Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold at Home: ಚಿನ್ನ ಪ್ರಿಯರೇ ಇಲ್ನೋಡಿ..! ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ? ಸರ್ಕಾರದ ನಿಯಮ ತಿಳಿದಿರಿ

Limit In Keeping Gold at Home: ಮನೆಯಲ್ಲಿ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ ಎಂದು ಸಿಬಿಡಿಟಿ ನಿಯಮಗಳು ಹೇಳುತ್ತವೆ. ವಿವಾಹಿತ ಮಹಿಳೆ, ಅವಿವಾಹಿತ ಮಹಿಳೆ ಮತ್ತು ಪುರುಷರು ಬೇರೆ ಬೇರೆ ಪ್ರಮಾಣದ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು...

Gold at Home: ಚಿನ್ನ ಪ್ರಿಯರೇ ಇಲ್ನೋಡಿ..! ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ? ಸರ್ಕಾರದ ನಿಯಮ ತಿಳಿದಿರಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 16, 2023 | 7:27 PM

ನವದೆಹಲಿ: ಭಾರತದಲ್ಲಿ ಚಿನ್ನಕ್ಕೆ ಇರುವ ಬೆಲೆ ಮತ್ತು ಸ್ಥಾನಮಾನ ವಿಶೇಷದ್ದು. ಯಾವುದಾದರೂ ವಸ್ತುವಿನ ಬೆಲೆ ಗಗನಕ್ಕೇರಿದರೆ ಚಿನ್ನದ ಬೆಲೆ ಎಂದೇ ಬಣ್ಣಿಸುತ್ತಾರೆ. ಭಾರತದಲ್ಲಿ ಚಿನ್ನ ಒಂದು ಹೂಡಿಕೆಯ ವಸ್ತುವಾಗಿರುವುದಕ್ಕಿಂತ ಹೆಚ್ಚಾಗಿ ಆಭರಣ ರೂಪದಲ್ಲಿ ಜನರಿಗೆ ಪ್ರಿಯವಾಗಿರುವ ವಸ್ತು. ಜನವರಿಗೆ ಚಿನ್ನದ ಆಭರಣ (Gold Jewellery) ಒಂದು ಪ್ರತಿಷ್ಠೆಯ ವಸ್ತು. ಅದರಲ್ಲೂ ಹೆಣ್ಮಕ್ಕಳಿಗೆ ಚಿನ್ನ ಯಾವತ್ತಿದ್ದರೂ ಬೇಡಿಕೆಯ ಪಟ್ಟಿಯಲ್ಲಿ ಅಗ್ರಜನೇ. ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಚಿನ್ನಕ್ಕೆ ಯಾವತ್ತಿದ್ದರೂ ಬೇಡಿಕೆ ಕುಸಿಯುವ ಪ್ರಶ್ನೆಯೇ ಇಲ್ಲ. ಅದರಲ್ಲೂ ಭಾರತದಲ್ಲಿ ಚಿನ್ನದ ಬೆಲೆ ಬಹುತೇಕ ಏರ್ಮುಖವಾಗಿಯೇ ಇರುತ್ತದೆ. ಅಂತೆಯೇ, ಭಾರತ ಪ್ರಪಂಚದಲ್ಲಿ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದೆನಿಸಿದೆ. ಭಾರತೀಯರು ಸಾಧ್ಯವಾದಷ್ಟೂ ಹೆಚ್ಚೆಚ್ಚು ಚಿನ್ನ ಖರೀದಿಸುವ ಇರಾದೆಯಲ್ಲೇ ಇರುತ್ತಾರೆ. ಆದರೆ, ಮನೆಯಲ್ಲಿ ನೀವು ಕಿಲೋಗಟ್ಟಲೆ ಚಿನ್ನ ಇಟ್ಟುಕೊಳ್ಳುವಂತಿಲ್ಲ. ಇದಕ್ಕೆ ಮಿತಿ ಇದೆ. ಈ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

ಚಿನ್ನವನ್ನು ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು?

  • ಒಬ್ಬ ವಿವಾಹಿತ ಮಹಿಳೆ ಮನೆಯಲ್ಲಿ ತನ್ನ ಬಳಿ 500 ಗ್ರಾಮ್​ನಷ್ಟು ಚಿನ್ನ ಅಥವಾ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು.
  • ಅವಿವಾಹಿತ ಮಹಿಳೆಯಾದರೆ 250 ಗ್ರಾಮ್ ಚಿನ್ನವನ್ನು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು.
  • ಪುರುಷರು 100 ಗ್ರಾಮ್​ನಷ್ಟು ಮಾತ್ರ ಚಿನ್ನ ಅಥವಾ ಚಿನ್ನಾಭರಣವನ್ನು ಮನೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿRecovery Agents: ನಿಯಮ ತಿಳಿದಿರಿ: ರಿಕವರಿ ಏಜೆಂಟ್ ದುರ್ವರ್ತಿಸಿದರೆ ತತ್​ಕ್ಷಣಕ್ಕೆ ನೀವು ಏನು ಮಾಡಬಹುದು? ಎಲ್ಲಿ ದೂರು ಕೊಡಬೇಕು, ಯಾವ ಕೇಸ್ ಹಾಕಬಹುದು? ಇಲ್ಲಿದೆ ಡೀಟೇಲ್ಸ್

ಹೆಚ್ಚು ಚಿನ್ನ ಇದ್ದರೆ ಮಾತ್ರ ಸೀಜ್:

ಸರ್ಕಾರದ ನಿಯಮಗಳ ಪ್ರಕಾರ, ನಿಗದಿತ ಪ್ರಮಾಣದೊಳಗೆ ಮನೆಯಲ್ಲಿ ಚಿನ್ನ ಇದ್ದರೆ ಯಾವ ಅಧಿಕಾರಿಯೂ ಅದನ್ನು ವಶಕ್ಕೆ ಪಡೆಯುವಂತಿಲ್ಲ. ತನಿಖಾ ಅಧಿಕಾರಿಗಳು ಮನೆಗೆ ಶೋಧಕ್ಕೆ ಬಂದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇರುವ ಚಿನ್ನವನ್ನಷ್ಟೇ ಸೀಜ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಎಷ್ಟು ಚಿನ್ನ ಖರೀದಿಸಬಹುದು? ತೆರಿಗೆ ಎಷ್ಟು ಕಟ್ಟಬೇಕು?

ಆದಾಯ ತೆರಿಗೆ ಫೈಲಿಂಗ್​ನಲ್ಲಿ ಘೋಷಣೆ ಮಾಡಲಾಗಿರುವ ಕೃಷಿ ಆದಾಯ, ಗೃಹ ಉಳಿತಾಯದಿಂದ ಬಂದ ಹಣದಲ್ಲಿ ಖರೀದಿಸಲಾದ ಚಿನ್ನಕ್ಕೆ ಯಾವ ತೆರಿಗೆ ಕಟ್ಟಬೇಕಿಲ್ಲ. ಹಾಗೆಯೇ, ಪಾರಂಪರಿಕವಾಗಿ ಬಂದ ಚಿನ್ನಕ್ಕೂ ತೆರಿಗೆ ಕಟ್ಟುವಂತಿಲ್ಲ.

ಇದನ್ನೂ ಓದಿCGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ

ಸಿಬಿಡಿಟಿ ನಿಯಮಗಳ ಪ್ರಕಾರ ಘೋಷಿತ ಆದಾಯ ಮೂಲಗಳಿದ ಚಿನ್ನವನ್ನು ಎಷ್ಟು ಬೇಕಾದರು ಇಟ್ಟುಕೊಳ್ಳಬಹುದು. ಅದಕ್ಕೆ ಮಿತಿ ಇರುವುದಿಲ್ಲ.

ನೀವು ಚಿನ್ನ ಖರೀದಿಸಿ 3 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅದನ್ನು ಮಾರಲು ಹೊರಟಿದ್ದರೆ ಕಿರು ಅವಧಿ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ದರಕ್ಕೆ ಅನುಗುಣವಾಗಿ ಈ ತೆರಿಗೆ ಇರುತ್ತದೆ. ಚಿನ್ನ ಖರೀದಿಸಿ 3 ವರ್ಷಕ್ಕೂ ಹೆಚ್ಚು ಅವಧಿ ಬಳಿಕ ಅದನ್ನು ಮಾರಲು ಹೊರಟಿದ್ದರೆ ದೀರ್ಘಾವಧಿ ಲಾಭ ತೆರಿಗೆ ಅನ್ವಯವಾಗುತ್ತದೆ.

ಇನ್ನು ಮನೆಯಲ್ಲಿ ಸೀಮಿತ ಪ್ರಮಾಣದಲ್ಲಿ ಚಿನ್ನವನ್ನು ಇಟ್ಟುಕೊಳ್ಳುವುದರಿಂದ ಪ್ರಮುಖ ಲಾಭವೆಂದರೆ ಕಳ್ಳತನದ ರಿಸ್ಕ್ ಕಡಿಮೆ ಆಗುತ್ತದೆ. ಹೆಚ್ಚುವರಿ ಚಿನ್ನವನ್ನು ಬ್ಯಾಂಕ್ ಲಾಕರ್​ನಲ್ಲಿ ಇಡಬಹುದು. ಆ ಚಿನ್ನವನ್ನು ಲಾಭ ಮಾಡಿಕೊಳ್ಳುವ ಅವಕಾಶ ನಿಮಗಿರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Sun, 16 April 23