CGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ

Central Government Health Scheme Updates: ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ ಸಿಜಿಎಚ್​ಎಸ್ ಯೋಜನೆ ಅಡಿ ಒಪಿಡಿ ಕನ್ಸಲ್ಟೇಶನ್ ಶುಲ್ಕ 150 ರೂನಿಂದ 350 ರೂಗೆ ಏರಿಸಲಾಗಿದೆ. ಐಪಿಡಿ ಕನ್ಸಲ್ಟೇಶ್ ಶುಲ್ಕವನ್ನು 300ರಿಂದ 350 ರೂಗೆ ಹೆಚ್ಚಿಸಲಾಗಿದೆ. ಐಸಿಯು ಸರ್ವಿಸ್ ಅನ್ನು 5,400 ರೂಗೆ ನಿಗದಿ ಮಾಡಲಾಗಿದೆ.

CGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ
ಆಸ್ಪತ್ರೆಗೆ ದಾಖಲು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2023 | 1:56 PM

ನವದೆಹಲಿ: ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ (CGHS- Central Government Health Scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುತ್ತಿದೆ. ಈ ಯೋಜನೆಯಲ್ಲಿರುವ ವಿವಿಧ ದರಗಳನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ, ಆಸ್ಪತ್ರೆಗೆ ದಾಖಲಾಗಲು ಬೇಕಾದ ರೆಫರಲ್ ಪ್ರಕ್ರಿಯೆಯನ್ನೂ (Referral Process) ಸರ್ಕಾರ ಒಂದು ಹಂತ ಸರಳಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ ಸಿಜಿಎಚ್​ಎಸ್ ಯೋಜನೆ ಅಡಿ ಒಪಿಡಿ ಕನ್ಸಲ್ಟೇಶನ್ ಶುಲ್ಕ 150 ರೂನಿಂದ 350 ರೂಗೆ ಏರಿಸಲಾಗಿದೆ. ಐಪಿಡಿ ಕನ್ಸಲ್ಟೇಶ್ ಶುಲ್ಕವನ್ನು 300ರಿಂದ 350 ರೂಗೆ ಹೆಚ್ಚಿಸಲಾಗಿದೆ. ಐಸಿಯು ಸರ್ವಿಸ್ ಅನ್ನು 5,400 ರೂಗೆ ನಿಗದಿ ಮಾಡಲಾಗಿದೆ. ಫಲಾನುಭವಿ ದಾಖಲಾಗುವ ಆಸ್ಪತ್ರೆಯಲ್ಲಿ ವಿವಿಧ ಬೆಡ್ ಚಾರ್ಜ್ ದರಗಳನ್ನೂ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ದರಗಳಿಂದ ಸರ್ಕಾರಕ್ಕೆ 240 ಕೋಟಿ ರೂನಿಂದ 300 ಕೋಟಿ ರೂಗೆ ಹೆಚ್ಚುವರಿ ವೆಚ್ಚ ತಗುಲುವ ನಿರೀಕ್ಷೆ ಇದೆ.

ಏನಿದು CGHS ಸ್ಕೀಮ್? ಯಾರಿಗೆ ಇದೆ ಈ ಆರೋಗ್ಯ ಯೋಜನೆ?

ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ ಯೋಜನೆಯು ಕೇಂದ್ರ ಸರ್ಕಾರೀ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರಿಗೆ ಇರುವ ಆರೋಗ್ಯ ವಿಮಾ ಸೇವೆಯಾಗಿದೆ. ಇವರಷ್ಟೇ ಅಲ್ಲದೇ, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ರಾಜ್ಯಪಾಲರು, ಮಾಜಿ ಲೆಫ್ಟಿನೆಂಟ್ ಗವರ್ನರುಗಳು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ರೈಲ್ವೆ ಬೋರ್ಡ್ ಉದ್ಯೋಗಿಗಳು, ಮಾಜಿ ಮತ್ತು ಹಾಲಿ ಸಂಸದರು, ಪೋಸ್ಟಲ್ ಮತ್ತು ಟೆಲಿಗ್ರಾಫ್ ಇಲಾಖೆಯ ಉದ್ಯೋಗಿಗಳೂ ಈ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಈ ಸ್ಕೀಮ್​ನಲ್ಲಿ ಒಟ್ಟು 42 ಲಕ್ಷದಷ್ಟು ಫಲಾನುಭವಿಗಳಿದ್ದಾರೆ.

ಇದನ್ನೂ ಓದಿಸಾಲ ಪಡೆದು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದು ಒಳ್ಳೆಯದೇ? ಈ ಅಪಾಯಗಳ ಬಗ್ಗೆ ಇರಲಿ ಎಚ್ಚರಿಕೆ

ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್​ನಲ್ಲಿ ಪರಿಷ್ಕರಣೆಯಾದ ಮೊತ್ತ ಎಷ್ಟು?

  • ಒಪಿಡಿ ದರ: 150ರಿಂದ 350 ರುಪಾಯಿಗೆ ಹೆಚ್ಚಳ
  • ಐಪಿಡಿ ಕನ್ಸಲ್ಟೇಶನ್ ಶುಲ್ಕ: 300 ರೂನಿಂದ 350 ರೂಗೆ ಹೆಚ್ಚಳ
  • ಐಸಿಯು ಸರ್ವಿಸಸ್: 5,400
  • ಆಸ್ಪತ್ರೆಯ ಜನರಲ್ ರೂಮ್ ಬಾಡಿಗೆ ದರ: 1000 ರೂನಿಂದ 1,500 ರೂಗೆ ಹೆಚ್ಚಳ
  • ಸೆಮಿ ಪ್ರೈವೇಟ್ ವಾರ್ಡ್: 2,000 ರೂನಿಂದ 3,500 ರೂಗೆ ಹೆಚ್ಚಳ
  • ಖಾಸಗಿ ರೂಮ್ ದರ: 3,000 ರೂನಿಂದ 4,500 ರೂಗೆ ಹೆಚ್ಚಳ

ವೆಲ್​ನೆಸ್ ಸೆಂಟರ್​ನಿಂದ ಶಿಫಾರಸು ಪ್ರಕ್ರಿಯೆಯೂ ಸರಳ

ಸಿಜಿಎಚ್​ಎಸ್ ಸ್ಕೀಮ್​ನ ಫಲಾನುಭವಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗುವುದಿಲ್ಲ. ಅವರು ಸಿಜಿಎಚ್​ಎಸ್ ನಿಗದಿಪಡಿಸಿದ ಆರೋಗ್ಯ ಕೇಂದ್ರದಿಂದ (ವೆಲ್​ನೆಸ್ ಸೆಂಟರ್) ರೆಫರ್ ಮಾಡಲಾಗುವ ಆಸ್ಪತ್ರೆಗೆ ದಾಖಲಾಗಬೇಕು. ಅಥವಾ ತಮಗೆ ಬೇಕಾದ ಆಸ್ಪತ್ರೆಗೆ ದಾಖಲಾಗಬೇಕೆಂದರೂ ವೆಲ್​ನೆಸ್ ಸೆಂಟರ್​ನಿಂದ ಶಿಫಾರಸು ಪಡೆಯಬೇಕು. ಈಗ ಈ ಪ್ರಕ್ರಿಯೆಯನ್ನು ಸರ್ಕಾರ ತುಸು ಸರಳಗೊಳಿಸಲಾಗಿದೆ.

ಇದನ್ನೂ ಓದಿPMFBY: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ನಂ.1

ಈ ಮುಂಚೆ, ಸಿಜಿಎಚ್​ಎಸ್ ಯೋಜನೆಯ ಫಲಾನುಭವಿಯೇ ಖುದ್ದಾಗಿ ಈ ವೆಲ್​ನೆಸ್ ಸೆಂಟರ್​ಗೆ ಹೋಗಿ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಪಡೆಯಬೇಕಿತ್ತು. ಆದರೆ, ಈಗ ಫಲಾನುಭವಿಯ ಪರ ಯಾರಾದರೂ ವ್ಯಕ್ತಿ ಸೂಕ್ತ ದಾಖಲೆಗಳೊಂದಿಗೆ ವೆಲ್​ನೆಸ್ ಸೆಂಟರ್​ಗೆ ಹೋಗಿ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಪಡೆಯಬಹುದು. ಅಥವಾ ಫಲಾನುಭವಿಯು ವೆಲ್​ನೆಸ್ ಸೆಂಟರ್​ನ ವೈದ್ಯಾಧಿಕಾರಿಗೆ ವಿಡಿಯೋ ಕರೆ ಮಾಡಿಯೂ ರೆಫರಲ್ ಪಡೆಯಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ