ಇಸ್ರೋ ಮಹತ್ವದ ಸಾಧನೆ; ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1

|

Updated on: Jul 03, 2024 | 11:52 AM

Aditya L1: ಭಾರತದ ಆದಿತ್ಯ-L1 ತನ್ನ ಮೊದಲ ಹಾಲೋ ಕಕ್ಷೆಯನ್ನು 178 ದಿನಗಳನ್ನು ತೆಗೆದುಕೊಂಡು ಸೂರ್ಯ-ಭೂಮಿ L1 ಸುತ್ತ ಪೂರ್ಣಗೊಳಿಸಿದೆ ಎಂದು ISRO ಘೋಷಿಸಿದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್‌ ಪಾಯಿಂಟ್‌’ನ (L1) ಹ್ಯಾಲೊ ಆರ್ಬಿಟ್ ಮೊದಲ ಸುತ್ತು ಪೂರ್ಣಗೊಳಿಸಿದೆ.

ಇಸ್ರೋ ಮಹತ್ವದ ಸಾಧನೆ; ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1
ಆದಿತ್ಯ ಎಲ್‌ 1
Follow us on

ಬೆಂಗಳೂರು, ಜುಲೈ.03: ಸೆಪ್ಟೆಂಬರ್ 2, 2023 ರಂದು ಉಡಾವಣೆಯಾದ ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 (Aditya L1) ಬಾಹ್ಯಾಕಾಶ ನೌಕೆಯು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆದಿತ್ಯ ಎಲ್–1 ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯನ ಸುತ್ತಲಿನ ಎಲ್‌–1 ಪಾಯಿಂಟ್‌ನ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಮಂಗಳವಾರ ಪ್ರಕಟಿಸಿದೆ.

ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್‌ ಪಾಯಿಂಟ್‌’ನ (L1) ಹ್ಯಾಲೊ ಆರ್ಬಿಟ್ (Halo) ಮೊದಲ ಸುತ್ತು ಪೂರ್ಣಗೊಳಿಸಿದೆ. ಆದಿತ್ಯ ಎಲ್–1 ನೌಕೆಯು ಈ ವರ್ಷದ ಜನವರಿ 6ರಿಂದ ಹ್ಯಾಲೊ ಆರ್ಬಿಟ್ ಪರಿಭ್ರಮಣೆಯನ್ನು ಆರಂಬಿಸಿತ್ತು. ಬಾಹ್ಯಾಕಾಶ ನೌಕೆಯು L1 ಪಾಯಿಂಟ್ ಪರಿಭ್ರಮಣೆ ಪೂರ್ಣಗೊಳಿಸಲು 178 ದಿನಗಳನ್ನು ತೆಗೆದುಕೊಂಡಿದೆ.

ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ (ಯುಆರ್‌ಎಸ್‌ಸಿ)ನಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಫ್ಲೈಟ್ ಡೈನಾಮಿಕ್ಸ್ ಸಾಫ್ಟ್‌ವೇರ್‌ನಿಂದಾಗಿ ಈ ಅಸಾಮಾನ್ಯ ಸಾಧನೆ ಮತ್ತು ನಿರ್ಣಾಯಕ ಕುಶಲತೆಯು ಸಾಧ್ಯವಾಯಿತು. ಕಕ್ಷೆಯನ್ನು ಪೂರ್ಣಗೊಳಿಸುವುದರಿಂದ ಸಾಫ್ಟ್‌ವೇರ್ ಅನ್ನು ಸಂಪೂರ್ಣವಾಗಿ ವಿಶ್ವಾಸಾರ್ಹಗೊಳಿಸಲಾಗಿದೆ ಮತ್ತು ಆದಿತ್ಯ-ಎಲ್1 ಮಿಷನ್‌ಗಳ ಸಾಮರ್ಥ್ಯವನ್ನು ಮೌಲ್ಯೀಕರಿಸಲಾಗಿದೆ.

ಇದನ್ನೂ ಓದಿ: Aditya L1: ಸೂರ್ಯನತ್ತ ಹಾರಿದ ಆದಿತ್ಯ ಎಲ್​ 1 ನೌಕೆ, ಪೋಟೋಗಳಲ್ಲಿ ನೋಡಿ

ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ ಆದಿತ್ಯ ಎಲ್‌ 1 ಮಿಷನ್‌ ಸಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:36 am, Wed, 3 July 24