ಉತ್ತರ ಪ್ರದೇಶ: ರೈಲಿನ ಕಿಟಕಿ ಮೂಲಕ ಒಳ ನುಗ್ಗಿದ ಕಬ್ಬಿಣದ ರಾಡ್ ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2022 | 5:35 PM

ದೆಹಲಿಯಿಂದ ಕಾನ್ಪುರಕ್ಕೆ ಹೋಗುತ್ತಿದ್ದ ನೀಲಾನಾಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8:45 ಕ್ಕೆ ಈ ಘಟನೆ ನಡೆದಿದೆ.

ಉತ್ತರ ಪ್ರದೇಶ: ರೈಲಿನ ಕಿಟಕಿ ಮೂಲಕ ಒಳ ನುಗ್ಗಿದ ಕಬ್ಬಿಣದ ರಾಡ್ ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು
ರೈಲು ಪ್ರಯಾಣಿಕನ ಕುತ್ತಿಗೆಗೆ ಚುಚ್ಚಿದ ಕಬ್ಬಿಣದ ರಾಡ್
Follow us on

ದೆಹಲಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೋಗಿಯ ಕಿಟಕಿಗೆ ಕಬ್ಬಿಣದ ರಾಡ್ ಅಪ್ಪಳಿಸಿ ಪ್ರಯಾಣಿಕನ ಕುತ್ತಿಗೆಗೆ ಚುಚ್ಚಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಪ್ರಯಾಣಿಕ ಹರಿಕೇಶ್ ಕುಮಾರ್ ದುಬೆ (Harikesh Kumar Dubey) ಎಂಬವರಿಗೆ ಈ ರೀತಿ ರಾಡ್ ಚುಚ್ಚಿದ್ದು ತನ್ನ ಸೀಟಿನ ಮೇಲೆ ರಕ್ತದ ಮಡುವಿನಲ್ಲಿ ಅವರು ಕುಳಿತಿರುವ ಫೋಟೊವನ್ನು ಮಾಧ್ಯಮಗಳು ಪ್ರಕಟಿಸಿವೆ. ದೆಹಲಿಯಿಂದ (Delhi) ಕಾನ್ಪುರಕ್ಕೆ ಹೋಗುತ್ತಿದ್ದ ನೀಲಾನಾಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8:45 ಕ್ಕೆ ಈ ಘಟನೆ ನಡೆದಿದೆ. ರೈಲ್ವೆ ಹಳಿ ಕೆಲಸದಲ್ಲಿ ಬಳಸಲಾಗುತ್ತಿದ್ದ ಕಬ್ಬಿಣದ ರಾಡ್ ಕಿಟಕಿಗೆ ಹೊಡದು ರೈಲಿನೊಳಗೆ ಪ್ರವೇಶಿಸಿ ಆತನ ಕುತ್ತಿಗೆಗೆ ಚುಚ್ಚಿತು. ರೈಲನ್ನು ಅಲಿಘರ್ ಜಂಕ್ಷನ್‌ನಲ್ಲಿ ನಿಲ್ಲಿಸಲಾಯಿತು ಮತ್ತು ಮೃತದೇಹವನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಭಾರತೀಯ ರೈಲ್ವೇಸ್ ತಿಳಿಸಿದೆ.


ಹರಿಕೇಶ್ ದುಬೆ ಕಿಟಕಿಯ ಸೀಟಿನಲ್ಲಿ ಕುಳಿತಿದ್ದಾಗ ಕಬ್ಬಿಣದ ರಾಡ್ ಕಿಟಕಿಯ ಗಾಜುಗಳನ್ನು ಒಡೆದು ಕೋಚ್‌ಗೆ ಪ್ರವೇಶಿಸಿತು ಎಂದು ಹೇಳಲಾಗಿದೆ.

ಪ್ರಯಾಣಿಕ ದುಬೆ ನಿಶ್ಚಿಂತರಾಗಿ  ಕಿಟಕಿಯ ಸೀಟಿನಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಕಬ್ಬಿಣದ ರಸ್ತೆಯು ಕೋಚ್‌ನ ಗಾಜು ತೂರಿ ಅವನ ಕುತ್ತಿಗೆಗೆ ಬಡಿಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಜನರಲ್ ಕೋಚ್‌ನಲ್ಲಿದ್ದ ರಿಷಿಕೇಶ್ ದುಬೆ ಎಂಬ ಪ್ರಯಾಣಿಕ ಬಾಹ್ಯ ವಸ್ತು (ಕಬ್ಬಿಣದ ರಾಡ್) ನಿಂದ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ನಂತರ 09.23 ಗಂಟೆ ಸುಮಾರಿಗೆ ಅಲಿಗಢ ಜಂಕ್ಷನ್‌ನಲ್ಲಿ ರೈಲನ್ನು ನಿಲ್ಲಿಸಿ ಮೃತದೇಹವನ್ನು ಸರ್ಕಾರಿ ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಅಪಘಾತ ಸಂಭವಿಸಿದಾಗ ಹಳಿಯಲ್ಲಿ ಕೆಲವು ಕೆಲಸಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ಆದರೆ, ಘಟನೆಗೆ ಕಾರಣ ಏನು ಎಂಬುದು ಇನ್ನೂ ದೃಢಪಟ್ಟಿಲ್ಲ.

ಇಂತಹ ಘಟನೆ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ  ಕಿಟಕಿಯ ಸೀಟಿನ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಭಾರವಾದ ವಸ್ತುವೊಂದು ಕುತ್ತಿಗೆಗೆ ಬಡಿದು ಸಾವನ್ನಪ್ಪಿದ್ದರು.

ಮತ್ತಷ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Fri, 2 December 22