ಮಹಾರಾಷ್ಟ್ರದ ಭೀವಂಡಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ನವಜಾತ ಶಿಶು ಸೇರಿ ಇಬ್ಬರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ಅಪಘಾತದಲ್ಲಿ ಇತರ ಐವರು ಗಾಯಗೊಂಡಿದ್ದಾರೆ. ಭಿವಂಡಿ ನಗರದ ಧೋಬಿ ತಲಾಬ್ ಪ್ರದೇಶದ ದುರ್ಗಾ ರಸ್ತೆಯಲ್ಲಿರುವ ಆರು ಫ್ಲಾಟ್ ಕಟ್ಟಡವು ಮಧ್ಯರಾತ್ರಿ 12.35 ಕ್ಕೆ ಕುಸಿದಿದೆ. ಈ ಅಪಘಾತದಲ್ಲಿ 40 ವರ್ಷದ ಉಜ್ಮಾ ಅತೀಫ್ ಮತ್ತು ಎಂಟು ತಿಂಗಳ ತಸ್ಲಿಮಾ ಮೊಸರ್ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ಇಲಾಖೆ ಅಧಿಕಾರಿ ರಾಜೇಶ್ ಪವಾರ್, ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಮಾತನಾಡಿ, ಭಿವಂಡಿ ನಗರದ ಧೋಬಿ ತಲಾವ್ ಪ್ರದೇಶದ ದುರ್ಗಾ ರಸ್ತೆಯಲ್ಲಿರುವ ಆರು ಫ್ಲಾಟ್‌ಗಳ ಕಟ್ಟಡವು ಮಧ್ಯರಾತ್ರಿ 12.35 ಕ್ಕೆ ಕುಸಿದಿದೆ.
#WATCH | Thane, Maharashtra: A two-storey building collapsed in Bhiwandi. Fire Department officer Rajesh Pawar says, “Six people were stuck in the building. We rescued four people. Two people are in a critical state.” pic.twitter.com/Mhwt5sV2gT
— ANI (@ANI) September 3, 2023
ಮೃತರನ್ನು ಉಜ್ಮಾ ಅತೀಫ್ ಮೊಮಿನ್ (40) ಮತ್ತು ತಸ್ಲಿಮಾ ಮೊಸರ್ ಮೊಮಿನ್ (8 ತಿಂಗಳು) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಮಹಿಳೆಯರು ಮತ್ತು 65 ವರ್ಷದ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಮತ್ತಷ್ಟು ಓದಿ: ಉತ್ತರಾಖಂಡದಲ್ಲಿ ಭಾರಿ ಮಳೆ, ಜೋಶಿಮಠ ಬಳಿ ಕಟ್ಟಡ ಕುಸಿತ, ಮೂವರ ರಕ್ಷಣೆ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಬೆಳಗಿನ ಜಾವ 3.30ರ ಸುಮಾರಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಅವಶೇಷಗಳನ್ನು ತೆಗೆಯುವ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಟ್ಟಡ ಎಷ್ಟು ಹಳೆಯದು ಮತ್ತು ಅಪಾಯಕಾರಿ ರಚನೆಗಳ ಪಟ್ಟಿಯಲ್ಲಿದೆಯೇ ಎಂಬುದು ಇನ್ನೂ ತಿಳಿದಿಲ್ಲ ಎಂದು ಅವರು ಹೇಳಿದರು. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ