ಸಹೋದ್ಯೋಗಿಯ 14ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ; ಐಪಿಎಸ್​ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​

|

Updated on: May 19, 2021 | 5:49 PM

ಆರೋಪಿ ಗೌರವ್​ ಉಪಾಧ್ಯಾಯ ಅವರು 2012ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿಯಾಗಿದ್ದು, ಮೂಲತಃ ಉತ್ತರಪ್ರದೇಶದವರು. 2019ರ ಡಿಸೆಂಬರ್​​ನಲ್ಲಿ ಕರ್ಬಿ ಅಂಗ್ಲಾಂಗ್​ ಪೊಲೀಸ್​ ಠಾಣೆಯಲ್ಲಿ ಸುಪರಿಂಟೆಂಡೆಂಟ್​ ಆಗಿದ್ದ ಸಂದರ್ಭದಲ್ಲಿ, ತನ್ನ ಸಹೋದ್ಯೋಗಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಸಹೋದ್ಯೋಗಿಯ 14ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ; ಐಪಿಎಸ್​ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​
ಪ್ರಾತಿನಿಧಿಕ ಚಿತ್ರ
Follow us on

ಸಹೋದ್ಯೋಗಿಯ 14 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿ, ಚಾರ್ಜ್​ಶೀಟ್​ ಹಾಕಿದ್ದಾರೆ. ಈ ಐಪಿಎಸ್​ ಅಧಿಕಾರಿಯ ಹೆಸರು ಗೌರವ್​ ಉಪಾಧ್ಯಾಯ ಎಂದಾಗಿದ್ದು, ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಇವರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಾರ್ಜ್​ಶೀಟ್ ಸಲ್ಲಿಸಲಾಗಿದೆ ಎಂದು ಅಪರಾಧ ತನಿಖಾ ವಿಭಾಗದ ಉಪಅಧೀಕ್ಷಕ ಪ್ರದೀಪ್​ ಕುಮಾರ್​ ದಾಸ್ ತಿಳಿಸಿದ್ದಾರೆ. ಭಾರತೀಯ ದಂಡಸಂಹಿತೆಯ 354, 354 ಎ ಮತ್ತು ಪೊಸ್ಕೊ ಕಾಯ್ದೆಯಡಿ ಮಾರ್ಚ್​ ತಿಂಗಳಲ್ಲಿಯೇ ಚಾರ್ಜ್​ಶೀಟ್ ಹಾಕಲಾಗಿದ್ದರೂ ಇನ್ನೂ ಅದರ ವಿಚಾರಣೆ ಶುರುವಾಗಿಲ್ಲ.

ಆರೋಪಿ ಗೌರವ್​ ಉಪಾಧ್ಯಾಯ ಅವರು 2012ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿಯಾಗಿದ್ದು, ಮೂಲತಃ ಉತ್ತರಪ್ರದೇಶದವರು. 2019ರ ಡಿಸೆಂಬರ್​​ನಲ್ಲಿ ಕರ್ಬಿ ಅಂಗ್ಲಾಂಗ್​ ಪೊಲೀಸ್​ ಠಾಣೆಯಲ್ಲಿ ಸುಪರಿಂಟೆಂಡೆಂಟ್​ ಆಗಿದ್ದ ಸಂದರ್ಭದಲ್ಲಿ, ತನ್ನ ಸಹೋದ್ಯೋಗಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.
ಈ ಬಾಲಕಿಯ ತಾಯಿ ಹಿರಿಯ ಪೊಲೀಸ್​ ಅಧಿಕಾರಿಯಾಗಿದ್ದಾರೆ. 2019ರ ಡಿಸೆಂಬರ್​​ನಲ್ಲಿ ಇವರು ತಮ್ಮ 14ವರ್ಷದ ಮಗಳು ಮತ್ತು 9ವರ್ಷದ ಮಗನೊಂದಿಗೆ ಗೌರವ್​ ಉಪಾಧ್ಯಾಯ ಮಗನ ಹುಟ್ಟುಹಬ್ಬದ ಪಾರ್ಟಿಗಾಗಿ ಬಂದಿದ್ದರು. ಪಾರ್ಟಿಯೆಲ್ಲ ಮುಗಿದ ಬಳಿಕ ಮಹಿಳಾ ಅಧಿಕಾರಿ ವಾಶ್​ರೂಂಗೆ ಹೋದ ಸಂದರ್ಭದಲ್ಲಿ ಅವರ ಮಗಳ ತುಟಿಯ ಮೇಲೆ ಎರಡು ಬಾರಿ ಚುಂಬಿಸಿದ್ದರು. ಆ ಸಮಯದಲ್ಲಿ ಆಕೆಯ ಸಹೋದರ ಅಲ್ಲೇ ಇದ್ದ.
ಅಂದು ಮಧ್ಯರಾತ್ರಿ ಸುಮಾರು 2.30ರಹೊತ್ತಿಗೆ ಉಪಾಧ್ಯಾಯನ ಆ ಮೂವರನ್ನೂ ಅವರು ಬುಕ್​ ಮಾಡಿದ್ದ ಹೋಟೆಲ್​ಗೆ ತಲುಪಿಸಿದ್ದರು. ಹೋಟೆಲ್​ಗೆ ಹೋದ ಬಳಿಕ ಮಹಿಳಾ ಅಧಿಕಾರಿ ಮತ್ತು ಆಕೆಯ ಪುತ್ರ ಬೆಡ್​ರೂಂನಲ್ಲಿ ಇದ್ದಾಗ, ಇವರು ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದರು. ಹಾಗೇ ಮತ್ತೊಮ್ಮೆ ಚುಂಬಿಸಲು ಮುಂದಾದಾಗ ತಪ್ಪಿಸಿಕೊಂಡು, ಬೆಡ್​ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ನಂತರ ಬಾಲಕಿ ತನ್ನ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಳು. ಆಗ ಗೌರವ್​ ಉಪಾಧ್ಯಾಯ ಕ್ಷಮೆಯನ್ನೂ ಕೇಳಿದ್ದರು.

ಆದರೆ ಸ್ವತಃ ಪೊಲೀಸ್ ಅಧಿಕಾರಿಯಾಗಿರುವ ಮಹಿಳೆ 2020 ರ ಜನವರಿ 3ರಂದು ಗುವಾಹಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದಾದ ಬಳಿಕ ಪ್ರಕರಣದ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು. ಗೌರವ್​ ಉಪಾಧ್ಯಾಯ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಇನ್ನು ಈ ಘಟನೆಯ ಬಳಿಕ ಬಾಲಕಿ ಖಿನ್ನತೆಗೆ ಜಾರಿದ್ದಾಳೆ ಎಂದೂ ಹೇಳಲಾಗಿದೆ.\

ಇದನ್ನೂ ಓದಿ: WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ

ಲಾಕ್​ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪ; ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ: ಹೈಕೋರ್ಟ್

 

IPS officer charge sheeted for sexually assault In Assam

Published On - 5:47 pm, Wed, 19 May 21