300ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೇರಳದ ವಯನಾಡಿನ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಅಲ್ಲಿನ ಜನ ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು ಕಳೆದುಕೊಂಡು ದುಃಖಿಯರಾಗಿದ್ದಾರೆ. ಪ್ರಕೃತಿ ಮುನಿಸು ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ವಯನಾಡು ಸಾಕ್ಷಿ. ಇದೀಗ ಈ ಪ್ರವಾಹ ಹೇಗೆ ಸಂಭವಿಸಿತ್ತು ಹಾಗೂ ಪ್ರವಾಹದ ಚಿತ್ರಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹದ ಮೂಲಕ ತೆಗೆದಿದೆ. ಇದೀಗ ಈ ಫೋಟೋವನ್ನು ಹಂಚಿಕೊಂಡಿದೆ.
ವಯನಾಡಿನಲ್ಲಿ ಯಾರು ಊಹಿಸದ ಪ್ರವಾಹ ಸಂಭವಿಸಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಇಸ್ರೋ ತೆಗೆದ ಪೋಟೋದಲ್ಲಿ ಗುಡ್ಡದ ಭಾಗಗಳು ಹಾಗೂ ಭೂಮಿಯೂ 86,000 ಚದರ ಮೀಟರ್ ಜಾರಿದೆ. ಇರುವೈಪುಳ ನದಿಯ ಉದ್ದಕ್ಕೂ ಸುಮಾರು 8 ಕಿಲೋಮೀಟರ್ ವರೆಗೆ ಅನೇಕ ದೇಹಗಳು ಹಾಗೂ ಅವಶೇಷಗಳು ಹರಿದು ಹೋಗಿದೆ ಎಂದು ಹೇಳಿದ್ದಾರೆ.
ಇಸ್ರೋ ತಿಳಿಸಿದ ವರದಿಯಲ್ಲಿ ಇನ್ನೊಂದು ಕುತೂಹಲಕಾರಿ ವಿಷಯ ಕೂಡ ಇದೆ. ಭೂಕುಸಿತಗೊಂಡ ಸ್ಥಳದಲ್ಲಿ ಈ ಹಿಂದೆ ನಡೆದ ಭೂಕುಸಿತ ಪುರವೆಗಳು ಪತ್ತೆಯಾಗಿದೆ. ಅದರ ದಾಖಲೆಗಳನ್ನು ಕೂಡ ಇಸ್ರೋ ತಿಳಿಸಿದೆ. ಹೈದರಬಾದಿನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹದ ಮೂಲಕ ಮೋಡದ ಮಧ್ಯೆ ಈ ಹೈ ರೆಸಲ್ಯೂಶನ್ ಫೋಟೋವನ್ನು ತೆಗೆದಿದೆ ಎಂದು ಹೇಳಲಾಗಿದೆ.
ಇನ್ನು ಈ ಉಪಗ್ರಹ ನೀಡಿದ ವರದಿ ಪ್ರಕಾರ ಸಮುದ್ರ ಮಟ್ಟದಿಂದ 1550 ಮೀಟರ್ ಎತ್ತರದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಇದು ಅದೇ ಸ್ಥಳದಲ್ಲಿ ಹಳೆಯ ಭೂಕುಸಿತದ ಪುರಾವೆಗಳಿವೆ ಎಂದು ಸೂಚಿಸುತ್ತದೆ. ಇಸ್ರೋ ಸಿದ್ಧಪಡಿಸಿದ 2023 ರ ‘ಲ್ಯಾಂಡ್‌ಸ್ಲೈಡ್ ಅಟ್ಲಾಸ್ ಆಫ್ ಇಂಡಿಯಾ’ ವಯನಾಡ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತದೆ ಎಂಬ ಬಗ್ಗೆ ವರದಿಯನ್ನು ಕೂಡ ನೀಡಿತ್ತು.
ಇದನ್ನೂ ಓದಿ: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಲು ಕಾರಣವೇನು?
ಇಸ್ರೋ ಉಪಗ್ರಹ ನೀಡಿರುವ ಫೋಟೋ ಇನ್ನಷ್ಟು ವಿನಾಶ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಸುಮಾರು 86,000 ಚದರ ಮೀಟರ್‌ನಷ್ಟು ಭೂಮಿ ಜಾರಿದೆ. ಇಸ್ರೋ ಈ ಭೂಕುಸಿತವನ್ನು ರಾಷ್ಟ್ರಪತಿ ಭವನದ ಎತ್ತರಕ್ಕೆ ಹೊಲಿಸಿದೆ. ಅಂದರೆ ಈ ಭವನಕ್ಕಿಂತ ಐದು ಪಟ್ಟು ಹೆಚ್ಚು ಭೂಕುಸಿತವಾಗಿದೆ ಎಂದು ಹೇಳಿದೆ. NRSC ವರದಿಗಳು ಹೇಳುವಂತೆ ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಚೂರಲ್ಮಲಾ ಪಟ್ಟಣದಲ್ಲಿ ಮತ್ತು ಸುತ್ತಮುತ್ತ ಭಾರೀ ಮಳೆಯಿಂದ ದೊಡ್ಡ ಭೂಕುಸಿತ ಉಂಟಾಗಲಿದೆ.
ಜುಲೈ 31, 2024ರಂದು ಇಸ್ರೋದ ಉಪಗ್ರಹ ಈ ಚಿತ್ರವನ್ನು ತೆಗೆದಿದೆ. ಇದರಲ್ಲಿ ಶಿಲಾಖಂಡರಾಶಿಗಳು (ಮರ, ನೀರು, ಮಣ್ಣು) ಇರುವನಿಪುಜಾ ನದಿಯ ಹರಿಯುವ ಹಾದಿಯಲ್ಲೇ ಸಾಗಿದೆ. ನದಿಯ ದಡದಲ್ಲಿರುವ, ಮನೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಈ ಶಿಲಾಖಂಡರಾಶಿಗಳು ಕೊಚ್ಚಿಕೊಂಡು ಹೋಗಿದೆ ಎಂದು ಹೇಳಿದೆ. ಭೂಕುಸಿತದ ವಿಸ್ತೀರ್ಣ 86,000 ಚದರ ಮೀಟರ್ ಇದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ