ಪರೀಕ್ಷಾ ಪೇ ಚರ್ಚಾಗಾಗಿ ನೋಂದಣಿ ಪ್ರಾರಂಭ; ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಮೋದಿ
Pariksha Pe Charcha: ಪೋಷಕರು ಮತ್ತು ಶಿಕ್ಷಕರೇ, ನಿಮ್ಮ ಭಾಗವಹಿಸುವಿಕೆ ಮುಖ್ಯ. ನಮ್ಮ ವಿದ್ಯಾರ್ಥಿಗಳಿಗೆ ಬೆಂಬಲ ಸಮುದಾಯವನ್ನು ರಚಿಸೋಣ ಮತ್ತು ಪರೀಕ್ಷೆಗಳನ್ನು ಜೀವನದ ಉತ್ಸವವಾಗಿ ಆಚರಿಸೋಣ ಎಂದು ಶಿಕ್ಷಣ ಸಚಿವಾಲಯ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ದೆಹಲಿ ಡಿಸೆಂಬರ್ 14: ಶಿಕ್ಷಣ ಸಚಿವಾಲಯ (MoE) ಪರೀಕ್ಷಾ ಪೇ ಚರ್ಚಾ (Pariksha Pe Charcha PPC 2024) ಯ ಏಳನೇ ಆವೃತ್ತಿಯ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಕಾರ್ಯಕ್ರಮಕ್ಕೆ ನೋಂದಾಯಿಸಲು ಕೊನೆಯ ದಿನಾಂಕ ಜನವರಿ 12, 2024.ಕಾರ್ಯಕ್ರಮ ನಡೆಯುವ ದಿನಾಂಕವನ್ನು ಶಿಕ್ಷಣ ಸಚಿವಾಲಯವು ಶೀಘ್ರದಲ್ಲೇ ಪ್ರಕಟಿಸಲಿದೆ.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಗಮನಕ್ಕೆ! #ParikshaPeCharcha ಸ್ಪರ್ಧೆ 2024 ಪರೀಕ್ಷೆಯ ಒತ್ತಡಕ್ಕೆ ವಿದಾಯ ಹೇಳುವ ಮತ್ತು ಯಶಸ್ಸಿಗೆ ಸ್ಫೂರ್ತಿ ನೀಡುವ ನಿಮ್ಮ ಅವಕಾಶವಾಗಿದೆ! ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯು ಕುತೂಹಲದಿಂದ ಕಾಯುತ್ತಿರುವ ಸಂವಾದಾತ್ಮಕ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಭಾಗಿಯಾಗಿ..ಪೋಷಕರು ಮತ್ತು ಶಿಕ್ಷಕರೇ, ನಿಮ್ಮ ಭಾಗವಹಿಸುವಿಕೆ ಮುಖ್ಯ. ನಮ್ಮ ವಿದ್ಯಾರ್ಥಿಗಳಿಗೆ ಬೆಂಬಲ ಸಮುದಾಯವನ್ನು ರಚಿಸೋಣ ಮತ್ತು ಪರೀಕ್ಷೆಗಳನ್ನು ಜೀವನದ ಉತ್ಸವವಾಗಿ ಆಚರಿಸೋಣ ಎಂದು ಶಿಕ್ಷಣ ಸಚಿವಾಲಯ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
Calling all students, teachers, and parents!
The excitement is palpable as the much-loved stress-buster event #ParikshaPeCharcha makes a grand return with the chance to interact with Hon’ble PM @narendramodi.
Participate in the contest & let the opportunity unfold.
Visit:… pic.twitter.com/T8JIiANQX0
— MyGovIndia (@mygovindia) December 14, 2023
ಈ ಕಾರ್ಯಕ್ರಮವನ್ನು ವಾರ್ಷಿಕವಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಅವಕಾಶ ನೀಡಲಾಗುತ್ತದೆ.
ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು- ವಿದ್ಯಾರ್ಥಿ (ಸ್ವಯಂ ಭಾಗವಹಿಸುವಿಕೆ) ಮತ್ತು ಶಿಕ್ಷಕರ ಲಾಗಿನ್ ಮೂಲಕ ಭಾಗವಹಿಸುವಿಕೆ. 6 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮುಕ್ತವಾಗಿದೆ.
ಏತನ್ಮಧ್ಯೆ, ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗೆ ಗರಿಷ್ಠ 500 ಅಕ್ಷರಗಳಲ್ಲಿ ತಮ್ಮ ಪ್ರಶ್ನೆಗಳನ್ನು ಸಲ್ಲಿಸಬಹುದು. ಪಾಲಕರು ಮತ್ತು ಶಿಕ್ಷಕರು ಕೂಡ ಭಾಗವಹಿಸಬಹುದು ಮತ್ತು ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಆನ್‌ಲೈನ್ ಚಟುವಟಿಕೆಗಳಲ್ಲಿ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ಪೇ ಚರ್ಚಾವು ಯುವಜನರಿಗೆ ಒತ್ತಡ ರಹಿತ ವಾತಾವರಣವನ್ನು ಸೃಷ್ಟಿಸಲು ಪ್ರಧಾನಿ ಮೋದಿ ನೇತೃತ್ವದ ‘ಎಕ್ಸಾಮ್ ವಾರಿಯರ್ಸ್’ ಎಂಬ ಬೃಹತ್ ಆಂದೋಲನದ ಭಾಗವಾಗಿದೆ. ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಬೋರ್ಡ್ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳನ್ನು ಒತ್ತಡ ರಹಿತ ರೀತಿಯಲ್ಲಿ ಭೇದಿಸಲು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಮೋದಿ ಸಂವಾದ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋ
MyGov ನಲ್ಲಿ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯದಿಂದ PPC ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ