ಗುಡಿಸಲಿಗೆ ನುಗ್ಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಕಚ್ಚಿ ಕೊಂದ ಬೀದಿ ನಾಯಿಗಳು
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಬೀದಿ ನಾಯಿಗಳು ಕೊಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅವರು ಮಲಗಿದ್ದ ಗುಡಿಸಿಲಿಗೆ ನುಗ್ಗಿದ ನಾಯಿಗಳು ದೇಹದ ಹಲವು ಭಾಗಗಳನ್ನು ಕಚ್ಚಿ ತಿಂದಿವೆ. ಮಹಿಳೆ ಅಲ್ಲೇ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯನ್ನು ಬೀದಿನಾಯಿಗಳು ಕಚ್ಚಿ ಕೊಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ರಾಜಣ್ಣ ಸಿರ್ಸಿಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮುಸ್ತಾಬಾದ್ ಮಂಡಲದ ಕೇಂದ್ರ ಕಛೇರಿಯ ಸೇವಾಲಾಲ್ ತಾಂಡಾ ಪ್ರದೇಶದ ತನ್ನ ಗುಡಿಸಲಿನಲ್ಲಿ ಮಲಗಿದ್ದ ವೃದ್ಧೆಯೊಬ್ಬಳನ್ನು ನಾಯಿಗಳ ಹಿಂಡು ಕಚ್ಚಿಹಾಕಿವೆ. ಅವರು ಗುಡಿಸಲಿನಲ್ಲಿ ಮಲಗಿದ್ದಾಗ ಬೀದಿ ನಾಯಿಗಳು ದಾಳಿ ನಡೆಸಿವೆ, ನಾಯಿಗಳು ಅವರ ದೇಹದ ಭಾಗಗಳನ್ನು ತಿಂದು ಬಳಿಕ ಮನೆಯಿಂದ ಹೊರಗೆ ಬಂದಿವೆ.
ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಬಾಲಾನಗರದ ರಾಜೀವ್ ಕಾಲೋನಿಯಲ್ಲಿ ಆರು ಮಕ್ಕಳು ಸೇರಿದಂತೆ 16 ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಸಂಜೆ 5 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ರಾಜೀವ್ ಕಾಲೋನಿಯ ಓಡಿಯಲ್ಲಿ ಬೀದಿನಾಯಿಗಳು ಅಡ್ಡಾಡುತ್ತಿದ್ದವು. ದಾರಿಹೋಕರ ಮೇಲೆ ಏಕಾಏಕಿ ದಾಳಿ ನಡೆಸಲು ಪ್ರಾರಂಭಿಸಿದವು. ಸ್ಥಳೀಯರು ನಾಯಿಯನ್ನು ಓಡಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ.
ಸಾಕು ನಾಯಿ ಕಡಿತದಿಂದ ತಂದೆ ಮಗ ಸಾವು ಒಂದೆಡೆ ಬೀದಿನಾಯಿಗಳ ಕಾಟವಾದರೆ ಇ್ನೊಂದೆಡೆ ಸಾಕು ನಾಯಿಗಳು ಕೂಡ ಕಚ್ಚಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ನಾಯಿ ಕಡಿತದಿಂದ ತಂದೆ ಹಾಗೂ ಮಗ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಮತ್ತಷ್ಟು ಓದಿ: ಒಂದೇ ದಿನ 8 ಮಕ್ಕಳ ಮೇಲೆ ಬೀದಿ ನಾಯಿ ದಾಳಿ; ಚಿಕಿತ್ಸೆ ಫಲಿಸದೆ 4 ವರ್ಷದ ಬಾಲಕಿ ಸಾವು, ಉಳಿದವರಲ್ಲಿ ಆತಂಕ
ವಿಶಾಖಪಟ್ಟಣಂನ ಭೀಮ್ಲಿ ನಿವಾಸಿಗಳಾದ 59 ವರ್ಷದ ನರಸಿಂಗರಾವ್ ಮತ್ತು ಅವರ 27 ವರ್ಷದ ಮಗ ಭಾರ್ಗವ್ಗೆ ಒಂದು ವಾರದ ಹಿಂದೆ ಸಾಕು ನಾಯಿ ಕಚ್ಚಿತ್ತು, ಆದರೆ ಅವರು ವೈದ್ಯಕೀಯ ಚಿಕಿತ್ಸೆ ಪಡೆದಿರಲಿಲ್ಲ.
ಘಟನೆ ನಡೆದು ಎರಡು ದಿನಗಳ ಬಳಿ ನಾಯಿ ಸಾವನ್ನಪ್ಪಿದ್ದು ಆಗ ಆ್ಯಂಟಿ ರೇಬಿಸ್ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ಹೋಗಿದ್ದರು, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ರೇಬಿಸ್ ಅವರ ಮೆದುಳು ಹಾಗೂ ಯಕೃತ್ತಿಗೆ ವ್ಯಾಪಿಸಿತ್ತು, ಚಿಕಿತ್ಸೆ ಒಳಗಾಗಿದ್ದರೂ ಇಬ್ಬರೂ ಮಾರಣಾಂತಿಕ ಸೋಂಕಿಗೆ ಬಲಿಯಾದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ