ಗಣರಾಜ್ಯೋತ್ಸವದ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೋ ಪಾಲ್ಗೊಳ್ಳುವ ಸಾಧ್ಯತೆ

|

Updated on: Jan 12, 2025 | 8:36 AM

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಹಿತಿಯ ಪ್ರಕಾರ, ಸುಬಿಯಾಂಟೊ ಅವರು ಭಾರತಕ್ಕೆ ಭೇಟಿ ನೀಡಿದ ತಕ್ಷಣ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ.ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯನ್ನು ಭಾರತ ಇನ್ನೂ ಔಪಚಾರಿಕವಾಗಿ ಘೋಷಿಸಿಲ್ಲ. ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರ ಭೇಟಿಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.

ಗಣರಾಜ್ಯೋತ್ಸವದ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೋ ಪಾಲ್ಗೊಳ್ಳುವ ಸಾಧ್ಯತೆ
ಸುಬಿಯಂಟೋ
Image Credit source: Hindustan Times
Follow us on

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭಾರತ ನಡೆಸಿದ ಮಾತುಕತೆ ಬಳಿಕ ಭಾರತದಿಂದ ನೇರವಾಗಿ ಪಾಕಿಸ್ತಾನಕ್ಕೆ ಹೋಗುವ ಯೋಜನೆಯನ್ನು ಮುಂದೂಡಿದ್ದಾರೆ. ವಾಸ್ತವವಾಗಿ, ಈ ಹಿಂದೆ ಪ್ರಬೋವೊ ಭಾರತದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ವರದಿಗಳು ಇದ್ದವು.

ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಇದೀಗ ಇಂಡೋನೇಷ್ಯಾ ಅಧ್ಯಕ್ಷರು ಪಾಕಿಸ್ತಾನದ ಬದಲು ಮಲೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಭಾರತವು ಇಂಡೋನೇಷ್ಯಾ ಅಧ್ಯಕ್ಷರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.

ಭಾರತವು ಪ್ರತಿ ವರ್ಷ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶ್ವ ನಾಯಕರನ್ನು ಆಹ್ವಾನಿಸುತ್ತದೆ. ಕಳೆದ ವರ್ಷ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಇಂಡೋನೇಷ್ಯಾ ಅಧ್ಯಕ್ಷ ಸುಕರ್ನೋ ಅವರು ಭಾರತದ ಮೊದಲ ಗಣರಾಜ್ಯೋತ್ಸವದ ಪರೇಡ್‌ನ ಮೊದಲ ಮುಖ್ಯ ಅತಿಥಿಯಾಗಿದ್ದರು.

2018 ರಲ್ಲಿ, ಆಗಿನ ಅಧ್ಯಕ್ಷ ವಿಡೋಡೋ ಮತ್ತು ಅವರೊಂದಿಗೆ ಇತರ 9 ಆಸಿಯಾನ್ ಸದಸ್ಯ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆಯೂ ವಿಡೋಡೋ ಭಾರತದಿಂದ ನೇರವಾಗಿ ಪಾಕಿಸ್ತಾನ ತಲುಪಿದ್ದ. ಆಗ ಹಲವು ರೀತಿಯ ಪ್ರಶ್ನೆಗಳು ಎದ್ದಿದ್ದವು. ಈ ಕಾರಣಕ್ಕಾಗಿಯೇ ಭಾರತ ಮತ್ತೊಮ್ಮೆ ಈ ತಪ್ಪನ್ನು ಮಾಡಲು ಬಯಸುವುದಿಲ್ಲ.

ಮತ್ತಷ್ಟು ಓದಿ: ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾರದ ಯುವತಿ ಮುಖ್ಯ ಗಾಯಕಿ!

ಆದ್ದರಿಂದಲೇ ಪ್ರಬೋವೊ ಅವರ ಪಾಕಿಸ್ತಾನ ಭೇಟಿಯನ್ನು ಮುಂದೂಡಲು ಭಾರತದ ಕಡೆಯಿಂದ ಸುದೀರ್ಘ ಮಾತುಕತೆಗಳು ನಡೆದವು. ಈ ಮಾತುಕತೆಯೂ ಪ್ರಭಾವ ಬೀರಿದೆ. ಅದರ ನಂತರ ಪ್ರಬೋವೊ ಅವರ ವೇಳಾಪಟ್ಟಿಯಂತೆ ಅವರು ಪಾಕಿಸ್ತಾನದ ಬದಲಿಗೆ ಮಲೇಷ್ಯಾಕ್ಕೆ ಪ್ರಯಾಣಿಸುತ್ತಾರೆ.

2024 ರಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಬಂದರು, 2023 ರಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾರತಕ್ಕೆ ಬಂದರು.  2017ರಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್, 2016ರಲ್ಲಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಮತ್ತು 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಇತರ ಪ್ರಮುಖ ನಾಯಕರು.

ನಿಕೋಲಸ್ ಸರ್ಕೋಜಿ, ವ್ಲಾಡಿಮಿರ್ ಪುಟಿನ್, ನೆಲ್ಸನ್ ಮಂಡೇಲಾ, ಜಾನ್ ಮೇಜರ್, ಮೊಹಮ್ಮದ್ ಖತಾಮಿ ಮತ್ತು ಜಾಕ್ವೆಸ್ ಚಿರಾಕ್ ಅವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ರಾಷ್ಟ್ರ ಮತ್ತು ಸರ್ಕಾರದ ಮುಖ್ಯಸ್ಥರು 1993 ರಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು. 1995 ಮತ್ತು 2010 ರಲ್ಲಿ ದಕ್ಷಿಣ ಕೊರಿಯಾದ ಅಂದಿನ ಅಧ್ಯಕ್ಷ ಲೀ ಮ್ಯುಂಗ್ ಬಾಕ್ ಅವರು ಆಗಮಿಸಿದ್ದರು.

COVID-19 ಸಾಂಕ್ರಾಮಿಕದಿಂದಾಗಿ 2021 ಮತ್ತು 2022 ರಲ್ಲಿ ಗಣರಾಜ್ಯೋತ್ಸವದಂದು ಯಾವುದೇ ಮುಖ್ಯ ಅತಿಥಿ ಇರಲಿಲ್ಲ. 2020 ರಲ್ಲಿ, ಬ್ರೆಜಿಲ್‌ನ ಅಂದಿನ ಅಧ್ಯಕ್ಷ ಜೈರ್ ಬೋಲ್ಸನಾರೊ, 2019 ರಲ್ಲಿ ದಕ್ಷಿಣ ಆಫ್ರಿಕಾದ ಅಂದಿನ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು 2018 ರಲ್ಲಿ ಆಸಿಯಾನ್ ದೇಶಗಳ ಎಲ್ಲಾ 10 ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ