ಛತ್ತೀಸ್‌ಗಢ (Chhattisgarh) ಕೇಡರ್‌ನ ಹಿರಿಯ ಐಪಿಎಸ್ (IPS) ಅಧಿಕಾರಿ ರವಿ ಸಿನ್ಹಾ (Ravi Sinha), ಸೋಮವಾರ ಭಾರತದ ಬಾಹ್ಯ ಗುಪ್ತಚರ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಹೊಸ ಮುಖ್ಯಸ್ಥರಾಗಿ (R&AW )ನೇಮಕಗೊಂಡಿದ್ದಾರೆ. ಸಿನ್ಹಾ ಅವರು ಜೂನ್ 30 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸಮಂತ್ ಗೋಯೆಲ್ ಅವರ ಉತ್ತರಾಧಿಕಾರಿಯಾಗಲಿರುವ ಸಿನ್ಹಾ ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
ಸಿನ್ಹಾ, 1988 ರ ಬ್ಯಾಚ್ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ, ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯಟ್‌ನ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಗೆ R&AW ಕಾರ್ಯದರ್ಶಿಯಾಗಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Ravi Sinha, IPS (CG:88) to be the new Secretary, Research & Analysis Wing. pic.twitter.com/vEr3hfokZJ
— ANI (@ANI) June 19, 2023
ಎರಡು ವರ್ಷಗಳ ಅವಧಿಗೆR&AW ನೂತನ ಮುಖ್ಯಸ್ಥರಾಗಿ ರವಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ, ಜೂನ್ 30, 2023 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಸಮಂತ್ ಕುಮಾರ್ ಗೋಯೆಲ್ ಅವರ ನಂತರ ಅದೇ ಸ್ಥಾನಕ್ಕೆ ಸಿನ್ಹಾ ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಡ್ತಿಗೆ ಮುನ್ನ ರವಿ ಸಿನ್ಹಾ RAW ನ ಕಾರ್ಯಾಚರಣೆಯ ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ನೆರೆಹೊರೆಯ ತಜ್ಞರೆಂದು ಪರಿಗಣಿಸಲ್ಪಟ್ಟಿರುವ ಅಧಿಕಾರಿಯು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಇತರ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಕೆಲವು ದೇಶಗಳಿಂದ ಸಿಖ್ ಉಗ್ರವಾದವನ್ನು ಬೆದರಿಕೆಯೊಡ್ಡುತ್ತಿರುವ ಸಮಯದಲ್ಲಿ ಸಿನ್ಹಾ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ವಿವಿಯಲ್ಲಿ ನಡೆದ ಜಗಳದಲ್ಲಿ ಇರಿತಕ್ಕೊಳಗಾಗಿ ವಿದ್ಯಾರ್ಥಿ ಸಾವು; ಮಗನನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರಾದ ಅಪ್ಪ
ಸಿನ್ಹಾ ಅವರಿಗಿಂತ ಮುಂಚೆ ಇದ್ದ ಗೋಯೆಲ್ ಅವರನ್ನು ಜೂನ್ 2019 ರಲ್ಲಿ ಎರಡು ವರ್ಷಗಳ ಕಾಲ RAW ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ನಂತರ ಅವರಿಗೆ 2021 ಮತ್ತು ಜೂನ್ 2022 ರಲ್ಲಿ ತಲಾ ಒಂದು ವರ್ಷದ ಎರಡು ವಿಸ್ತರಣೆಗಳನ್ನು ನೀಡಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Mon, 19 June 23