ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮದ ಅಂಗವಾಗಿ ಸಚಿವ ಭೂಪೇಂದ್ರ ಸಿಂಗ್ ಯಾದವ್(Bhupendra Singh Yadav) ಅವರು ಫರಿದಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಯೋಗದ ವಿಭಾಗಗಳೆಂದರೆ ಶಾಸನ ಮತ್ತು ಅನುಶಾಸನ. ಶಾಸನ ಎಂದರೆ ಯಾರಾದರೂ ನಿಮ್ಮ ಮೇಲೆ ಹೇರುವ ನಿಯಮಗಳು. ಅನುಶಾಸನವು ನಿಮ್ಮ ಮೇಲೆ ನೀವು ವಿಧಿಸುವ ನಿಯಮವಾಗಿದೆ. ಈ ಸಂದರ್ಭದಲ್ಲಿ ಭೂಪೇಂದ್ರ ಯಾದವ್ ಮಾತನಾಡಿ, ಯೋಗವನ್ನು ಮಾನಸಿಕ ಅಥವಾ ಆಂತರಿಕ ಶಿಸ್ತಿಗಾಗಿ ಮಾಡುತ್ತೇವೆ ಎಂದರು.
ಯೋಗ ಹಾಗೂ ಶಿಸ್ತು
ಯಮ ಎಂಬುದು ಸಮಾಜದೊಂದಿಗೆ ಶಿಸ್ತನ್ನು ಕಲಿಸಿಕೊಡುತ್ತದೆ, ನಿಯಮ ಎಂಬುದು ನಿಮ್ಮೊಳಗೆ ಶಿಸ್ತನ್ನು ಕಲಿಸುತ್ತದೆ. ಆಸನವು ಶರೀರಕ್ಕೆ ಶಿಸ್ತನ್ನು ಕಲಿಸುತ್ತದೆ, ಪ್ರಾಣಾಯಾಮವು ಶ್ವಾಸದೊಂದಿಗೆ ಶಿಸ್ತನ್ನು ಕಲಿಸುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜೂನ್ 21 ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯನ್ನು ಪ್ರಧಾನ ಮಂತ್ರಿ ಮೋದಿ ಮುನ್ನಡೆಸಲಿದ್ದಾರೆ.
ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಗುರಿಯನ್ನು ಅಂತಾರಾಷ್ಟ್ರೀಯ ಯೋಗ ದಿನ ಹೊಂದಿದೆ.
ಮತ್ತಷ್ಟು ಓದಿ: Photos: ಅಮೆರಿಕದಲ್ಲಿ ಶಿಕ್ಷಣ ತಜ್ಞರು ಹಾಗೂ ಆರೋಗ್ಯ ತಜ್ಞರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
ಜೂನ್ 23 ರಂದು ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ವಿಶೇಷ ಆಹ್ವಾನಿತ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ