ದೆಹಲಿ: ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲುಗಳನ್ನು (Shri Ramayana Yatra special trains) ನವೆಂಬರ್ 7 ರಂದು ದೆಹಲಿಯಿಂದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಾರಂಭಿಸಿದೆ. ತೀರ್ಥಯಾತ್ರೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ರೈಲು ಹಲವಾರು ಧಾರ್ಮಿಕ ನಗರಗಳಿಗೆ ಈ ರೈಲು ಸಂಚರಿಸಲಿದೆ. ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲಿನ ಮೊದಲ ಪ್ರವಾಸವು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಯಿತು. ಭಗವಾನ್ ರಾಮನ ಜೀವನ ಮತ್ತು ಸಂಸ್ಕೃತ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ನಗರಗಳನ್ನು ರೈಲು ಸಂಪರ್ಕಿಸುತ್ತದೆ. ಶ್ರೀ ರಾಮಾಯಣ ಯಾತ್ರೆ ಯಾತ್ರೆಗೆ ವಿವಿಧ ಪ್ಯಾಕೇಜ್‌ಗಳು ಲಭ್ಯವಿದೆ ಎಂದು
ಐಆರ್ಸಿಟಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಎರಡನೇ ಪ್ರವಾಸ ನವೆಂಬರ್ 16 ರಂದು ಆರಂಭವಾಗಲಿದ್ದು, ಮೂರನೇ ಪ್ರವಾಸ ನವೆಂಬರ್ 25 ರಿಂದ ಆರಂಭವಾಗಲಿದೆ.
ನವೆಂಬರ್ 16 ರಿಂದ ಪ್ರಾರಂಭವಾಗುವ ಶ್ರೀ ರಾಮಾಯಣ ಯಾತ್ರೆ- ಮಧುರೈ ರೈಲು ಪ್ರಯಾಣವು 12 ರಾತ್ರಿಗಳು / 13 ದಿನಗಳು ಮತ್ತು ಶ್ರೀ ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್- ಶ್ರೀ ಗಂಗಾನಗರ ರೈಲು ನವೆಂಬರ್ 25 ರಿಂದ ಪ್ರಾರಂಭವಾಗಲಿದೆ. ಇದು 16 ರಾತ್ರಿಗಳು / 17 ದಿನಗಳನ್ನು ಒಳಗೊಂಡಿವೆ.
ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳು ಇಲ್ಲಿವೆ:
* ಅಯೋಧ್ಯೆ-ಶ್ರೀರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ದೇವಸ್ಥಾನ, ನಂದಿಗ್ರಾಮದಲ್ಲಿ ಭಾರತ ಮಂದಿರ
* ಬಿಹಾರ- ಸೀತಾಮರ್ಹಿ, ರಾಮ- ಜಾನಕಿ ದೇವಸ್ಥಾನ
* ವಾರಣಾಸಿ, ಪ್ರಯಾಗ, ಚಿತ್ರಕೂಟ ಮತ್ತು ಶೃಂಗವೇರಪುರದಲ್ಲಿರುವ ದೇವಾಲಯಗಳು
* ನಾಸಿಕ್- ತ್ರಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿ
* ಹಂಪಿ- ಕೃಷ್ಕಿಂಧಾ ನಗರ
* ರಾಮೇಶ್ವರಂ- ಪ್ರವಾಸದ ಕೊನೆಯ ತಾಣ
ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲಿನ ದರ:
ಭಾರತ ಸರ್ಕಾರದ ‘ದೇಖೋ ಅಪ್ನಾ ದೇಶ್’ ಉಪಕ್ರಮದ ಅಡಿಯಲ್ಲಿ, ಐಆರ್ಸಿಟಿಸಿ ಈ ವಿಶೇಷ ತೀರ್ಥಯಾತ್ರೆ ರೈಲನ್ನು ಪ್ರಾರಂಭಿಸಿದೆ. 2AC ಗೆ ಪ್ರತಿ ವ್ಯಕ್ತಿಗೆ ರೂ 82,950 ಮತ್ತು 1AC ವರ್ಗಕ್ಕೆ ರೂ 1,02,095 ದರಗಳು ಐಆರ್ಸಿಟಿಸಿಯಿಂದ ನಿಗದಿ ಮಾಡಲಾಗಿದೆ. “ಪ್ಯಾಕೇಜ್ ಬೆಲೆಯು AC ಕ್ಲಾಸ್ ರೈಲು ಪ್ರಯಾಣ, AC ಹೋಟೆಲ್‌ಗಳಲ್ಲಿ ವಸತಿ, ಎಲ್ಲಾ ಊಟಗಳು (ಸಸ್ಯಾಹಾರ ಮಾತ್ರ), ಎಲ್ಲಾ ವರ್ಗಾವಣೆ ಮತ್ತು AC ವಾಹನಗಳಲ್ಲಿ ವೀಕ್ಷಣೆ, ಪ್ರಯಾಣ ವಿಮೆ ಮತ್ತು IRCTC ಟೂರ್ ಮ್ಯಾನೇಜರ್‌ಗಳ ಸೇವೆಗಳು ಇತ್ಯಾದಿ, ಎಲ್ಲಾ ಅಗತ್ಯ ಆರೋಗ್ಯ ಸೌಲಭ್ಯವನ್ನು ಒಳಗೊಂಡಿದೆ. ಪ್ರವಾಸದ ಸಮಯದಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಪ್ರಯಾಣವನ್ನು ಒದಗಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು”. ಎಂದು ಐಆರ್ಸಿಟಿಸಿ ಹೇಳಿದೆ.
ಇದನ್ನೂ ಓದಿ: Chhattisgarh News ಛತ್ತೀಸ್‌ಗಡದಲ್ಲಿ ಸಿಆರ್‌ಪಿಎಫ್ ಸಹೋದ್ಯೋಗಿಯಿಂದ ಗುಂಡಿನ ದಾಳಿ: 4 ಯೋಧರು ಸಾವು, ಮೂವರಿಗೆ ಗಾಯ
Published On - 11:13 am, Mon, 8 November 21