ದೆಹಲಿ: 20 ವರ್ಷದ ಯುವತಿಯ ಸ್ಕೂಟಿ, ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ಆಕೆಯನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಐವರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ದೆಹಲಿ (Delhi) ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಒತ್ತಾಯಿಸಿದ್ದಾರೆ. ಈ ರೀತಿ ಎಳೆದುಕೊಂಡು ಹೋದ ಪರಿಣಾಮ ಯುವತಿಯ ದೇಹವು ದಿಲ್ಲಿಯ ಕಂಜಾವಾಲಾದಲ್ಲಿ ಬಟ್ಟೆ ಇಲ್ಲದೆ, ಬೆನ್ನು ಮತ್ತು ಕಾಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಘಟನೆಯನ್ನು ಅಪರೂಪದ ಘಟನೆ ಎಂದು ಕರೆದ ಮುಖ್ಯಮಂತ್ರಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು. ಮಹಿಳೆಗೆ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಅವರನ್ನು ಗಲ್ಲಿಗೇರಿಸಬೇಕು ಎಂದು ಅವರು ಹೇಳಿದರು. ಇದು ಅಪರೂಪದ ಅಪರಾಧವಾಗಿದೆ. ಸಮಾಜವು ಎಲ್ಲಿಗೆ ಹೋಗುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ ಕೇಜ್ರಿವಾಲ್, ಆರೋಪಿಯ ಕಾರಿಗೆ ಆಕೆಯ ಸ್ಕೂಟಿ ಡಿಕ್ಕಿ ಹೊಡೆದು ಒಂದು ಗಂಟೆಗೂ ಹೆಚ್ಚು ಕಾಲ ಎಳೆದೊಯ್ದಿದ್ದರಿಂದ 20 ವರ್ಷದ ಮಹಿಳೆ ಜನವರಿ 1ರಂದು ಸಾವಿಗೀಡಾಗಿದ್ದಳು. ಕಾರಿನಡಿ ಸಿಲುಕಿದ್ದ ಯುವತಿಯನ್ನು ಕಾರು ಚಾಲಕ 18ರಿಂದ 20 ಕಿ.ಮೀ.ವರೆಗೆ ಎಳೆದೊಯ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಕೃತ್ಯವೆಸಗಿದ ಆರೋಪಿಗಳು ಇದ್ದ ಮಾರುತಿ ಸುಜುಕಿ ಬಲೆನೊ ಕಾರನ್ನು ಪತ್ತೆ ಮಾಡಲಾಗಿದ್ದು, ಐವರನ್ನು ಅವರ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ನೋಂದಾಯಿತ ಕಾರು ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಮ್ಮ ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆದರೆ ತಮ್ಮ ಕಾರಿನೊಂದಿಗೆ ಹಲವಾರು ಕಿಲೋಮೀಟರ್‌ಗಳವರೆಗೆ ಯುವತಿಯನ್ನು ಎಳೆದೊಯ್ದಿರುವುದು ಗೊತ್ತಾಗಿಲ್ಲ ಎಂದು ಅವರು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದುಷ್ಕರ್ಮಿಗಳ ಈ ಕೃತ್ಯದಿಂದ ಶಾಕ್ ಆಗಿದ್ದೇನೆ. ಈ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಉಗ್ರರಿಂದ ನಾಲ್ವರ ಹತ್ಯೆ ಬೆನ್ನಲ್ಲೇ ರಜೌರಿಯಲ್ಲಿ ಬಾಂಬ್ ಸ್ಫೋಟ; ಒಂದು ಮಗು ಸಾವು, ಐವರಿಗೆ ಗಾಯ
ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ/ಸಹಾಯ ಮತ್ತು ಅದಕ್ಕೂ ಮೀರಿದ ಭರವಸೆ ನೀಡಲಾಗುವುದು, ಅವಕಾಶವಾದಿ ರೀತಿಯನ್ನು ಆಶ್ರಯಿಸದಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಹೆಚ್ಚು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ಸಮಾಜಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ಅಮನ್ ವಿಹಾರ್ ನಿವಾಸಿ. ಆಕೆ ತಾಯಿ ಮತ್ತು ಕಿರಿಯ ಸಹೋದರರನ್ನು ಅಗಲಿದ್ದಾರೆ. ಅವಳು ದೊಡ್ಡವಳು. ಆಕೆಯ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾದರು. ಪುರುಷರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯ ತಾಯಿ ರೇಖಾ ಆರೋಪಿಸಿದ್ದಾರೆ. “ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದು ಹಾಕಲು ಸಾಧ್ಯವಿಲ್ಲ. ಅವರು ಅವಳನ್ನು ಹುಡುಕಿದಾಗ ಆಕೆಯ ಸಂಪೂರ್ಣ ದೇಹವು ಬೆತ್ತಲೆಯಾಗಿತ್ತು. ನನಗೆ ಸಂಪೂರ್ಣ ತನಿಖೆ ಮತ್ತು ನ್ಯಾಯ ಬೇಕು” ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Mon, 2 January 23