಲಾಗಿತ್ತು, ಆದರೆ ಈಗ ಪೈಲಟ್‌ಗಳು 58 ವರ್ಷ ವಯಸ್ಸಿನ ಅಂದರೆ ನಿವೃತ್ತಿಯ ವರೆಗೆ ವಿಸ್ತರಿಸಲಾಗುವುದು.

ಏರ್ ಇಂಡಿಯಾ ಸುಮಾರು 4,700 FTC ಕ್ಯಾಬಿನ್ ಸಿಬ್ಬಂದಿ ಮತ್ತು ಸುಮಾರು 1,000 ಖಾಯಂ ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿದೆ. ಏರ್ ಇಂಡಿಯಾ ಎರಡು ಹೆಚ್ಚುವರಿ ಹುದ್ದೆಗಳನ್ನು ಪರಿಚಯಿಸಿದೆ. ಜೂನಿಯರ್ ಫಸ್ಟ್ ಆಫೀಸರ್ ಮತ್ತು ಸೀನಿಯರ್ ಕಮಾಂಡರ್. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕಮಾಂಡರ್‌ಗಳಾಗಿ ಹಾರಾಟ ನಡೆಸಿದ ಅನುಭವ ಮತ್ತು ಈ ಹುದ್ದೆಗೆ ಹಿರಿಯ ಪೈಲಟ್‌ಗಳನ್ನು ಹಿರಿಯ ಕಮಾಂಡರ್ ಶ್ರೇಣಿಗೆ ಬಡ್ತಿ ನೀಡಲಾಗುವುದು ಮತ್ತು ಕಾರ್ಯನಿರ್ವಾಹಕ ಕರ್ತವ್ಯಗಳಿಗೆ ಹೆಚ್ಚುವರಿ ಭತ್ಯೆಯೊಂದಿಗೆ ನಿರ್ವಹಣಾ ಕೇಡರ್‌ಗೆ ತಕ್ಷಣದ ನೇಮಕಾತಿಯನ್ನು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೂಲದ ಪ್ರಕಾರ, ಫ್ರೆಷರ್ ಮತ್ತು ಅನುಭವಿ ಕ್ಯಾಬಿನ್ ಸಿಬ್ಬಂದಿಗೆ ಟ್ರೇನಿ ಸ್ಟೈಪೆಂಡ್‌ಗಳನ್ನು ಶೇಕಡಾ 20 ಕ್ಕಿಂತ ಹೆಚ್ಚು ಹೆಚ್ಚಿಸಲಾಗುತ್ತದೆ. ವಿಮಾನಯಾನ ಸಂಸ್ಥೆಯು ದೇಶೀಯ ಲೇಓವರ್ ಭತ್ಯೆ ಮತ್ತು ಚೆಕ್ ಸಿಬ್ಬಂದಿಗೆ ಕೂಡ ಭತ್ಯೆಯನ್ನು ದ್ವಿಗುಣಗೊಳಿಸಿದೆ. ಫೆಬ್ರವರಿಯಲ್ಲಿ, ಏರ್ ಇಂಡಿಯಾ 4,200 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ತರಬೇತಿ ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಂಡಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 18 April 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್