ಉಚಿತ ಪಡಿತರ, ನೇರ ನಗದು ವರ್ಗಾವಣೆ ಉತ್ತಮವಾಗಿ ಕೆಲಸ ಮಾಡಿದೆ. ಹಣದುಬ್ಬರದ ಪರಿಣಾಮವು ಭಾರತದ ಬಡವರ ಮೇಲೆ ಅತ್ಯಂತ ಕಡಿಮೆ ಪರಿಣಾಮ ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಯುಎನ್‌ಡಿಪಿ (UNDP) ವರದಿ ಹೇಳಿದೆ ಎಂದು ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ತಿಳಿಸಿದರು. ಹಾಗೂ ಇದೇ ವೇಳೆ ಅವರು ಉಚಿತ ಪಡಿತರ ಮತ್ತು ನೇರ ನಗದು ವರ್ಗಾವಣೆ ಸೇರಿದಂತೆ ಮೋದಿ ಸರ್ಕಾರದ ಉತ್ತಮ ಕಾರ್ಯಕ್ರಮಗಳು ಇದಕ್ಕೆ ಕಾರಣವಾಗಿವೆ ಎಂದರು.
ಇತ್ತೀಚಿನ UNDP ವರದಿಯ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಜನ ಜೀವನ ವೆಚ್ಚದ ಬಿಕ್ಕಟ್ಟು ಭಾರತದಲ್ಲಿನ ಬಡವರ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಇದು ಬಡ ಕುಟುಂಬಗಳಿಗೆ ಬೆಲೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ರು.
A recent UNDP report "Addressing the Cost-of-Living Crisis in Developing Countries" shows that inflation will have only a negligible impact on poverty in India, adding that targeted transfers (such as what India has been doing) help poorer households cope with price spikes. (1/4)
— Nirmala Sitharaman (@nsitharaman) July 12, 2022
ಈ ವರದಿಯು ತಿಳಿಸುವಂತೆ ದಿನಕ್ಕೆ $1.9 ಭಾರತದಲ್ಲಿ ಹಣದುಬ್ಬರವು ಯಾರನ್ನೂ ಕಡಿಮೆ ಬಡತನ ರೇಖೆಗಿಂತ ಕೆಳಕ್ಕೆ ತಳ್ಳುವುದಿಲ್ಲ ಎಂದು ತೋರಿಸುತ್ತದೆ, ಆದರೆ ಜನಸಂಖ್ಯೆಯ 0.02% ಮತ್ತು 0.04% ಜನರು ಕ್ರಮವಾಗಿ $3.3/ದಿನ ಮತ್ತು $5.5/ದಿನದ ಬಡತನದ ರೇಖೆಗಿಂತ ಕೆಳಗೆ ಹೋಗುತ್ತಾರೆ ಎಂದು ಅವರು ಹೇಳಿದ್ರು.
ಆಹಾರ ಮತ್ತು ಇಂಧನ ಹಣದುಬ್ಬರವು ಜಾಗತಿಕವಾಗಿ 71 ಮಿಲಿಯನ್ ಜನರನ್ನು ಬಡತನಕ್ಕೆ ತಳ್ಳಬಹುದು ಎಂದು ವರದಿ ಹೇಳಿದೆ. ಹಾಗೂ “ಉದ್ದೇಶಿತ ಮತ್ತು ಸಮಯಕ್ಕೆ ಸೀಮಿತವಾದ ನಗದು ವರ್ಗಾವಣೆಯು ಪರಿಣಾಮಗಳನ್ನು ಪರಿಹರಿಸಲು ಅತ್ಯಂತ ಪರಿಣಾಮಕಾರಿಯಾದ ಸಾಧನವಾಗಿದೆ.
ಮಹಾಮಾರಿ ಕೊರೊನಾದ ಆರಂಭದಿಂದಲೂ, ಮೋದಿ ಸರ್ಕಾರವು PMGKAY ಮತ್ತು PMGKY ಯೋಜನೆ ಮೂಲಕ ಕೆಳ ವರ್ಗದವರಿಗೆ ಆಹಾರ ವದಿಗಿಸಿದೆ. ಈ ಯೋಜನೆಗಳ ಫಲಿತಾಂಶ ಈ ತಂತ್ರದ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತವೆ ಎಂದು ಹೇಳಿದರು.
Published On - 10:52 pm, Tue, 12 July 22