AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡಿನ ಭೂಕುಸಿತದ ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ, ಇನ್ನಷ್ಟು ವಿನಾಶದ ಸೂಚನೆ

ವಯನಾಡಿನ ಭೀಕರ ಭೂಕುಸಿತದ ಬಗ್ಗೆ ಫೋಟೋವೊಂದನ್ನು ಇಸ್ರೋ ತನ್ನ ಉಪಗ್ರಹ ತೆಗೆದ ಫೋಟೋವನ್ನು ಬಿಡುಗಡೆ ಮಾಡಿದೆ. ಈ ಭೂಕುಸಿತವನ್ನು ರಾಷ್ಟ್ರಪತಿ ಭವನಕ್ಕೆ ಇಸ್ರೋ ಹೋಲಿಸಿದೆ. ಇನ್ನಷ್ಟು ವಿನಾಶವಾಗಲಿದೆ ಎಂದು ಹೇಳಿದೆ. ಅಷ್ಟಕ್ಕೂ ಇಸ್ರೋದ ಉಪಗ್ರಹ ತೆಗೆದ ಫೋಟೋದಲ್ಲಿ ಏನಿದೆ? ಈ ಹಿಂದೆ ಸಂಭವಿಸಿದ ದಾಖಲೆಯನ್ನು ಕೂಡ ಈ ಉಪಗ್ರಹ ಪತ್ತೆ ಮಾಡಿದೆ.

ವಯನಾಡಿನ ಭೂಕುಸಿತದ ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ, ಇನ್ನಷ್ಟು ವಿನಾಶದ ಸೂಚನೆ
ವಯನಾಡಿನ ಭೂಕುಸಿತದ ಉಪಗ್ರಹ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 02, 2024 | 12:29 PM

Share

300ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೇರಳದ ವಯನಾಡಿನ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಅಲ್ಲಿನ ಜನ ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು ಕಳೆದುಕೊಂಡು ದುಃಖಿಯರಾಗಿದ್ದಾರೆ. ಪ್ರಕೃತಿ ಮುನಿಸು ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ವಯನಾಡು ಸಾಕ್ಷಿ. ಇದೀಗ ಈ ಪ್ರವಾಹ ಹೇಗೆ ಸಂಭವಿಸಿತ್ತು ಹಾಗೂ ಪ್ರವಾಹದ ಚಿತ್ರಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹದ ಮೂಲಕ ತೆಗೆದಿದೆ. ಇದೀಗ ಈ ಫೋಟೋವನ್ನು ಹಂಚಿಕೊಂಡಿದೆ.

ವಯನಾಡಿನಲ್ಲಿ ಯಾರು ಊಹಿಸದ ಪ್ರವಾಹ ಸಂಭವಿಸಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಇಸ್ರೋ ತೆಗೆದ ಪೋಟೋದಲ್ಲಿ ಗುಡ್ಡದ ಭಾಗಗಳು ಹಾಗೂ ಭೂಮಿಯೂ 86,000 ಚದರ ಮೀಟರ್ ಜಾರಿದೆ. ಇರುವೈಪುಳ ನದಿಯ ಉದ್ದಕ್ಕೂ ಸುಮಾರು 8 ಕಿಲೋಮೀಟರ್‌ ವರೆಗೆ ಅನೇಕ ದೇಹಗಳು ಹಾಗೂ ಅವಶೇಷಗಳು ಹರಿದು ಹೋಗಿದೆ ಎಂದು ಹೇಳಿದ್ದಾರೆ.

ಇಸ್ರೋ ತಿಳಿಸಿದ ವರದಿಯಲ್ಲಿ ಇನ್ನೊಂದು ಕುತೂಹಲಕಾರಿ ವಿಷಯ ಕೂಡ ಇದೆ. ಭೂಕುಸಿತಗೊಂಡ ಸ್ಥಳದಲ್ಲಿ ಈ ಹಿಂದೆ ನಡೆದ ಭೂಕುಸಿತ ಪುರವೆಗಳು ಪತ್ತೆಯಾಗಿದೆ. ಅದರ ದಾಖಲೆಗಳನ್ನು ಕೂಡ ಇಸ್ರೋ ತಿಳಿಸಿದೆ. ಹೈದರಬಾದಿನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹದ ಮೂಲಕ ಮೋಡದ ಮಧ್ಯೆ ಈ ಹೈ ರೆಸಲ್ಯೂಶನ್ ಫೋಟೋವನ್ನು ತೆಗೆದಿದೆ ಎಂದು ಹೇಳಲಾಗಿದೆ.

ಇನ್ನು ಈ ಉಪಗ್ರಹ ನೀಡಿದ ವರದಿ ಪ್ರಕಾರ ಸಮುದ್ರ ಮಟ್ಟದಿಂದ 1550 ಮೀಟರ್ ಎತ್ತರದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಇದು ಅದೇ ಸ್ಥಳದಲ್ಲಿ ಹಳೆಯ ಭೂಕುಸಿತದ ಪುರಾವೆಗಳಿವೆ ಎಂದು ಸೂಚಿಸುತ್ತದೆ. ಇಸ್ರೋ ಸಿದ್ಧಪಡಿಸಿದ 2023 ರ ‘ಲ್ಯಾಂಡ್‌ಸ್ಲೈಡ್ ಅಟ್ಲಾಸ್ ಆಫ್ ಇಂಡಿಯಾ’ ವಯನಾಡ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತದೆ ಎಂಬ ಬಗ್ಗೆ ವರದಿಯನ್ನು ಕೂಡ ನೀಡಿತ್ತು.

ಇದನ್ನೂ ಓದಿ: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಲು ಕಾರಣವೇನು?

ಇಸ್ರೋ ಉಪಗ್ರಹ ನೀಡಿರುವ ಫೋಟೋ ಇನ್ನಷ್ಟು ವಿನಾಶ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಸುಮಾರು 86,000 ಚದರ ಮೀಟರ್‌ನಷ್ಟು ಭೂಮಿ ಜಾರಿದೆ. ಇಸ್ರೋ ಈ ಭೂಕುಸಿತವನ್ನು ರಾಷ್ಟ್ರಪತಿ ಭವನದ ಎತ್ತರಕ್ಕೆ ಹೊಲಿಸಿದೆ. ಅಂದರೆ ಈ ಭವನಕ್ಕಿಂತ ಐದು ಪಟ್ಟು ಹೆಚ್ಚು ಭೂಕುಸಿತವಾಗಿದೆ ಎಂದು ಹೇಳಿದೆ. NRSC ವರದಿಗಳು ಹೇಳುವಂತೆ ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಚೂರಲ್ಮಲಾ ಪಟ್ಟಣದಲ್ಲಿ ಮತ್ತು ಸುತ್ತಮುತ್ತ ಭಾರೀ ಮಳೆಯಿಂದ ದೊಡ್ಡ ಭೂಕುಸಿತ ಉಂಟಾಗಲಿದೆ.

ಜುಲೈ 31, 2024ರಂದು ಇಸ್ರೋದ ಉಪಗ್ರಹ ಈ ಚಿತ್ರವನ್ನು ತೆಗೆದಿದೆ. ಇದರಲ್ಲಿ ಶಿಲಾಖಂಡರಾಶಿಗಳು (ಮರ, ನೀರು, ಮಣ್ಣು) ಇರುವನಿಪುಜಾ ನದಿಯ ಹರಿಯುವ ಹಾದಿಯಲ್ಲೇ ಸಾಗಿದೆ. ನದಿಯ ದಡದಲ್ಲಿರುವ, ಮನೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಈ ಶಿಲಾಖಂಡರಾಶಿಗಳು ಕೊಚ್ಚಿಕೊಂಡು ಹೋಗಿದೆ ಎಂದು ಹೇಳಿದೆ. ಭೂಕುಸಿತದ ವಿಸ್ತೀರ್ಣ 86,000 ಚದರ ಮೀಟರ್ ಇದೆ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​