ಮಹಾರಾಷ್ಟ್ರದಲ್ಲಿ ವೈನ್ ಕುಡಿದು ವಾಹನ ಚಲಾಯಿಸಬಹುದಾ? ಎಂದ ಟ್ವಿಟ್ಟಿಗರಿಗೆ ತಕ್ಕ ಉತ್ತರ ಕೊಟ್ಟ ಮುಂಬೈ ಪೊಲೀಸ್

| Updated By: ಸುಷ್ಮಾ ಚಕ್ರೆ

Updated on: Jan 31, 2022 | 1:13 PM

ಟ್ವಿಟ್ಟಿಗರೊಬ್ಬರು 'ವೈನ್ ಕುಡಿದು ವಾಹನ ಚಲಾಯಿಸಿದರೆ ಅವರನ್ನು ಬಾರ್‌ಗಳ ಹಿಂದೆ ಹಾಕಲಾಗುತ್ತದೆಯೇ? ಅಥವಾ ಹತ್ತಿರದ ಬಾರ್ ದಾರಿ ತೋರಿಸಲಾಗುತ್ತದೆಯೇ?' ಎಂದು ಮುಂಬೈ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಮುಂಬೈ ಪೊಲೀಸರು ನೀಡಿರುವ ಉತ್ತರ ಎಲ್ಲೆಡೆ ಹರಿದಾಡುತ್ತಿದೆ.

ಮಹಾರಾಷ್ಟ್ರದಲ್ಲಿ ವೈನ್ ಕುಡಿದು ವಾಹನ ಚಲಾಯಿಸಬಹುದಾ? ಎಂದ ಟ್ವಿಟ್ಟಿಗರಿಗೆ ತಕ್ಕ ಉತ್ತರ ಕೊಟ್ಟ ಮುಂಬೈ ಪೊಲೀಸ್
ವೈನ್
Follow us on

ಮುಂಬೈ: ಮಹಾರಾಷ್ಟ್ರದ ಸೂಪರ್ ಮಾರ್ಕೆಟ್​ಗಳಲ್ಲಿ ವೈನ್ ಮಾರಾಟಕ್ಕೆ (Wine Sale) ಉದ್ಧವ್ ಠಾಕ್ರೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಬಳಕೆದಾರರು ಮತ್ತು ಮುಂಬೈ ಪೊಲೀಸರ ನಡುವಿನ ಟ್ವೀಟ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್‌ನಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಸಂಜಯ್ ರಾವತ್ ಹೇಳಿಕೆ ಬೆನ್ನಲ್ಲೇ ಟ್ವಿಟ್ಟಿಗರೊಬ್ಬರು ಹಾಗಾದರೆ ಇನ್ನು ಮುಂದೆ ವೈನ್ ಕುಡಿದು ವಾಹನಚಲಾಯಿಸಿದರೆ ದಂಡ ವಿಧಿಸುವುದಿಲ್ಲವೇ? ಎಂದು ಮುಂಬೈ ಪೊಲೀಸರಿಗೆ (Mumbai Police) ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಾದ್ಯಂತ ಸೂಪರ್ ಮಾರ್ಕೆಟ್‌ಗಳು ಮತ್ತು ವಾಕ್-ಇನ್ ಸ್ಟೋರ್‌ಗಳಲ್ಲಿ ವೈನ್ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿದ್ದರು. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಅದರ ಲಾಭ ಮಾತ್ರ ಸಿಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ನಾವು ಈ ನಿರ್ಧಾರ ಮಾಡಿದ್ದೇವೆ. ಬಿಜೆಪಿ ಕೇವಲ ಇದಕ್ಕೆ ವಿರೋಧಿಸುತ್ತದೆ. ಆದರೆ ರೈತರಿಗೆ ಏನನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದ್ದರು.

ಮೈಕ್ರೊಬ್ಲಾಗಿಂಗ್ ಸೈಟ್‌ನಲ್ಲಿ ಸಂಜಯ್ ರಾವತ್ ಮಾಡಿದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಟ್ವಿಟ್ಟಿಗರೊಬ್ಬರು ‘ವೈನ್ ಕುಡಿದು ವಾಹನ ಚಲಾಯಿಸಿದರೆ ಅವರನ್ನು ಬಾರ್‌ಗಳ ಹಿಂದೆ ಹಾಕಲಾಗುತ್ತದೆಯೇ? ಅಥವಾ ಹತ್ತಿರದ ಬಾರ್ ದಾರಿ ತೋರಿಸಲಾಗುತ್ತದೆಯೇ?’ ಎಂದು ಮುಂಬೈ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಮುಂಬೈ ಪೊಲೀಸರು ನೀಡಿರುವ ಉತ್ತರ ಎಲ್ಲೆಡೆ ಹರಿದಾಡುತ್ತಿದೆ.

ಟ್ವಿಟ್ಟಿಗರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು ಯಾವುದನ್ನೇ ಆದರೂ ಕುಡಿಯುವುದು ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಮದ್ಯಪಾನ ಮಾಡಿದ ನಂತರ “ಜವಾಬ್ದಾರಿಯುತ ನಾಗರಿಕ”ನಂತೆ ಯಾವುದಾದರೂ ಕ್ಯಾಬ್ ಅಥವಾ ಡ್ರೈವರ್ ಇರುವ ಕಾರನ್ನು ಹತ್ತಿ ಮನೆಗೆ ಹೋಗುವುದು ಉತ್ತಮ. ಕುಡಿದು ವಾಹನ ಚಲಾಯಿಸುವುದು ನಿಮ್ಮ ಜೀವಕ್ಕೇ ಅಪಾಯಕರ. ಒಂದುವೇಳೆ “ಬ್ರೀತ್‌ಅಲೈಸರ್ ವೈನ್‌ನಲ್ಲಿ ಆಲ್ಕೋಹಾಲ್ ಅಂಶವನ್ನು ಪತ್ತೆಹಚ್ಚಿದರೆ” ನೀವು ಜೈಲಿನ ಬಾರ್ (ಕಂಬಿ)ಗಳ ಹಿಂದೆ ನಮ್ಮ ಅತಿಥಿಯಾಗಬೇಕಾಗುತ್ತದೆ ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿನ ಸೂಪರ್‌ಮಾರ್ಕೆಟ್‌ಗಳು ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದರು. ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಇದರ ಲಾಭ ಸಿಗಲಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದರು. ಈ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಶಿವಸೇನೆ ನೇತೃತ್ವದ ಸರ್ಕಾರ ಮಹಾರಾಷ್ಟ್ರವನ್ನು ಮದ್ಯ-ರಾಷ್ಟ್ರ ಮಾಡಲು ಹೊರಟಿದೆ ಎಂದು ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ವೈನ್ ಆಲ್ಕೋಹಾಲ್ ಅಲ್ಲ ಎಂದಿದ್ದರು.

ಮಹಾರಾಷ್ಟ್ರ ಸಂಪುಟ ಸೂಪರ್​ ಮಾರ್ಕೆಟ್​ಗಳು ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಅಂಗೀಕರಿಸಿತು. ಪೂಜಾ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಮೀಪವಿರುವ ಸೂಪರ್‌ಮಾರ್ಕೆಟ್‌ಗಳಿಗೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ. ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈನ್ ಮಾರಾಟಕ್ಕೂ ಅವಕಾಶವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ: 12 ಬಿಜೆಪಿ ಶಾಸಕರ ಒಂದು ವರ್ಷದ ಅಮಾನತು ರದ್ದು ಮಾಡಿದ ಸುಪ್ರೀಂಕೋರ್ಟ್

ವೈನ್ ಮದ್ಯವಲ್ಲ; ಸೂಪರ್ ಮಾರ್ಕೆಟ್​ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರದ ನಡೆಗೆ ಸಂಜಯ್ ರಾವತ್ ಸಮರ್ಥನೆ