Sputnik Vaccine: ಭಾರತದಲ್ಲಿ ಸ್ಪುಟ್ನಿಕ್ ಸಿಂಗಲ್ ಡೋಸ್ ಕೊವಿಡ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ
ಇದು ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡ 9ನೇ ಲಸಿಕೆಯಾಗಿದೆ. ಈ ಲಸಿಕೆಯ ಬಳಕೆಗೆ ಅನುಮತಿ ಸಿಕ್ಕಿರುವುದು ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹೊಸ ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ: ರಷ್ಯಾ ರೂಪಿಸಿರುವ ಕೊರೊನಾ ನಿರೋಧಕ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್ನ (Sputnik) ತುರ್ತು ಬಳಕೆಗೆ ಭಾರತ ಔಷಧ ಮಹಾ ನಿಯಂತ್ರಕರ (Drugs Controller General of India – DCGI) ಅನುಮತಿ ಸಿಕ್ಕಿದೆ. ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯ (Dr Mansukh Mandaviya) ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದು ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡ 9ನೇ ಲಸಿಕೆಯಾಗಿದೆ. ಈ ಲಸಿಕೆಯ ಬಳಕೆಗೆ ಅನುಮತಿ ಸಿಕ್ಕಿರುವುದು ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹೊಸ ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಆಗಿ ನೀಡಲು ಅನುಮತಿಸಬೇಕೆಂದು ಔಷಧ ನಿಯಂತ್ರಿಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಲಸಿಕೆ ಉತ್ಪಾದನೆಗಾಗಿ ಡಾಕ್ಟರ್ ರೆಡ್ಡಿಸ್ ಕಂಪನಿಯು ರಷ್ಯಾದ ಸ್ಪುಟ್ನಿಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಸೆಪ್ಟೆಂಬರ್ 2020ರಿಂದ ರಷ್ಯಾದ ಅನುದಾನದೊಂದಿಗೆ ಸ್ಪುಟ್ನಿಕ್ ಲಸಿಕೆಯ ಟ್ರಯಲ್ಗಳು ನಡೆಯುತ್ತಿದ್ದವು.
‘ಸ್ಪುಟ್ನಿಕ್ ಉತ್ಪಾದನೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ. ಭಾರತ ಸರ್ಕಾರ ಕೇಳಿರುವ ಎಲ್ಲ ಮಾಹಿತಿ ಒದಗಿಸಿದ್ದೇವೆ. ಕೊರೊನಾ ನಿರೋಧಕ ಲಸಿಕೆಯಾಗಿ ಸ್ಪುಟ್ನಿಕ್ ಲೈಟ್ ಮತ್ತು ಬೂಸ್ಟರ್ ಲಸಿಕೆಯಾಗಿ ಸ್ಪುಟ್ನಿಕ್-V ನೀಡಲು ಅನುಮತಿ ಕೋರುತ್ತಿದ್ದೇವೆ’ ಎಂದು ಡಾಕ್ಟರ್ ರೆಡ್ಡಿಸ್ ಕಂಪನಿಯ ಸಿಇಒ ಎರೆಸ್ ಇಸ್ರೇಲಿ ಹೇಳಿದ್ದರು.
ಇತರ ಲಸಿಕೆಗಳನ್ನು ಈ ಮೊದಲು ಪಡೆದಿದ್ದವರಿಗೆ ಸ್ಪುಟ್ನಿಕ ಲಸಿಕೆಯನ್ನು ಬೂಸ್ಟರ್ ಆಗಿ ಕೊಡುವ ಸಾಧ್ಯತೆಯ ಬಗ್ಗೆ ಪರೀಕ್ಷೆ ನಡೆಸಲು ಡಾಕ್ಟರ್ ರೆಡ್ಡಿಸ್ ಅನುಮತಿ ಕೋರಿತ್ತು. ಭಾರತದಲ್ಲಿ ಉತ್ಪಾದನೆಯಾದ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಯಾವುದೇ ನಿರ್ಬಂಧಗಳು ಇಲ್ಲ. ರಫ್ತ ಸಾಧ್ಯತೆಯನ್ನೂ ಡಾಕ್ಟರ್ ರೆಡ್ಡಿಸ್ ಲ್ಯಾಬೊರೇಟರಿಸ್ ಮುಕ್ತವಾಗಿ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದರು.
DCGI has granted emergency use permission to Single-dose Sputnik Light COVID-19 vaccine in India.
This is the 9th #COVID19 vaccine in the country.
This will further strengthen the nation’s collective fight against the pandemic.
— Dr Mansukh Mandaviya (@mansukhmandviya) February 6, 2022
ಇದನ್ನೂ ಓದಿ: ‘ಡೆಲ್ಟಾ ರೂಪಾಂತರಿ ವೈರಾಣು ವಿರುದ್ಧ ಸ್ಪುಟ್ನಿಕ್ ವಿ ಲಸಿಕೆ ಶೇ.83ರಷ್ಟು ಪ್ರಭಾವಶಾಲಿ..‘
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 8,425 ಜನರಿಗೆ ಕೊರೊನಾ ದೃಢ; 47 ಮಂದಿ ಸಾವು
Published On - 9:25 pm, Sun, 6 February 22