ದೆಹಲಿ ಡಿಸೆಂಬರ್14: ಬುಧವಾರದಂದು ಕಲಾಪ ನಡೆಯುತ್ತಿದ್ದಾಗ ಸಹವರ್ತಿಯೊಂದಿಗೆ ಲೋಕಸಭೆಗೆ (Parliament security breach) ನುಗ್ಗಿ ಬಣ್ಣದ ಹೊಗೆ ಸೂಸುವ ವಸ್ತು ಸಿಡಿಸಿದ್ದ ಸಾಗರ್ ಶರ್ಮಾ (Sagar Sharma). ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಗನ ಬಂಧನದ ನಂತರ ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಲಕ್ನೋದಲ್ಲಿ ನೆಲೆಸಿರುವ ಸಾಗರ್ ಶರ್ಮಾ ಅವರ ತಂದೆ ರೋಷನ್ ಲಾಲ್ ಶರ್ಮಾ, ತನ್ನ ಮಗ ಇಂಥಾ ದುಷ್ಕೃತ್ಯವನ್ನು ಕೈಗೊಳ್ಳಲು ಬೆಂಗಳೂರಿನ ಸ್ನೇಹಿತರಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಘಟನೆಯ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ರೋಷನ್ ಲಾಲ್ ಶರ್ಮಾ, ಇ-ರಿಕ್ಷಾ ಚಾಲಕ ಸಾಗರ್ ಅವರನ್ನು ತಡೆಯಲು ಕುಟುಂಬದ ಪ್ರಯತ್ನಗಳ ಹೊರತಾಗಿಯೂ ತಾನು ಮಹತ್ವದ ಹೇಳಿಕೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
“ಅವನು ಏನೋ ದೊಡ್ಡದೊಂದು ಮಾಡುವ ಬಗ್ಗೆ ಮಾತನಾಡಿದ್ದ. ಅವನ ಸಹೋದರಿ ಸಾಗರ್ ತಮ್ಮ ಬೆಂಗಳೂರಿನ ಸ್ನೇಹಿತನೊಂದಿಗೆ ಫೋನ್ ಮೂಲಕ ಏನೋ ಪ್ಲಾನ್ ಮಾಡುತ್ತಿರುವುದನ್ನು ಕಂಡುಹಿಡಿದಿದ್ದಳು.
ಕುಟುಂಬಕ್ಕೆ ಅವಮಾನ ತರುವ ಯಾವುದೇ ಕೆಲಸ ಮಾಡಬೇಡ ಎಂದು ತಂದೆ ತನ್ನ ಮಗನಿಗೆ ಎಚ್ಚರಿಕೆ ನೀಡಿದ್ದರು, ಆದರೆ ಅವರ ಮನವಿಗೆ ಕಿವಿಗೊಡಲಿಲ್ಲ. “ಬೆಂಗಳೂರು ಮೂಲದ ಸ್ನೇಹಿತನಿಂದ ಆತನಿಗೆ ಬ್ರೈನ್ ವಾಶ್ ಮಾಡಲಾಗಿದೆ” ಎಂದು ತಂದೆ ಹೇಳಿಕೊಂಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕರೆ ನೀಡಿದರು.
ತನ್ನ ಮಗ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಭಿಮಾನಿಯಾಗಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಎಂದು ಸಾಗರ್ ತಂದೆ ಹೇಳಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಈ ಮಧ್ಯೆ ಸಾಗರ್‌ನ ತಾಯಿ ತನ್ನ ಮಗ ಭಾಗಿಯಾಗಿರುವ ಸುದ್ದಿಯಿಂದ ದಿಗ್ಭ್ರಮೆಗೊಂಡರು. “ನನ್ನ ಮಗ ಹೀಗಿಲ್ಲ” ಎಂದು ಆಕೆ ಹೇಳಿದ್ದಾರೆ. ಹೊರಡುವ ಮೊದಲು, ಸಾಗರ್ ತನ್ನ ತಾಯಿಗೆ ಎರಡು ದಿನಗಳಲ್ಲಿ ಹಿಂತಿರುಗುವುದಾಗಿ ಭರವಸೆ ನೀಡಿದ್ದ .
ಸಾಗರ್ ಅವರ ಸೋದರ ಮಾವ ಕೂಡಾ ಈ ಬಗ್ಗೆ ಮಾತನಾಡಿದ್ದು, ಯುವಕ ತನ್ನ ಸ್ನೇಹಿತರಿಂದ ಮೋಸಗೊಂಡಿದ್ದಾನೆ.ಭದ್ರತಾ ಲೋಪ ಪ್ರಕರಣದಲ್ಲಿ ಸ್ನೇಹಿತರ ಭಾಗಿಯಾಗಿರುವ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು, ಸ್ನೇಹಿತರು ಅವನನ್ನು ದಾರಿ ತಪ್ಪಿಸಿದ್ದಾರೆ ಎಂದಿದ್ದಾರೆ.
ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆಯ ನಂತರ, ಸಾಗರ್ ಶರ್ಮಾ ಅವರ ಕುಟುಂಬದ ಮೇಲೆ ಭದ್ರತಾ ಏಜೆನ್ಸಿಗಳು ನಿಗಾ ಇರಿಸಿವೆ . ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ನಾಲ್ವರು ಸದಸ್ಯರ ತಂಡ ಮತ್ತು ರಾಜ್ಯ ಗುಪ್ತಚರ ಬ್ಯೂರೋದ ಐವರು ಸದಸ್ಯರ ತಂಡ ಅವರನ್ನು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಬಂಧಿತರು ಪ್ರತಾಪ್ ಸಿಂಹ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದರೆಂದ ಎಂ ಲಕ್ಷ್ಮಣ
“ನಮ್ಮನ್ನು ನಿನ್ನೆ ವಿಚಾರಣೆಗೊಳಪಡಿಸಲಾಗಿದೆ. ನಮ್ಮ ಜಿಲ್ಲೆ ಅಥವಾ ರಾಜ್ಯವನ್ನು ಬಿಟ್ಟು ಹೋಗದಂತೆ ಸೂಚನೆ ನೀಡಲಾಗಿದೆ” ಎಂದು ಸಾಗರ್ ತಂದೆ ಹೇಳಿದ್ದಾರೆ. ಸಾಗರ್ ಶರ್ಮಾ ಅವರು ಬೆಂಗಳೂರು ಮತ್ತು ರಾಜಸ್ಥಾನದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಮಾಡ್ಯೂಲ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಗಳನ್ನು ಯುಪಿ ಎಟಿಎಸ್ ತಂಡ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ