AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್​ಗೆ ಬೆಂಕಿ; ಸ್ವಲ್ಪದರಲ್ಲೇ ತಪ್ಪಿದ ದೊಡ್ಡ ಅವಘಡ

Major fire incident averted in Indigo flight at New Delhi: ದೆಹಲಿಯಿಂದ ನಾಗಾಲ್ಯಾಂಡ್​ನ ದಿಮಾಪುರ್​ಗೆ ಹೊರಟಿದ್ದ ಇಂಡಿಗೋ ಏರ್ಲೈನ್ ವಿಮಾನದೊಳಗೆ ಅಗ್ನಿ ಅವಘಡ ಸಂಭವಿಸುವುದು ಸ್ವಲ್ಪದರಲ್ಲೇ ತಪ್ಪಿದೆ. ವಿಮಾನದ ಪ್ರಯಾಣಿಕರೊಬ್ಬರ ವೈಯಕ್ತಿಕ ಪವರ್ ಬ್ಯಾಂಕ್​ನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಸಿಬ್ಬಂದಿ ತತ್​ಕ್ಷಣವೇ ಅಗತ್ಯ ಕ್ರಮ ತೆಗೆದುಕೊಂಡು ಪರಿಸ್ಥಿತಿ ನಿಭಾಯಿಸಿರಉವ ಘಟನೆ ನಡೆದಿದೆ.

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್​ಗೆ ಬೆಂಕಿ; ಸ್ವಲ್ಪದರಲ್ಲೇ ತಪ್ಪಿದ ದೊಡ್ಡ ಅವಘಡ
ವಿಮಾನದ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 19, 2025 | 11:20 PM

Share

ನವದೆಹಲಿ, ಅಕ್ಟೋಬರ್ 19: ದೆಹಲಿಯಿಂದ ನಾಗಾಲ್ಯಾಂಡ್ ರಾಜಧಾನಿ ನಗರಿ ದಿಮಾಪುರ್​ಗೆ (Dimapur) ಹೊರಡುತ್ತಿದ್ದ ಇಂಡಿಗೋ ವಿಮಾನದೊಳಗೆ (Indigo flight) ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್​ಗೆ ಬೆಂಕಿ ತಗುಲಿದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ವಿಮಾನದ ಸಿಬ್ಬಂದಿ ಜಾಗ್ರತೆಯಿಂದ ಪರಿಸ್ಥಿತಿ ನಿಭಾಯಿಸಿ, ದೊಡ್ಡ ಅನಾಹುತವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿಯಿಂದ ದಿಮಾಪುರ್ ಮಾರ್ಗದಲ್ಲಿ ಓಡುವ ಇಂಡಿಗೋ ಏರ್​ಲೈನ್ಸ್​ನ 6ಇ 2107 ನಂಬರ್​ನ ಫ್ಲೈಟ್​ನಲ್ಲಿ ಈ ಅವಘಡವಾಗಿದೆ. ಅಂತಿಮವಾಗಿ ವಿಮಾನ ಹಾಗೂ ಅದರಲ್ಲಿರುವ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಏರ್​ಲೈನ್ ಸಂಸ್ಥೆಯ ವಕ್ತಾರರೂ ಕೂಡ ಇದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ತೂತುಕುಡಿಯಲ್ಲಿ ಡಿಆರ್​ಐ ಕಾರ್ಯಾಚರಣೆ; ಭಾರೀ ಮೊತ್ತದ ಚೀನೀ ಪಟಾಕಿಗಳು ಜಪ್ತಿ; ನಾಲ್ವರ ಬಂಧನ

‘ದೆಹಲಿಯಿಂದ ದಿಮಾಪುರ್​ ಮಧ್ಯೆ ಆಪರೇಟ್ ಆಗುವ 6ಇ 2107 ಇಂಡಿಗೋ ಫ್ಲೈಟ್ 2026ರ ಅಕ್ಟೋಬರ್ 19ರಂದು ನಿಲ್ದಾಣಕ್ಕೆ ಮರಳಿ ಬಂದಿದೆ. ವಿಮಮಾನದ ಆನ್​ಬೋರ್ಡ್​ನ ಸೀಟ್ ಬ್ಯಾಕ್ ಪಾಕೆಟ್​ನಲ್ಲಿ ಇರಿಸಲಾಗಿದ್ದ ಪ್ರಯಾಣಿಕರೊಬ್ಬರ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣಕ್ಕೆ ಸಣ್ಣದಾಗಿ ಬೆಂಕಿ ತಗುಲಿದ್ದರಿಂದ ಫ್ಲೈಟ್ ಅನ್ನು ಹಿಂದಕ್ಕೆ ತರಲಾಯಿತು’ ಎಂದು ಇಂಡಿಗೋ ಏರ್​ಲೈನ್ಸ್ ವಿಮಾನದ ವಕ್ತಾರರು ಹೇಳಿಕೆ ನಿಡಿದ್ದಾರೆ.

ಈ ಇಂಡಿಗೋ ಫ್ಲೈಟ್ ನವದೆಹಲಿಯಿಂದ ದಿಮಾಪುರ್​ಗೆ ಹೊರಟಿತ್ತು. ವಿಮಾನ ಟೇಕಾಫ್ ಆಗುತ್ತಿರುವಂತೆಯೇ ಪವರ್ ಬ್ಯಾಂಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ವಿಮಾನದ ಸಿಬ್ಬಂದಿ ಬಹಳ ಕ್ಷಿಪ್ರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪ್ರಮಾಣಿತ ಆಪರೇಟಿಂಗ್ ಕ್ರಮಗಳನ್ನು ಅನುಸರಿಸಿ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿಯನ್ನು ತಹಬದಿಗೆ ಬಂದಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ

‘ಘಟೆನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲದಿರುವುದು ತಿಳಿದುಬಂದಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯವರು ಸುರಕ್ಷಿತವಾಗಿದ್ದಾರೆ. ವಿಮಾನದಲ್ಲಿ ಎಲ್ಲಾ ಅಗತ್ಯ ತಪಾಸಣೆ ನಡೆಸಿದ ಬಳಿಕ ವಿಮಾನ ಹಾರಾಟಕ್ಕೆ ಅನುಮತಿಸಲಾಯಿತು’ ಎಂದು ಸಂಸ್ಥೆಯು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ