ಅಪರೂಪ! ಅಂತಾರಾಜ್ಯ ಗಡಿ ಸರಹದ್ದಿನಲ್ಲಿ ಮದುವೆ..!
ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..! ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ. ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು […]
ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..!
ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ.
ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು ಮತ್ತು ತಮಿಳುನಾಡಿನ ವರ ಪರಸ್ಪರ ವಿವಾಹ ಬಂಧನಕ್ಕೆ ಒಳಗಾದರು. ಅದರಂತೆ ಕೇರಳ ಮತ್ತು ತಮಿಳುನಾಡು ಈ ಎರಡು ರಾಜ್ಯಗಳನ್ನು ಸೇರಿಸುವ ಇಡುಕ್ಕಿಯ ಬಾರ್ಡರ್ ನಲ್ಲಿ ಈ ಮದುವೆ ನೆರವೇರಿತು. ನೀವು ನಂಬ್ತೀರೋ ಬಿಡ್ತೀರೋ ಅದೂ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿವಾಹ ಸಮಾರಂಭ ಸಂಪನ್ನವಾಯ್ತು. ಕೊರೊನಾ ಬಿಕ್ಕಟ್ಚಿನ ಕಾರಣ ಹೆಚ್ಚಿನವರು ವಿವಾಹದಲ್ಲಿ ಪಾಲ್ಗೊಳ್ಳಲಿಲ್ಲ.
ಬೆರಳೆಣಿಕೆಯಷ್ಟೇ ಜನರಿದ್ದು ಪೊಲೀಸರ ಸುಪರ್ದಿಯಲ್ಲೇ ಮದುವೆ ನಡೆಯಿತು. ಹೀಗೆ ನಡುಬೀದಿಯಲ್ಲಿ ಹಾರ ಬದಲಾಯಿಸಿ, ನಡುಬೀದಿಯಲ್ಲೇ ಅಕ್ಷತೆ ಹಾಕಿಸಿಕೊಂಡು ಸತಿಪತಿಗಳಾಗಿದ್ದು ಅಂದ್ರೆ ಸುಮ್ನೆನಾ..? ಹೀಗೆ, ವಿಶೇಷವಾಗಿ 2 ರಾಜ್ಯಗಳನ್ನು ಜೋಡಿಸುವ ಈ ಮದುವೆ ಇದೇ ಕಾರಣಕ್ಕೆ ಸುದ್ದಿಯಾಯ್ತು.
-ರಾಜೇಶ್ ಶೆಟ್ಟಿ
Published On - 6:09 pm, Tue, 9 June 20