IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು

| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2021 | 3:19 PM

Bharat Darshan Special Train: ಐಆರ್‌ಸಿಟಿಸಿ ಪ್ರವಾಸೋದ್ಯಮದ ಪ್ರಕಾರ, ಇದು ದೇಶದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಅತ್ಯಂತ ಉತ್ತಮ, ಎಲ್ಲವನ್ನೂ ಒಳಗೊಂಡ ಪ್ರವಾಸ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ. ಭಾರತ ದರ್ಶನ ವಿಶೇಷ ಪ್ರವಾಸಿ ರೈಲಿನ ಬುಕ್ಕಿಂಗ್ ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ

IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಆಗಸ್ಟ್ 29 ರಿಂದ “ಭಾರತ ದರ್ಶನ್ ವಿಶೇಷ ಪ್ರವಾಸಿ ರೈಲು” (Bharat Darshan Special Tourist Train) ಸಂಚಾರ ಆರಂಭಿಸಲಿದೆ. ಇದು ಹೈದರಾಬಾದ್ – ಅಹಮದಾಬಾದ್ – ನಿಷ್ಕಲಂಕ್ ಮಹಾದೇವ್ ಸಮುದ್ರ ದೇವಸ್ಥಾನ – ಅಮೃತಸರ – ಜೈಪುರ – ಏಕತಾ ಪ್ರತಿಮೆ ಮುಂತಾದ ಸ್ಥಳಗಳಲ್ಲಿ ಸಂಚರಿಸಲಿದೆ. ಒಟ್ಟು ಪ್ರವಾಸದ ಪ್ಯಾಕೇಜ್‌ನ ಬೆಲೆ ₹ 11340 ರಿಂದ ಆರಂಭವಾಗುತ್ತದೆ. ಪ್ರವಾಸವು 29 ಆಗಸ್ಟ್‌ನಲ್ಲಿ ಆರಂಭವಾಗಿ 10 ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ.

ಐಆರ್‌ಸಿಟಿಸಿ ಪ್ರವಾಸೋದ್ಯಮದ ಪ್ರಕಾರ, ಇದು ದೇಶದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಅತ್ಯಂತ ಉತ್ತಮ, ಎಲ್ಲವನ್ನೂ ಒಳಗೊಂಡ ಪ್ರವಾಸ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ. ಭಾರತ ದರ್ಶನ ವಿಶೇಷ ಪ್ರವಾಸಿ ರೈಲಿನ ಬುಕ್ಕಿಂಗ್ ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಐಆರ್‌ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು.


ಪ್ಯಾಕೇಜ್ ವೆಚ್ಚ ಸೇರ್ಪಡೆಗಳು
ಬಜೆಟ್
ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ.
ಧರ್ಮಶಾಲೆಗಳಲ್ಲಿ/ಮಲ್ಟಿ ಶೇರಿಂಗ್ ಆಧಾರದ ಮೇಲೆ ರಾತ್ರಿಯ ವಾಸ್ತವ್ಯ/ಫ್ರೆಶ್ ಅಪ್.
ಬೆಳಿಗ್ಗೆ ಟೀ/ಕಾಫಿ, ಬೆಳಗಿನ ಉಪಾಹಾರ, ಮಧ್ಯಾಹ್ನದೂಟ, ರಾತ್ರಿ ಊಟ ಮತ್ತು ದಿನಕ್ಕೆ 1 ಲೀಟರ್ ಕುಡಿಯುವ ನೀರು.
ಎಸ್ಐಸಿ ಆಧಾರದ ಮೇಲೆ ನಾನ್ ಎಸಿ ರಸ್ತೆ ಸಂಚಾರ
ಟೂರ್ ಎಸ್ಕಾರ್ಟ್ ಮತ್ತು ರೈಲಿನಲ್ಲಿ ಭದ್ರತೆ.
ಪ್ರವಾಸ ವಿಮೆ
ಸ್ಯಾನಿಟೈಜೇಷನ್ ಕಿಟ್

ಪ್ಯಾಕೇಜ್ ಹೊರತಾಗಿ
ವೈಯಕ್ತಿಕ ಅವಶ್ಯಕತೆ ಬಟ್ಟೆ ಒಗೆಯುವುದು, ಔಷಧಗಳು
ಸ್ಮಾರಕಗಳಿಗೆ ಪ್ರವೇಶ ಶುಲ್ಕ, ಬೋಟಿಂಗ್ ಶುಲ್ಕಗಳು
ಪ್ರವಾಸ ಮಾರ್ಗದರ್ಶಿ ಸೇವೆ

ಬೋರ್ಡಿಂಗ್ ಪಾಯಿಂಟ್‌ಗಳು: ಮಧುರೈ, ದಿಂಡಿಗಲ್, ಕರೂರ್, ಈರೋಡ್, ಸೇಲಂ, ಜೋಲಾರಪೇಟೈ, ಕಟಪಾಡಿ, ಎಂಜಿಆರ್ ಚೆನ್ನೈ ಸೆಂಟ್ರಲ್, ನೆಲ್ಲೂರು, ವಿಜಯವಾಡ
ಡಿ-ಬೋರ್ಡಿಂಗ್ ಪಾಯಿಂಟ್‌ಗಳು: ವಿಜಯವಾಡ, ನೆಲ್ಲೂರು, ಪೆರಂಬೂರು, ಕಟಪಾಡಿ, ಜೋಲಾರಪೇಟೈ, ಸೇಲಂ, ಈರೋಡ್, ಕರೂರ್, ದಿಂಡಿಗಲ್, ಮಧುರೈ

ಇದನ್ನೂ ಓದಿ:  ಅಪಾಯಕಾರಿ ಡೆಲ್ಟಾ ಪ್ಲಸ್ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಕೊವ್ಯಾಕ್ಸಿನ್​ ಲಸಿಕೆ: ಐಸಿಎಂಆರ್ ಅಧ್ಯಯನ ವರದಿ

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ‘ಮೊಹರಂ’ಗೆ ನಿರ್ಬಂಧ; ಸುತ್ತೋಲೆಯಲ್ಲಿ ‘ಹಬ್ಬ’ ಪದ ಬಳಕೆಗೆ ಆಕ್ಷೇಪ

(IRCTC will operate a Bharat Darshan Special Tourist Train from 29 August)