ರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯ ಕೈಹಿಡಿದು ಐ ಲವ್ ಯೂ ಎಂದಿದ್ದ ಯುವಕನಿಗೆ 2 ವರ್ಷಗಳ ಜೈಲು ಶಿಕ್ಷೆ
ರಸ್ತೆಯಲ್ಲಿ ಬಾಲಕಿಯ ಕೈ ಹಿಡಿದು ಪ್ರೇಮ ನಿವೇದನೆ ಮಾಡಿದ್ದ ವ್ಯಕ್ತಿಗೆ ಪೋಕ್ಸೋ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ರಸ್ತೆಯಲ್ಲಿ ಬಾಲಕಿಯ ಕೈ ಹಿಡಿದು ಐ ಲವ್ ಯೂ ಎಂದಿದ್ದ ಯುವಕನಿಗೆ ಪೋಕ್ಸೋ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2019ರಲ್ಲಿ ಮುಂಬೈನಲ್ಲಿ ಈ ಘಟನೆ ನಡೆದಿತ್ತು, ರಸ್ತೆಯಲ್ಲಿ ಹೋಗುತ್ತಿದ್ದ 14 ವರ್ಷದ ಬಾಲಕಿಗೆ 19 ವರ್ಷದ ಯುವಕ ಪ್ರೇಮ ನಿವೇದನೆ ಮಾಡಿದ್ದ. ಆಕೆಯ ತಾಯಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು, ಅಂಗಡಿಗೆ ಹೋಗಿದ್ದ ಬಾಲಕಿ ಬರುವಾಗ ಅಳುತ್ತಾ ಬಂದಿದ್ದಳು.
ಒಬ್ಬ ವ್ಯಕ್ತಿ ತನ್ನನ್ನು ಕಟ್ಟಡದ ಮೊದಲ ಮಹಡಿಗೆ ಕರೆದೊಯ್ದು, ಅವಳ ಕೈ ಹಿಡಿದು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾಗಿ ಹುಡುಗಿ ತನ್ನ ತಾಯಿಗೆ ತಿಳಿಸಿದ್ದಳು. ಆರೋಪಿ ತಾನು ನಿರಪರಾಧಿ ಎಂದು ಹೇಳಿಕೊಂಡು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ. ಘಟನೆಯ ದಿನ ಆಕೆಯೇ ನನ್ನನ್ನು ಭೇಟಿಯಾಗಲು ಕರೆದಿದ್ದಳು ಎಂದು ವಕೀಲರು ವಾದ ಮಾಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಬಾಲಕಿಯ ಪರ ವಕೀಲರು ವಾದ ಮಂಡಿಸಿ ಒಂದೊಮ್ಮೆ ಆಕೆಗೆ ಯುವಕನ ಜತೆಗೆ ಸಂಬಂಧ ಇದ್ದಿದ್ದರೆ ಆಕೆ ತಾಯಿಗೆ ಈ ಘಟನೆಯನ್ನು ಹೇಳುತ್ತಿರಲಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: ಮನೆಗೆ ನುಗ್ಗಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ
ಘಟನೆ ಬಳಿಕ ಆಕೆಯ ತಾಯಿ ಆರೋಪಿಯೊಂದಿಗೆ ಮಾತನಾಡಲು ಹೋದಾಗ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಎಲ್ಲಾ ವಾದ ಪ್ರತಿವಾದವನ್ನು ಆಲಿಸಿದ ಪೋಕ್ಸೋ ನ್ಯಾಯಾಲಯವು ಆರೋಪಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಶಾಲೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ
16 ವರ್ಷದ ಬಾಲಕಿಯೊಬ್ಬಳು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬಾಲಕಿ ಗರ್ಭಿಣಿಯಾಗಿರುವುದು ಶಾಲೆಯಲ್ಲಿ ಯಾರಿಗೂ ತಿಳಿದಿರಲಿಲ್ಲ, ಇಷ್ಟೊತ್ತಾದರೂ ಶೌಚಾಲಯದಿಂದ ಆಕೆ ಏಕೆ ಬಂದಿಲ್ಲ ಎಂದು ನೋಡಲು ಹೋದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು, ಶಿಶು ಸಾವನಪ್ಪಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ