ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ನಿನ್ನೆ (ಫೆ.14ರಂದು) ವಿಧಾನಸಭೆ ಚುನಾವಣೆ (Uttarakhand Assembly Election 2022) ಮುಕ್ತಾಯವಾಗಿದೆ. ಆದರೆ ಅದರ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಆಂತರಿಕ ಜಗಳ ಶುರುವಾಗಿದೆ. ಉತ್ತರಾಖಂಡ್ನ ಬಿಜೆಪಿ ಶಾಸಕ ಸಂಜಯ್ ಗುಪ್ತಾ ಅವರು, ರಾಜ್ಯದ ಬಿಜೆಪಿ ಮುಖ್ಯಸ್ಥ (BJP Party Chief) ಮದನ್ ಕೌಶಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದನ್ ಕೌಶಿಕ್ ಒಬ್ಬ ದೇಶದ್ರೋಹಿ ಎಂದು ಹೇಳಿದ್ದಾರೆ. ಉತ್ತರಾಖಂಡ್ನ ಬಿಜೆಪಿ ಮುಖ್ಯಸ್ಥ ಮದನ್ ಕೌಶಿಕ್ ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಅವರನ್ನು ಹೈಕಮಾಂಡ್ ನಾಯಕರು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮದನ್ ಕೌಶಿಕ್ ಪ್ರಯತ್ನಿಸಿದ್ದಾರೆ. ಹಾಗಾಗಿ ಅನೇಕ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ನಡೆಸಿದ್ದಾರೆ. ನನ್ನ ವಿರುದ್ಧ ಸ್ಪರ್ಧಿಸಿದ್ದ ಬಿಎಸ್ಪಿ (ಬಹುಜನ ಸಮಾಜ ಪಾರ್ಟಿ) ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ನಡೆಸಿದ್ದರು. ದಯವಿಟ್ಟು ಅವರನ್ನ ಉಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಸಂಜಯ್ ಗುಪ್ತಾ ಮನವಿ ಮಾಡಿದ್ದಾರೆ. ಇವರು ಲಕ್ಸರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಂಜಯ್ ಗುಪ್ತಾ ಆರೋಪಕ್ಕೆ ಮದನ್ ಕೌಶಿಕ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
Uttarakhand BJP chief Madan Kaushik has worked against several BJP candidates to ensure their defeat in this election. He supported BSP candidate contesting against me. He is a traitor. I demand the BJP leadership to sack him from the party: BJP MLA from Laksar, Sanjay Gupta pic.twitter.com/P5lawEHH1v
— ANI UP/Uttarakhand (@ANINewsUP) February 15, 2022
ನಿನ್ನೆ ಮತದಾನ ಮುಗಿಯುತ್ತಿದ್ದಂತೆ ಮಾತನಾಡಿದ್ದ ಸಿಎಂ ಪುಷ್ಕರ್ ಸಿಂಗ್ ಧಮಿ, ಈ ಚುನಾವಣೆಯಲ್ಲಿ ರಾಜ್ಯದ ಜನರು ದೊಡ್ಡ ಸಂಖ್ಯೆಯಲ್ಲಿ ಮತ ಹಾಕುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಮ್ಮ ಬಿಜೆಪಿಯೇ ಅವರ ಆದ್ಯತೆ ಎಂಬ ನಂಬಿಕೆ ಇದೆ. ಮುಂದೆ ಆಡಳಿತ ನಡೆಸಲಿರುವ ಸರ್ಕಾರ ಈ ಉತ್ತರಾಖಂಡ್ನ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ನಿನ್ನೆ ಉತ್ತರಾಖಂಡ್ನ 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ.62.5ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮಾರ್ಚ್ 10ರಂದು ಮತಎಣಿಕೆ ನಡೆಯಲಿದೆ.
ಇದನ್ನೂ ಓದಿ: ನಾಲ್ಕು ವರ್ಷದ ಬಳಿಕ ಉಗ್ರನರಸಿಂಹನ ದರ್ಶನಕ್ಕೆ ಅವಕಾಶ; ಎದೆ ಎತ್ತರದ ನೀರಿನಲ್ಲೂ 200 ಮೀಟರ್ ಸಾಗಿ ಬಂದ ಭಕ್ತರು
Published On - 9:58 am, Tue, 15 February 22