ವಿವಾಹೇತರ ಸಂಬಂಧ, ಗಂಡನ ಬಿಟ್ಟು ಬಾರದಿದ್ದಕ್ಕೆ ಗರ್ಭಿಣಿಯನ್ನು ಕೊಂದ ಪ್ರಿಯಕರ
ಗರ್ಭಿಣಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ(Murder) ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಶಾಲಿನಿ(22) ಮೃತ ಮಹಿಳೆ. ಆಕೆಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಆಕೆಯ ಪತಿ ಆಕಾಶ್ ಆಟೋ ರಿಕ್ಷಾ ಚಾಲಕನಾಗಿದ್ದಾನೆ. ಶಾಲಿನಿ ಶೈಲೇಂದ್ರ ಎಂಬುವವನ ಜತೆ ವಿವಾಹೇತರ ಸಂಬಂಧ ಹೊಂದಿದ್ದಳು. ಶೈಲೇಂದ್ರನ ಮಗು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಆದರೆ ಆಕೆ ತನ್ನ ಗಂಡನನ್ನು ಬಿಟ್ಟು ಶೈಲೇಂದ್ರನ ಜತೆ ಬರಲು ಸಿದ್ಧಳಿರಲಿಲ್ಲ. ಹೀಗಾಗಿ ಶೈಲೇಂದ್ರನಿಗೆ ಕೋಪ ಬಂದಿತ್ತು.

ನವದೆಹಲಿ, ಅಕ್ಟೋಬರ್ 20: ಗರ್ಭಿಣಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ(Murder) ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಶಾಲಿನಿ(22) ಮೃತ ಮಹಿಳೆ. ಆಕೆಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಆಕೆಯ ಪತಿ ಆಕಾಶ್ ಆಟೋ ರಿಕ್ಷಾ ಚಾಲಕನಾಗಿದ್ದಾನೆ. ಶಾಲಿನಿ ಶೈಲೇಂದ್ರ ಎಂಬುವವನ ಜತೆ ವಿವಾಹೇತರ ಸಂಬಂಧ ಹೊಂದಿದ್ದಳು. ಶೈಲೇಂದ್ರನ ಮಗು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಆದರೆ ಆಕೆ ತನ್ನ ಗಂಡನನ್ನು ಬಿಟ್ಟು ಶೈಲೇಂದ್ರನ ಜತೆ ಬರಲು ಸಿದ್ಧಳಿರಲಿಲ್ಲ. ಹೀಗಾಗಿ ಶೈಲೇಂದ್ರನಿಗೆ ಕೋಪ ಬಂದಿತ್ತು.
ತಡರಾತ್ರಿ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದಾಗ ಈ ದಾಳಿ ನಡೆದಿದೆ. ಆಗ ಆಕಸ್ಮಿಕವಾಗಿ ಕಾಣಿಸಿಕೊಂಡ ಶೈಲೇಂದ್ರ ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಆಕಾಶ್ ತಪ್ಪಿಸಿಕೊಂಡಿದ್ದ.ನಂತರ ಆಟೋದಲ್ಲಿ ಶಾಲಿನಿ ಇರುವುದನ್ನು ಗಮನಿಸಿದ ಶೈಲೇಂದ್ರ ಆಕೆ ಮೇಲೆ ಹಲವು ಬಾರಿ ಇರಿದಿದ್ದಾನೆ.
ಆಕಾಶ್ ತನ್ನ ಹೆಂಡತಿಯನ್ನು ಉಳಿಸಲು ಪ್ರಯತ್ನಿಸಿದಾಗ ಅವನ ಮೇಲೂ ಶೈಲೇಂದ್ರ ಹಲ್ಲೆ ನಡೆಸಿದ್ದಾನೆ. ಆದರೆ ಶೈಲೇಂದ್ರನನ್ನು ಸೋಲಿಸುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಅವನ ಕೈಲಿದ್ದ ಚಾಕುವನ್ನು ಕಸಿದುಕೊಂಡು ಆತನಿಗೆ ತಿರುಗಿ ಇರಿದಿದ್ದಾನೆ.
ಮತ್ತಷ್ಟು ಓದಿ: ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ
ಶಾಲಿನಿಯ ಸಹೋದರ ರೋಹಿತ ತಕ್ಷಣ ಶಾಲಿನಿ ಹಾಗೂ ಆಕಾಶ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಶೈಲೇಂದ್ರನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಶಾಲಿನಿ ಹಾಗೂ ಶೈಲೇಂದ್ರ ಮೃತಪಟ್ಟಿರುವುದಾಗಿ ಘೋಷಿಸಲಾಗಿತ್ತು. ಪತ್ನಿಯನ್ನು ಉಳಿಸುವಾಗ ಆಕಾಶ್‌ಗೆ ಹಲವು ಇರಿತದ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ.ಶಾಲಿನಿಯ ತಾಯಿ ಶೀಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕೊಲೆ ಮತ್ತು ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಶಾಲಿನಿ ಮತ್ತು ಆಕಾಶ್ ನಡುವಿನ ಸಂಬಂಧ ಹದಗೆಟ್ಟಿತ್ತು. ಆಗ ಶೈಲೇಂದ್ರನ ಜತೆ ಆಕೆಗೆ ಸಂಬಂಧವಿತ್ತು ಎಂದು ಶೀಲಾ ಹೇಳಿದ್ದಾರೆ.
ಅವರು ಸ್ವಲ್ಪ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಶಾಲಿನಿ ಮತ್ತು ಆಕಾಶ್ ನಂತರ ರಾಜಿ ಮಾಡಿಕೊಂಡು ತಮ್ಮ ಇಬ್ಬರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಇದು ಶೈಲೇಂದ್ರನ ಕೋಪಕ್ಕೆ ಕಾರಣವಾಗಿತ್ತು. ಶಾಲಿಯ ಹೊಟ್ಟೆಯಲ್ಲಿರುವ ಮಗು ತನ್ನದೇ ಎಂದು ಹೇಳಿಕೊಂಡಿದ್ದ.ಆದರೆ ಶಾಲಿನಿ ಈ ಮಗು ಆಕಾಶ್ನದ್ದೇ ಎಂದು ಹೇಳಿದ್ದಳು ಎಂದು ಆಕಾಶ್ ತಂದೆ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




