Infosys: ಭರ್ಜರಿ ಷೇರು ಡಿವಿಡೆಂಡ್ ಕೊಟ್ಟ ಇನ್ಫೋಸಿಸ್​ಗೆ ಸಂಕಷ್ಟ; ಕೆಲವೇ ಗಂಟೆಯಲ್ಲಿ ಷೇರುಪೇಟೆಯಲ್ಲಿ 75,000 ಕೋಟಿ ರೂ ನಷ್ಟ; ಏನು ಕಾರಣ?

Share Market and Infosys: ಕೆಲವೇ ಗಂಟೆಯಲ್ಲಿ ಇನ್ಫೋಸಿಸ್ ಷೇರು ಬೆಲೆ ಶೇ. 15ರಷ್ಟು ಕುಸಿದು, 1,185 ರೂಪಾಯಿ ಬೆಲೆಗೆ ಇಳಿಯಿತು. ಇದು ಕಳೆದ ಎರಡು ವರ್ಷದಲ್ಲೇ ಇನ್ಫೋಸಿಸ್ ಷೇರು ಕಂಡ ಅತ್ಯಂತ ಕಡಿಮೆ ಬೆಲೆ ಆಗಿದೆ. ಈ ಕುಸಿತದ ಪರಿಣಾಮ ಇನ್ಫೋಸಿಸ್​ನ ಮಾರುಕಟ್ಟೆ ಬಂಡವಾಳದಲ್ಲಿ 75,000 ಕೋಟಿ ರೂ ನಷ್ಟವಾಗಿತ್ತು.

Infosys: ಭರ್ಜರಿ ಷೇರು ಡಿವಿಡೆಂಡ್ ಕೊಟ್ಟ ಇನ್ಫೋಸಿಸ್​ಗೆ ಸಂಕಷ್ಟ; ಕೆಲವೇ ಗಂಟೆಯಲ್ಲಿ ಷೇರುಪೇಟೆಯಲ್ಲಿ 75,000 ಕೋಟಿ ರೂ ನಷ್ಟ; ಏನು ಕಾರಣ?
ಇನ್ಫೋಸಿಸ್
Follow us
|

Updated on:Apr 17, 2023 | 3:49 PM

ಬೆಂಗಳೂರು: ಭಾರತದ ಎರಡನೇ ಅತಿ ದೊಡ್ಡ ಐಟಿ ಸರ್ವಿಸ್ ಕಂಪನಿ ಇನ್ಫೋಸಿಸ್ (Infosys Pvt Ltd) ಸೋಮವಾರದ ಷೇರುಪೇಟೆ ವಹಿವಾಟಿನಲ್ಲಿ ಕಹಿಫಲ ಉಂಡಿದೆ. ಮಾರುಕಟ್ಟೆ ತೆರೆದು ಕೆಲವೇ ಗಂಟೆಯಲ್ಲಿ ಎಲ್​ಐಸಿ ಷೇರು ಬೆಲೆ ಶೇ. 15ರಷ್ಟು ಕುಸಿದಿರುವುದು ಕಂಡು ಬಂದಿದೆ. ಪ್ರತೀ ಷೇರಿಗೆ 1,250 ರೂ ಬೆಲೆಯಲ್ಲಿ ಇನ್ಫೋಸಿಸ್ ಷೇರು ವಹಿವಾಟು ಏಪ್ರಿಲ್ 17ರಂದು ಬೆಳಗ್ಗೆ ಆರಂಭವಾಗಿದೆ. ಕೆಲವೇ ಗಂಟೆಯಲ್ಲಿ ಅದರ ಬೆಲೆ 1,185 ರೂಪಾಯಿಗೆ ಕುಸಿದಿದೆ. ಹೆಚ್ಚೂಕಡಿಮೆ ಶೇ. 15ರಷ್ಟು ಷೇರುಮೌಲ್ಯ ಕುಂದಿತು. ಇದು ಕಳೆದ ಎರಡು ವರ್ಷದಲ್ಲೇ ಇನ್ಫೋಸಿಸ್ ಷೇರು ಕಂಡ ಅತ್ಯಂತ ಕಡಿಮೆ ಬೆಲೆ ಆಗಿದೆ. ಈ ಕುಸಿತದ ಪರಿಣಾಮ ಇನ್ಫೋಸಿಸ್​ನ ಮಾರುಕಟ್ಟೆ ಬಂಡವಾಳದಲ್ಲಿ (Market Cap) 75,000 ಕೋಟಿ ರೂ ನಷ್ಟವಾಗಿತ್ತು. ಬಳಿಕ ಇನ್ಫೋಸಿಸ್ ಒಂದಷ್ಟು ಚೇತರಿಕೆ ಕಂಡು 1,261.15 ರೂವರೆಗೂ ಏರಿದ್ದು ಹೌದು. ಸದ್ಯ ಅದರ ಬೆಲೆ ಪ್ರತೀ ಷೇರಿಗೆ 1,258 ರೂ ಇದೆ. ಅಂದರೆ ದಿನದ ಆರಂಭಿಕ ಬೆಲೆಗಿಂತ ಶೇ. 9.5ರಷ್ಟು ಕಡಿಮೆ ಬೆಲೆಯಲ್ಲಿ ಇನ್ಫೋಸಿಸ್ ಷೇರು ಟ್ರೇಡಿಂಗ್ ಆಗುತ್ತಿದೆ.

ಇನ್ಫೋಸಿಸ್ ಷೇರು ಬೆಲೆ ಕುಸಿಯಲು ಏನು ಕಾರಣ?

ಇನ್ಫೋಸಿಸ್ ಸಂಸ್ಥೆ ಕಳೆದ ವಾರ ತನ್ನ ಹಣಕಾಸು ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆ 6,128 ಕೋಟಿ ರೂ ನಿವ್ವಳ ಆದಾಯ ತೋರಿಸಿತ್ತು. ಈ ಅವಧಿಯಲ್ಲಿ ಇನ್ಫೋಸಿಸ್ 6,624 ಕೋಟಿ ರೂ ನಿವ್ವಳ ಆದಾಯ ಬರಬಹುದೆಂದು ಅನಾಲಿಸ್ಟ್ ಸಂಸ್ಥೆಗಳು ನಿರೀಕ್ಷಿಸಿದ್ದವು. ಈ ನಿರೀಕ್ಷೆ ಈಡೇರಲಿಲ್ಲ. ನಿರೀಕ್ಷೆಗಿಂತ ಕಡಿಮೆ ನಿವ್ವಳ ಆದಾಯ ಪಡೆದರೂ ಇನ್ಫೋಸಿಸ್ ತನ್ನ ಷೇರುದಾರರಿಗೆ ಒಳ್ಳೆಯ ಡಿವಿಡೆಂಡ್ ಕೊಟ್ಟು ಗಮನ ಸೆಳೆಯಿತು.

ಇದನ್ನೂ ಓದಿInfosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

ನಿರೀಕ್ಷೆಗಿಂತ ಕಡಿಮೆ ನಿವ್ವಳ ಆದಾಯ ಬಂದಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಅದಕ್ಕಿಂತ ಹೆಚ್ಚಾಗಿ 2023-24ರ ಹಣಕಾಸು ವರ್ಷದಲ್ಲಿ ತನ್ನ ಸಂಸ್ಥೆಗೆ ಎಷ್ಟು ಆದಾಯ ಬರಬಹುದು ಎಂದು ಇನ್ಫೋಸಿಸ್ ಮಾಡಿದ ಅಂದಾಜು ಹೂಡಿಕೆದಾರರನ್ನು ದಿಗ್ಭ್ರಮೆಗೊಳಿಸಿದಂತಿದೆ. ಈ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಶೇ. 4ರಿಂದ 7ರವರೆಗಿನಷ್ಟು ಮಾತ್ರ ಆದಾಯ ಹೆಚ್ಚಳವಾಗಬಹುದು ಎಂದು ಅದು ಅಂದಾಜು ಮಾಡಿದ್ದು. ರೇಟಿಂಗ್ ಸಂಸ್ಥೆಗಳು ಈ ಹಿಂದೆ ಇನ್ಫೋಸಿಸ್ ಆದಾಯ ಶೇ. 10ಕ್ಕಿಂತಲೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದ್ದವು. ಈಗ ಕಂಪನಿ ಆದಾಯದ ವೇಗ ಕಡಿಮೆಗೊಳ್ಳುವ ಸಾಧ್ಯತೆ ಇರುವುದು ಹೂಡಿಕೆದಾರರು ಇನ್ಫೋಸಿಸ್ ಷೇರುಗಳನ್ನು ಮಾರುವಂತೆ ಪ್ರೇರೇಪಿಸಿರಬಹುದು.

ಇನ್ಫೋಸಿಸ್ ಆದಾಯ ಹೆಚ್ಚಳದಲ್ಲಿ ಯಾಕೆ ಕಡಿಮೆ ನಿರೀಕ್ಷೆ? ಐಟಿ ದೈತ್ಯನಿಗೆ ಏನು ಸಮಸ್ಯೆ?

ಇನ್ಫೋಸಿಸ್ ಮಾತ್ರವಲ್ಲ, ಭಾರತದ ಬಹುತೇಕ ಎಲ್ಲಾ ಐಟಿ ಕಂಪನಿಗಳು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿವೆ. ಈಗ ಅಮೆರಿಕ ಮತ್ತು ಯೂರೋಪ್​ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅಲ್ಲಿಯ ಪ್ರಮುಖ ಸಂಸ್ಥೆಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಿವೆ. ಇದರ ಪರಿಣಾಮ ಇನ್ಫೋಸಿಸ್​ಗೆ ಈ ಮುಂಚೆ ಸಿಕ್ಕಿದಷ್ಟು ಐಟಿ ಸರ್ವಿಸ್ ಪ್ರಾಜೆಕ್ಟ್​ಗಳು ಈಗ ಸಿಕ್ಕುವುದು ಕಷ್ಟ ಎನ್ನಲಾಗಿದೆ. ಹೀಗಾಗಿಯೇ, 2023-24ರ ಹಣಕಾಸು ವರ್ಷಕ್ಕೆ ತನ್ನ ಆದಾಯ ವೃದ್ಧಿ ಸಾಧ್ಯತೆಯನ್ನು ಇನ್ಫೋಸಿಸ್ ಕಡಿಮೆಗೊಳಿಸಿರುವುದು.

ಇದನ್ನೂ ಓದಿMilk Industry: ಕ್ಷೀರೋದ್ಯಮಕ್ಕೆ ಎಫ್​ಟಿಎ ಬೇಕೆ? ಆಮದು ಉತ್ಪನ್ನ ಜೊತೆ ಸ್ಪರ್ಧಿಸದಿದ್ದರೆ ರಫ್ತು ಹೇಗೆ ಸಾಧ್ಯ? ಹೆಚ್ಚುವರಿ ಹಾಲು ಏನು ಮಾಡುವುದು?

ಇನ್ಫೋಸಿಸ್ ಷೇರುಗಳನ್ನು ಕೊಳ್ಳಬಹುದೇ?

ಸದ್ಯ ಇನ್ಫೋಸಿಸ್ ಷೇರುಗಳು ಕುಸಿತದ ಹಾದಿಯಲ್ಲಿ ಇರುವುದು ಸ್ಪಷ್ಟವಾಗಿದೆ. ಜೆಪಿ ಮಾರ್ಗನ್ ಚೇಸ್, ಮೆಕಾರೀ ಗ್ರೀಪ್, ಸಿಟಿ ಗ್ರೂಪ್ ಮೊದಲಾದ ಬ್ರೋಕರೇಜ್ ಕಂಪನಿಗಳು ಇನ್ಫೋಸಿಸ್ ಷೇರಿಗೆ ಕಡಿಮೆ ರೇಟಿಂಗ್ ಕೊಟ್ಟಿವೆ.

ಒಂದು ಅಂದಾಜು ಪ್ರಕಾರ ಇನ್ನೂ 6 ತಿಂಗಳ ಕಾಲ ಭಾರತದ ಐಟಿ ಕಂಪನಿಗಳಿಗೆ ಸಂಕಷ್ಟ ಇದ್ದು, ಅವುಗಳ ಷೇರುಗಳು ಇನ್ನಷ್ಟು ಕುಸಿತ ಕಾಣಲಿವೆ. 6 ತಿಂಗಳ ಬಳಿಕ ಇವು ಮತ್ತೆ ಚೇತರಿಸಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ, ಐದಾರು ತಿಂಗಳ ಬಳಿಕ ಇನ್ಫೋಸಿಸ್ ಷೇರುಗಳ ಮೇಲೆ ಯಾರಾದರೂ ಹೂಡಿಕೆ ಮಾಡಬಹುದು ಎನ್ನುವಂತಹ ಸಲಹೆಯನ್ನು ಬ್ರೋಕರ್​ಗಳು ನೀಡಿದ್ದಾರೆ.

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Mon, 17 April 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ