ದೆಹಲಿ, ಜೂ.11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 20ಕ್ಕೆ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಮೋದಿ ನೇತೃತ್ವದಲ್ಲಿ ಎನ್ಡಿಎ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಾಗಿದೆ. ಭಾನುವಾರದಂದು ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಿಸಿದ್ದಾರೆ. ಇದರ ಜತೆಗೆ 72 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನೆನ್ನೆ (ಜೂ.9) ಎಲ್ಲರಿಗೂ ಖಾತೆಯನ್ನು ಕೂಡ ನೀಡಿಲಾಗಿದೆ. ಇಂದು (ಜೂ.10) ಅನೇಕ ಸಚಿವರು ದೆಹಲಿ ಕಚೇರಿಗೆ ಬಂದು ಅಧಿಕೃತವಾಗಿ ಅಧಿಕಾರ ಸ್ವೀಕಾರಿಸಿದ್ದಾರೆ. ಇದರ ನಡುವೆ ಮೋದಿಗೆ ಮತ್ತೊಂದು ಅಗ್ನಿ ಪರೀಕ್ಷೆ ಮುಂದಾಗಿದೆ.
ಇನ್ನು ಈ ದಿನದಂದು ಸ್ಪೀಕರ್ನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರು ಜೂನ್ 18 ಮತ್ತು 19 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಜೂನ್ 21 ರಂದು ರಾಷ್ಟ್ರಪತಿ ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿ ಅವರು ಜೂನ್ 20ಕ್ಕೆ ಒಂದು ಬಾರಿ ತಮ್ಮ ಬಲವನ್ನು ಸಾಬೀತು ಮಾಡಿದ್ರೆ, ಮುಂದಿನ ಆರು ತಿಂಗಳು ಸರ್ಕಾರ ಭದ್ರವಾಗಿರುತ್ತದೆ.
ಪ್ರಧಾನಿ ಮೋದಿ ಅವರು ಭಾನುವಾರ ಮೂರನೇ ಬಾರಿ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಿಸಿದರು. ಇನ್ನು ಇದರ ಜತೆಗೆ 72 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದರಲ್ಲಿ ಕರ್ನಾಟಕಕ್ಕೂ ದೊಡ್ಡ ಪಾಲು ಸಿಕ್ಕಿದೆ. ಕರ್ನಾಟಕದಿಂದ 5 ಜನ ಕೇಂದ್ರ ಮಂತ್ರಿಗಳಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮಾಸ್ಟರ್ ಪ್ಲಾನ್: ಆಂಧ್ರದ ಪುರಂದೇಶ್ವರಿಗೆ ಲೋಕಸಭೆ ಸ್ಪೀಕರ್ ಹುದ್ದೆ? ಟಿಡಿಪಿಗೆ ತೃಪ್ತಿಯಾಗುವುದು ಖಂಡಿತ
ಇನ್ನು ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ದೊಡ್ಡ ಸಾಧನೆ ಮಾಡಿಲ್ಲ. 240 ಸ್ಥಾನಗಳನ್ನು ಪಡೆದುಕೊಂಡು ತೃಪ್ತಿಪಟ್ಟಿದೆ. ಆದರೆ ಎನ್ಡಿಎ ಮೈತ್ರಿಕೂಟ ಒಟ್ಟು ಹೆಚ್ಚು ಸ್ಥಾನ ಪಡೆದಿದೆ. ಸರ್ಕಾರ ರಚನೆಗೆ 36 ಸ್ಥಾನಗಳು ಅಗತ್ಯ ಇದ್ದ ಕಾರಣ ಬಿಜೆಪಿ ಚಂದ್ರಬಾಬು ನಾಯ್ಡು ನೇತೃತ್ವದ ಡಿಟಿಪಿ ಹಾಗೂ ಬಿಹಾರ್ ಮುಖ್ಯಮಂತ್ರಿ ನೀತಿಶ್ ಕುಮಾರ್ ಅವರ ಜೆಡಿಯು ಪಕ್ಷದ ಬೆಂಬಲ ಪಡೆದಿದ್ದಾರೆ. ಇದೀಗ ಈ ಮೈತ್ರಿಕೂಟದ ಬೆಂಬಲ ಮೋದಿ ಸರ್ಕಾರಕ್ಕೆ ಇದೆ ಎಂಬುದನ್ನು ಲೋಕಸಭೆಯಲ್ಲಿ ಜೂನ್ 20ಕ್ಕೆ ಸಾಬೀತು ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Tue, 11 June 24