ಬಿಜೆಪಿ ಮಾಸ್ಟರ್ ಪ್ಲಾನ್: ಆಂಧ್ರದ ಪುರಂದೇಶ್ವರಿಗೆ ಲೋಕಸಭೆ ಸ್ಪೀಕರ್ ಹುದ್ದೆ? ಟಿಡಿಪಿಗೆ ತೃಪ್ತಿಯಾಗುವುದು ಖಂಡಿತ
ಬಿಜೆಪಿಗೆ ದೊಡ್ಡ ತಲೆನೋವಾಗಿದ್ದ , ಲೋಕಸಭೆ ಸ್ವೀಕರ್ ಹುದ್ದೆ, ಇದೀಗ ಬಿಜೆಪಿ ಕೈಯಲ್ಲಿಯೇ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಇದರಿಂದ ಸ್ವೀಕರ್ ಹುದ್ದೆಗೆ ಬೇಡಿಕೆ ಇಟ್ಟಿದ್ದ ಟಿಡಿಪಿಗೆ ತೃಪ್ತಿಯಾಗುವುದು ಖಂಡಿತ, ಅಷ್ಟಕ್ಕೂ ಬಿಜೆಪಿ ಮಾಡಿದ ಪ್ಲಾನ್ ಏನು? ಇಲ್ಲಿದೆ ನೋಡಿ.
ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ಎನ್ಡಿಎ(NDA) ಮೈತ್ರಿಕೂಟಗಳ ಬೆಂಬಲದ ಮೂಲಕ ಸರ್ಕಾರ ರಚನೆ ಮಾಡಲಾಗಿದೆ. ಜತೆಗೆ ಸಚಿವ ಸಂಪುಟ ರಚನೆಯಾಗಿ, ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಇದಕ್ಕೂ ಮುನ್ನ ಮೋದಿ ಸಂಪುಟದಲ್ಲಿ ಎನ್ಡಿಎ ಮೈತ್ರಿಕೂಟ ನಾಯಕರುಗಳಿಗೆ ಪ್ರಮುಖ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೆದಿತ್ತು. ಅದರಲ್ಲಿ ಪ್ರಮುಖವಾಗಿ ಟಿಡಿಪಿ ಹಾಗೂ ಜೆಡಿಯು, ಇದೀಗ ಸಂಪುಟದಲ್ಲಿ ಎರಡು ಪಕ್ಷಕ್ಕೆ ತಲಾ 2-2 ಸ್ಥಾನಗಳನ್ನು ನೀಡಲಾಗಿದೆ. ಟಿಡಿಪಿ ಮಾತ್ರ ಸಚಿವ ಸ್ಥಾನದ ಜತೆಗೆ ಸ್ವೀಕರ್ ಸ್ಥಾನವು ನಮ್ಮ ರಾಜ್ಯಕ್ಕೆ ಬೇಕು ಎಂಬ ಬೇಡಿಕೆಯನ್ನು ಇಟ್ಟಿತ್ತು. ಆದರೆ ಇದೀಗ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ತಂತ್ರಗಾರಿಕೆಯನ್ನು ಮೋದಿ-ಶಾ ಮಾಡಿದ್ದಾರೆ.
ಒಂದು ಕಡೆ ಟಿಡಿಪಿ ಜತೆಗಿನ ಮೈತ್ರಿ, ಇನ್ನೊಂದು ಕಡೆ ಸ್ವೀಕರ್ ಸ್ಥಾನ ಎರಡನ್ನು ಉಳಿಸಿಕೊಳ್ಳುವ ನೆಪದಲ್ಲಿ ಬಿಜೆಪಿ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಿದೆ. ಬಿಜೆಪಿ ಸ್ವೀಕರ್ ಸ್ಥಾನವನ್ನು ತನ್ನಲ್ಲಿ ಉಳಿಸಿಕೊಳ್ಳಲು ಕೌಟುಂಬಿಕ ಅಸ್ತ್ರವನ್ನು ಪ್ರಯೋಗಿಸಿದೆ. ಹೌದು ಲೋಕಸಭೆ ಸ್ವೀಕರ್ ಆಗಿ ಆಂಧ್ರಪ್ರದೇಶದ ಬಿಜೆಪಿಯ ರಾಜ್ಯಾಧ್ಯಕ್ಷೆ ಡಿ.ಪುರಂದೇಶ್ವರಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಡಿ.ಪುರಂದೇಶ್ವರಿ ಹಾಲಿ ರಾಜಮಂಡಿ ಕ್ಷೇತ್ರದ ಸಂಸದೆ ಮತ್ತು ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ ಆಗಿದ್ದು, ಇವರನ್ನು ಲೋಕಸಭೆ ಸ್ವೀಕರ್ಮಾಡುವುದು ಬಿಜೆಪಿಗೆ ಈಗ ಅನಿವಾರ್ಯ ಆಗಿದೆ. ಈ ಮೂಲಕ ಟಿಡಿಪಿಯನ್ನು ಓಲೈಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ. ಹಾಗೂ ಟಿಡಿಪಿಯ ಅಸಮಾಧಾನಗೊಳ್ಳದಂತೆ ನೋಡಿಕೊಳ್ಳಲಿದೆ ಎಂದು ಹೇಳಲಾಗಿದೆ.
ಇಷ್ಟಕ್ಕೂ ಬಿಜೆಪಿ ಒಂದು ವೇಳೆ ಡಿ.ಪುರಂದೇಶ್ವರಿ ಅವರಿಗೆ ಲೋಕಸಭೆ ಸ್ವೀಕರ್ ಸ್ಥಾನ ನೀಡಿದರೆ ಟಿಡಿಪಿ ಯಾಕೆ? ಸಮಾಧಾನಗೊಳ್ಳುತ್ತದೆ ಎಂಬ ಪ್ರಶ್ನೆ ಮೂಡುವುದು ಖಂಡಿತ, ಅದಕ್ಕೆ ಇಲ್ಲಿದೆ ಉತ್ತರ, ಸ್ವೀಕರ್ ಹುದ್ದೆಯನ್ನು ತನ್ನಲ್ಲಿ ಉಳಿಸಿಕೊಳ್ಳಲು ಬಿಜೆಪಿ ಕೌಟುಂಬಿಕ ಅಸ್ತ್ರವನ್ನು ಉಪಯೋಗಿಸಿದೆ ಎಂದು ಹೇಳಲಾಗಿದೆ, ಹೌದು ಪುರಂದೇಶ್ವರಿ ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಪುತ್ರಿ. ಹಾಗೂ ಪುರಂದೇಶ್ವರಿ ಅವರ ಸೋದರಿಯನ್ನೇ ಚಂದ್ರಬಾಬು ನಾಯ್ಡು ಮದುವೆಯಾಗಿರುವುದು. ಈ ಕಾರಣಕ್ಕೆ ಒಂದು ವೇಳೆ ಪುರಂದೇಶ್ವರಿ ಅವರನ್ನು ಲೋಕಸಭೆ ಸ್ವೀಕರ್ ಆಗಿ ಬಿಜೆಪಿ ಆಯ್ಕೆ ಮಾಡಿದರೆ, ಟಿಡಿಪಿ ಇದಕ್ಕೆ ವಿರೋಧಿಸುವುದಿಲ್ಲ ಎಂದು ಹೇಳಲಾಗಿದೆ. ಆಗಾ ಬಿಜೆಪಿ ದಾರಿ ಸುಲಭ, ಸ್ವೀಕರ್ ಸ್ಥಾನವು ತನ್ನಲ್ಲಿಯೇ ಉಳಿತ್ತದೆ, ಹಾಗೂ ಟಿಡಿಪಿ ಇದಕ್ಕೆ ವಿರೋಧಿಸುವುದಿಲ್ಲ.
ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ಪುರಂದೇಶ್ವರಿ ಈ ಬಾರಿಯ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಟಿಡಿಪಿ ಹಾಗೂ ಜನಸೇನಾದ ಜತೆಗೆ ಯಶಸ್ವಿಯಾಗಿ ಮೈತ್ರಿ ಮಾಡಿಕೊಳ್ಳುವುದರ ಜತೆಗೆ, ಬಿಜೆಪಿಗೆ ವಿಧಾನಸಭೆಯಲ್ಲಿ 10 ಸ್ಥಾನದಲ್ಲಿ 8 ಸ್ಥಾನಗಳಲ್ಲಿ ಗೆಲುವು, ಹಾಗೂ ಲೋಕಸಭೆಯಲ್ಲಿ 6 ಸ್ಥಾನಗಳಲ್ಲಿ 3 ಸ್ಥಾನ ಪಡೆಯುವಲ್ಲಿ ಇವರು ದೊಡ್ಡ ಪಾತ್ರವಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ