SBI Amrit Kalash Scheme: ಉತ್ತಮ ಬಡ್ಡಿ ಕೊಡುವ ಅಮೃತ ಕಳಶ ಯೋಜನೆ ಜೂನ್ 30ರವರೆಗೂ ವಿಸ್ತರಣೆ; ಏನಿದು ಸ್ಕೀಮ್?

SBI Popular FDs: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ ಕಳಶ್ ಸ್ಕೀಮ್​ನಲ್ಲಿ ಶೇ. 7.60ರವರೆಗೂ ಬಡ್ಡಿ ಸಿಗುತ್ತದೆ. ಆದರೆ, 400 ದಿನಗಳ ಅವಧಿಯ ಠೇವಣಿಗೆ ಮಾತ್ರ ಗರಿಷ್ಠ ಬಡ್ಡಿ ದೊರಕುತ್ತದೆ.

SBI Amrit Kalash Scheme: ಉತ್ತಮ ಬಡ್ಡಿ ಕೊಡುವ ಅಮೃತ ಕಳಶ ಯೋಜನೆ ಜೂನ್ 30ರವರೆಗೂ ವಿಸ್ತರಣೆ; ಏನಿದು ಸ್ಕೀಮ್?
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2023 | 6:24 PM

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್​ಬಿಐನ ಜನಪ್ರಿಯ ಅಮೃತ್ ಕಳಶ್ ಸ್ಕೀಮ್​ನ (SBI Amrit Kalash FD Scheme) ಕೊನೆಯ ದಿನವನ್ನು ಮುಂದೂಡಲಾಗಿದೆ. ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪಡೆಯಲು 2023 ಮಾರ್ಚ್ 31ಕ್ಕೆ ಕೊನೆಯ ದಿನವಾಗಿತ್ತು. ಕಳೆದ ವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank of India) ತನ್ನ ಅಮೃತ ಕಳಶ್ ಯೋಜನೆಯನ್ನು ಜೂನ್ 30ರವರೆಗೂ ವಿಸ್ತರಿಸಲು ನಿರ್ಧರಿಸಿದೆ. ಅಂದರೆ ಜೂನ್ 30ರವರೆಗೂ ಹಿರಿಯ ನಾಗರಿಕರು ಎಸ್​ಬಿಐನಲ್ಲಿ ಅಮೃತ್ ಕಳಸ್ ಎಫ್​ಡಿ ಸ್ಕೀಮ್ ತೆರೆದು ಗರಿಷ್ಠ ಬಡ್ಡಿ ಪಡೆಯಲು ಅವಕಾಶ ಇದೆ. ಅಮೃತ್ ಕಳಶ್ ಯೋಜನೆಯಲ್ಲಿ ನಿರ್ದಿಷ್ಟ ಎಫ್​ಡಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ಕೊಡುತ್ತದೆ ಅಮೃತ ಕಳಶ್ ಸ್ಕೀಮ್. ಜೂನ್ 30ರವರೆಗೂ ಈ ಸ್ಕೀಮ್ ಪಡೆಯಲು ಅವಕಾಶ ಇದೆ.

ಅಮೃತ್ ಕಳಶ್ ಸ್ಕೀಮ್​ನಲ್ಲಿ ಯಾವ ಅವಧಿಯ ಎಫ್​ಡಿಗೆ ಗರಿಷ್ಠ ಬಡ್ಡಿ ಸಿಗುತ್ತದೆ?

ಅಮೃತ ಕಳಶ್ ಯೋಜನೆಯಲ್ಲಿ 400 ದಿನಗಳ ನಿಶ್ಚಿತ ಅವಧಿ ಠೇವಣಿಗೆ (ಎಫ್​ಡಿ) ಗರಿಷ್ಠ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.10 ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಬರುತ್ತದೆ. 2023 ಏಪ್ರಿಲ್ 12ರಿಂದ ಈ ಎಫ್​ಡಿಗೆ ಹೊಸ ಬಡ್ಡಿ ದರ ಅನ್ವಯ ಆಗುತ್ತದೆ.

ಹಿರಿಯ ನಾಗರಿಕರಷ್ಟೇ ಅಲ್ಲ, ಎಸ್​ಬಿಐನ ಸಿಬ್ಬಂದಿ, ಪಿಂಚಣಿ ಪಡೆಯುವ ನಿವೃತ್ತ ಬ್ಯಾಂಕ್ ನೌಕರರು ಈ ಎಫ್​ಡಿ ಸ್ಕೀಮ್​ನ ಲಾಭ ಪಡೆಯಬಹುದಾಗಿದೆ. 2 ಕೋಟಿ ರೂ ಒಳಗಿನ ಠೇವಣಿಯನ್ನು ಈ ಸ್ಕೀಮ್​ನ ಅಡಿಯಲ್ಲಿ ಇಡಬಹುದು.

ಇದನ್ನೂ ಓದಿInfosys: ಭರ್ಜರಿ ಷೇರು ಡಿವಿಡೆಂಡ್ ಕೊಟ್ಟ ಇನ್ಫೋಸಿಸ್​ಗೆ ಸಂಕಷ್ಟ; ಕೆಲವೇ ಗಂಟೆಯಲ್ಲಿ ಷೇರುಪೇಟೆಯಲ್ಲಿ 75,000 ಕೋಟಿ ರೂ ನಷ್ಟ; ಏನು ಕಾರಣ?

ಎಸ್​ಬಿಐ ಅಮೃತ್ ಕಳಶ್ ಎಫ್​ಡಿ ಸ್ಕೀಮ್ ಈ ಬ್ಯಾಂಕ್​ನ ಶಾಖಾ ಕಚೆರಿ, ಯೋನೋ ಆ್ಯಪ್​ಗಳಲ್ಲಿ ಪಡೆಯಬಹುದು. ಈ ಯೋಜನೆ ನೀಡುವ ಇತರ ಸೌಲಭ್ಯಗಳೆಂದರೆ ಅವಧಿಗೆ ಮುನ್ನ ಠೇವಣಿ ಹಿಂಪಡೆಯಬಹುದು. ಹೀಗೆ ಪಡೆಯುವ ಹಣಕ್ಕೆ ಪೂರ್ಣಪ್ರಮಾಣದಲ್ಲಿ ಬಡ್ಡಿ ಸಿಗುವುದಿಲ್ಲ. ಅಂದರೆ ಕಡಿಮೆ ಬಡ್ಡಿ ಮಾತ್ರ ಸಿಗುತ್ತದೆ. ಮತ್ತೊಂದು ಲಾಭ ಎಂದರೆ ನೀವು ಇರಿಸುವ ಠೇವಣಿ ಮೊತ್ತದ ಆಧಾರವಾಗಿ ಸಾಲ ಸೌಲಭ್ಯ ಸಿಗುತ್ತದೆ.

ಇನ್ನು, ಈ ಸ್ಕೀಮ್​ನಲ್ಲಿ ಇಡಲಾಗುವ ಠೇವಣಿಗಳಿಗೆ ಸಿಗುವ ಬಡ್ಡಿಯನ್ನು ತಿಂಗಳಿಗೆ ಅಥವಾ 3 ತಿಂಗಳಿಗೆ ಅಥವಾ ಅರ್ಧವರ್ಷಕ್ಕೆ ಪಾವತಿಸಲಾಗುತ್ತದೆ. ಅಥವಾ ಡೆಪಾಸಿಟ್ ಅವಧಿ ಬಳಿಕ ಮೆಚ್ಯೂರ್ ಆದಾಗ ಬಡ್ಡಿ ಕೊಡಲಾಗುತ್ತದೆ.

ಇದನ್ನೂ ಓದಿLIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್

ಎಸ್​ಬಿಐ ಸರ್ವೋತ್ತಮ್ ಠೇವಣಿ ಯೋಜನೆ:

ಎಸ್​ಬಿಐನ ಸರ್ವೋತ್ತಮ್ ಎಫ್​ಡಿ ಸ್ಕೀಮ್ ಒಂದಿಷ್ಟು ಜನಪ್ರಿಯತೆ ಗಳಿಸುತ್ತಿದೆ. 15 ಲಕ್ಷ ರೂಗೂ ಹೆಚ್ಚು ಮೊತ್ತದ ಠೇವಣಿಗಳನ್ನು ಸ್ವೀಕರಿಸುವ ಈ ಸ್ಕೀಮ್​ನಲ್ಲಿ ಗರಿಷ್ಠ ಶೇ. 7.9ರವರೆಗೂ ಬಡ್ಡಿ ಸಿಗುತ್ತದೆ.

ಈ ಸ್ಕೀಮ್ ಅಡಿಯಲ್ಲಿ ಒಂದು ವರ್ಷ ಮತ್ತು ಎರಡು ವರ್ಷ ಅವಧಿಯ ಎಫ್​ಡಿಗಳಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಸಾಮಾನ್ಯ ಗ್ರಾಹಕರ 1 ವರ್ಷದ ಠೇವಣಿಗೆ ಶೇ. 7.1 ಮತ್ತು 2 ವರ್ಷದ ಠೇವಣಿಗೆ ಶೇ. 7.4 ಬಡ್ಡಿ ಬರುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು (ಶೇ. 0.5) ಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್