Corbevax: ಭಾರತಕ್ಕೆ ಇಂದೇ ಕಾರ್ಬ್​ವ್ಯಾಕ್ಸ್ ಪೂರೈಕೆ ಸಾಧ್ಯತೆ; ಸದ್ಯದಲ್ಲೇ ಕಡಿಮೆ ಬೆಲೆಯ ಕೊವಿಡ್ ಲಸಿಕೆ ಲಭ್ಯ

Covid-19 Vaccine: ಹೈದರಾಬಾದ್​ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬ್​ವ್ಯಾಕ್ಸ್​ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್​, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ.

Corbevax: ಭಾರತಕ್ಕೆ ಇಂದೇ ಕಾರ್ಬ್​ವ್ಯಾಕ್ಸ್ ಪೂರೈಕೆ ಸಾಧ್ಯತೆ; ಸದ್ಯದಲ್ಲೇ ಕಡಿಮೆ ಬೆಲೆಯ ಕೊವಿಡ್ ಲಸಿಕೆ ಲಭ್ಯ
ಕಾರ್ಬ್​ವ್ಯಾಕ್ಸ್​ ಲಸಿಕೆ
Follow us
| Updated By: ಸುಷ್ಮಾ ಚಕ್ರೆ

Updated on:Feb 15, 2022 | 12:00 PM

ನವದೆಹಲಿ: ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಸೋಮವಾರ ಬಯೋಲಾಜಿಕಲ್ ಇ (Biological E) ಕೋವಿಡ್ ಲಸಿಕೆಯಾಗಿರುವ ಕಾರ್ಬ್​ವ್ಯಾಕ್ಸ್ (Corbevax) ತುರ್ತು ಬಳಕೆಗೆ ಅನುಮತಿ ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿ 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್​ವ್ಯಾಕ್ಸ್ ಕೊವಿಡ್ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರಕ್ಕೆ ಮೊದಲ ಹಂತದಲ್ಲಿ ಇಂದೇ ಕಾರ್ಬ್​ವ್ಯಾಕ್ಸ್ ಲಸಿಕೆಗಳು ಪೂರೈಕೆಯಾಗುವ ಸಾಧ್ಯತೆಯಿದೆ. ಈ ಕಾರ್ಬ್​ವ್ಯಾಕ್ಸ್​ ಲಸಿಕೆ ಬೇರೆಲ್ಲ ಕೊವಿಡ್ ಲಸಿಕೆಗಳಿಗಿಂತ ಬಹಳ ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಹೆಚ್ಚು ನಿರೀಕ್ಷೆ ಮೂಡಿಸಿದೆ. 

ಹೈದರಾಬಾದ್​ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬ್​ವ್ಯಾಕ್ಸ್​ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್​, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ. ಕಾರ್ಬ್​ವ್ಯಾಕ್ಸ್​ ಲಸಿಕೆಯ 1 ಡೋಸ್​ಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ತಗುಲುತ್ತದೆ. ಬಯಾಲಾಜಿಕಲ್ ಇ ಕಂಪನಿ ಈಗಾಗಲೇ 250 ಮಿಲಿಯನ್ ಕಾರ್ಬ್​ವ್ಯಾಕ್ಸ್​ ಲಸಿಕೆಗಳನ್ನು ಉತ್ಪಾದನೆ ಮಾಡಿದೆ. ಉಳಿದ ಡೋಸ್‌ಗಳನ್ನು ಕೆಲವೇ ವಾರಗಳಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಭಾರತದ ಕೊವಿಡ್ ಲಸಿಕಾ ಅಭಿಯಾನದಲ್ಲಿ ಕಾರ್ಬ್​ವ್ಯಾಕ್ಸ್​ ಲಸಿಕೆಯ ಹೆಸರನ್ನು ಸೇರಿಸಿಲ್ಲ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಅನುಮೋದಿಸಿದೆ. ಇದು ಕೋವಿಡ್-19 ವಿರುದ್ಧ ಭಾರತದಲ್ಲಿ ಮೊದಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ RBD ಪ್ರೋಟೀನ್ ಉಪ-ಘಟಕದ ಕೊವಿಡ್ ಲಸಿಕೆಯಾಗಿದೆ. ಕಳೆದ ವರ್ಷ, ಈ ಕೊವಿಡ್ ಲಸಿಕೆಯ ಡೋಸ್‌ಗಳನ್ನು ಖರೀದಿಸಲು ಹೈದರಾಬಾದ್ ಮೂಲದ ಕಂಪನಿಗೆ ಕೇಂದ್ರ ಸರ್ಕಾರವು 1,500 ಕೋಟಿ ರೂ. ಮುಂಗಡ ಹಣ ಪಾವತಿ ಮಾಡಿದೆ.

ಕಾರ್ಬ್​ವ್ಯಾಕ್ಸ್​ ಲಸಿಕೆಯ 300 ಮಿಲಿಯನ್ ಡೋಸ್‌ಗಳ ಮೊದಲ ಪೂರೈಕೆ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಕಾರ್ಬ್​ವ್ಯಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ರೂಟ್ ಮೂಲಕ ನೀಡಲಾಗುತ್ತದೆ.

ಇದನ್ನೂ ಓದಿ: ಒಂದು ಡೋಸ್​ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್​ವ್ಯಾಕ್ಸ್​ ಲಸಿಕೆಯತ್ತ ಸರ್ಕಾರದ ಗಮನ

Sputnik Vaccine: ಭಾರತದಲ್ಲಿ ಸ್ಪುಟ್ನಿಕ್ ಸಿಂಗಲ್ ಡೋಸ್ ಕೊವಿಡ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ

Published On - 11:59 am, Tue, 15 February 22