ಚಾಲಕನ ತಲೆಗೆ ಗುಂಡು ತಗುಲಿದ್ದು ನೋಡಿದ್ದೆವು, ನಾವೂ ಕೂಡ ಸತ್ತಂತೆ ನಟಿಸಿದ್ದೆವು, ರಿಯಾಸಿ ಉಗ್ರ ದಾಳಿ ಬಗ್ಗೆ ಬದುಕುಳಿದವರ ಮಾತು

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಬಸ್​ನಲ್ಲಿದ್ದ ಕೆಲವರು ಮಾಹಿತಿ ನೀಡಿದ್ದಾರೆ. ಚಾಲಕನ ತಲೆಗೆ ಗುಂಡು ತಗುಲಿದ್ದು ಹೇಗೆ, ಬಳಿಕ ಬಸ್​ ಕಂದಕಕ್ಕೆ ಬಿದ್ದಿದ್ದು ಹೇಗೆ ಎಂಬುದರ ಕುರಿತು ತಿಳಿಸಿದ್ದಾರೆ. ಚಾಲಕನ ತಲೆಗೆ ಗುಂಡು ತಗುಲಿದ್ದು ನೋಡಿದ್ದೆವು, ನಾವೂ ಕೂಡ ಸತ್ತಂತೆ ನಟಿಸಿದ್ದೆವು, ರಿಯಾಸಿ ಉಗ್ರ ದಾಳಿ ಬಗ್ಗೆ ಬದುಕುಳಿದವರ ಮಾತು

ಚಾಲಕನ ತಲೆಗೆ ಗುಂಡು ತಗುಲಿದ್ದು ನೋಡಿದ್ದೆವು, ನಾವೂ ಕೂಡ ಸತ್ತಂತೆ ನಟಿಸಿದ್ದೆವು, ರಿಯಾಸಿ ಉಗ್ರ ದಾಳಿ ಬಗ್ಗೆ ಬದುಕುಳಿದವರ ಮಾತು
Follow us
ನಯನಾ ರಾಜೀವ್
|

Updated on: Jun 11, 2024 | 9:25 AM

ಚಾಲಕನ ತಲೆಗೆ ಗುಂಡು ತಗುಲಿ ಸ್ಟೇರಿಂಗ್​ ಮೇಲೆ ಮಲಗಿದ್ದನ್ನು ನಾವು ನೋಡಿದ್ದೆವು, ನಾವೂ ಕೂಡ ಸತ್ತವರಂತೆ ನಟಿಸಿದ್ದೆವು ಎಂದು ಉಗ್ರರ ದಾಳಿ(Terror Attack)ಯಲ್ಲಿ ಬದುಕುಳಿದವರು ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್​ ಮೇಲೆ ಲಷ್ಕರ್ ಎ ತೊಯ್ಬಾ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಬಸ್​ ಮೇಲೆ 30-40 ಬಾರಿ ಗುಂಡಿನ ದಾಳಿ ನಡೆಸಿದ್ದರು, ಪರಿಣಾಮ ಬಸ್​ ಕಂದಕಕ್ಕೆ ಉರುಳಿ 10 ಮಂದಿ ಸಾವನ್ನಪ್ಪಿದ್ದರು. ಯುಪಿಯ ಬಲರಾಂಪುರ್ ಜಿಲ್ಲೆಯವರಾದ ಸಂತೋಷ್ ಕುಮಾರ್ ವರ್ಮಾ ಅವರು, ಮಾತನಾಡಿ ಭಯೋತ್ಪಾದಕರು ಸುತ್ತುವರೆದಾಗ ನಾವು ಬದುಕುವುದಿಲ್ಲ ಅಂದುಕೊಂಡಿದ್ದೆವು ನೋಡ ನೋಡುತ್ತಿದ್ದಂತೆ ಚಾಲಕನ ತಲೆಗೆ ಗುಂಡು ಬಿದ್ದಿತ್ತು ಎಂದು ಆ ಕರಾಳ ದಿನದ ನೆನಪು ಮಾಡಿಕೊಂಡಿದ್ದಾರೆ.

ದಾಳಿಯಲ್ಲಿ ತನ್ನ 14 ವರ್ಷದ ಮಗನನ್ನು ಕಳೆದುಕೊಂಡಿದ್ದೇನೆ ಎಂದು ರಜತ್ ರಾಮ್ ವರ್ಮಾ ಹೇಳಿದ್ದಾರೆ. ಇದ್ದಕ್ಕಿದ್ದಂತೆ, ಉಗ್ರರು ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಯಾರೋ ಕೂಗಿದರು. ನಾನು ತಕ್ಷಣ ನನ್ನ ಹೆಂಡತಿ ಮತ್ತು ಮಗನನ್ನು ಸೀಟಿನ ಕೆಳಗೆ ತಳ್ಳಿದೆ. ಅಷ್ಟಾಗುತ್ತಿದ್ದಂತೆ ಬಸ್​ ಕಂದಕಕ್ಕೆ ಬಿದ್ದಿತ್ತು, ನನ್ನ ಮಗನ ಮೇಲಿನ ಹಿಡಿತ ತಪ್ಪಿತ್ತು.

ಮತ್ತಷ್ಟು ಓದಿ: ರಿಯಾಸಿಯಲ್ಲಿ ನಡೆದ ಉಗ್ರ ದಾಳಿ ಹಿಂದಿದೆ ಪಾಕಿಸ್ತಾನದ ಈ ಭಯೋತ್ಪಾದಕ ಗುಂಪಿನ ಕೈವಾಡ

ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ನೆರಳು ಗುಂಪಿನ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಆರಂಭದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು ಆದರೆ ನಂತರ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿತು. ಮೃತರಲ್ಲಿ ಎರಡು ವರ್ಷದ ಟಿಟು ಸಾಹ್ನಿ ಮತ್ತು ಆತನ ತಾಯಿ ಪೂಜಾ, ಬಸ್ ಚಾಲಕ ಮತ್ತು ಕಂಡಕ್ಟರ್ ಸೇರಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ ಐವರಿಗೆ ಗುಂಡಿನ ಗಾಯಗಳಿದ್ದವು. ಗಾಯಗೊಂಡ 41 ಮಂದಿಯಲ್ಲಿ 10 ಮಂದಿಗೆ ಗುಂಡಿನ ಗಾಯಗಳಾಗಿವೆ.

ಬಸ್​ನಲ್ಲಿ 30-40 ಮಂದಿ ಇದ್ದ ಕುರಿತು ಮಾಹಿತಿ ಲಭ್ಯವಾಗಿದೆ.ಸುಮಾರು 12 ಮಂದಿ ಉಗ್ರರು ಎರಡು ಅಥವಾ ಮೂರು ಗುಂಪುಗಳಾಗಿ ಜಮ್ಮು ಮತ್ತು ಕಾಶ್ಮೀರದ ಅರಣ್ಯ ಪ್ರದೇಶದೊಳಗೆ ಚಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ,. ಹಾಗಾಗಿ ಡ್ರೋನ್​ ವ್ಯವಸ್ಥೆ ಮಾಡಲಾಗಿದ್ದು, ಕಾಡಿನ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಪೂಂಚ್ ಹಾಗೂ ರಜೌರಿಯಲ್ಲಿ ಈ ರೀತಿಯ ಹಲವು ಗುಂಡಿನ ದಾಳಿಗಳು ನಡೆದಿವೆ. ಜೂನ್​ 29ರಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿದ್ದು, ಈ ಕುರಿತು ಗೃಹ ಸಚಿವ ಅಮಿತ್ ಶಾ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ