ಆಧಾರ್ ಕಾರ್ಡ್ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರಸರ್ಕಾರ ಸೂಚಿಸಿದೆ. ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್ಗಳು ಲಿಂಕ್ ಆಗದೆ ಇದ್ದರೆ ಬೇಗ ಮಾಡಿಕೊಂಡುಬಿಡಿ, ಯಾಕೆಂದರೆ ನಾಳೆ (ಮಾರ್ಚ್ 31) ಯೇ ಕೊನೇ ದಿನ. ಮಾರ್ಚ್ 31ರೊಳಗೆ ಆಧಾರ್-ಪಾನ್ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. 10,000 ರೂ.ದಂಡವನ್ನೂ ತುಂಬಬೇಕಾಗುತ್ತದೆ.
ಪ್ರಸ್ತುತ ಇರುವ ಕಾನೂನಿನ ಅಡಿ ಆದಾಯ ತೆರಿಗೆ ಸಲ್ಲಿಸಲು (ITR) ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ಗಳು ಲಿಂಕ್ ಆಗಿರುವುದು ಕಡ್ಡಾಯ. ಆದರೆ ಅವರಷ್ಟೇ ಅಲ್ಲದೆ, ಭಾರತದ ಪ್ರತಿ ನಾಗರಿಕನೂ ಕೊಟ್ಟ ಅವಧಿಯ ಒಳಗೆ ಆಧಾರ್-ಪಾನ್ನ್ನು ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಕೇಂದ್ರ ನೇರತೆರಿಗೆಗಳ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ. ಒಂದೊಮ್ಮೆ ಯಾರಾದರೂ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದರೆ, ಅವರಿಗೆ ಯಾವುದೇ ಹಣಕಾಸು ವ್ಯವಹಾರ ಅಂದರೆ ಬ್ಯಾಂಕ್ ಅಕೌಂಟ್ ಓಪನ್ ಮಾಡಲು, ಸರ್ಕಾರದಿಂದ ಸಿಗುವ ಪಿಂಚಣಿ, ಸ್ಕಾಲರ್ಶಿಪ್, ಎಲ್ಪಿಜಿ ಸಬ್ಸಿಡಿ ಪಡೆಯಲು ಪಾನ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲದಂತೆ ಆಗುತ್ತದೆ ಎಂದೂ ತಿಳಿಸಿದೆ.
ನಾಳೆಯೊಳಗೆ ನೀವು ಆನ್ಲೈನ್ ಮೂಲಕವೇ ಆಧಾರ್-ಪಾನ್ ಲಿಂಕ್ ಮಾಡಿಕೊಳ್ಳಬಹುದು. ಅದಕ್ಕೆ ಇಲ್ಲಿದೆ ನೋಡಿ ಮಾರ್ಗ
ಮೊದಲು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ಕಾರ್ಡ್ನ್ನು ರೆಡಿ ಆಗಿಟ್ಟುಕೊಳ್ಳಿ
ಮೊಬೈಲ್ನಲ್ಲಿ ಕೂಡ ಸಿಂಪಲ್ ಆಗಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದಾಗಿದೆ. UIDPAN< ಆಧಾರ್ ಕಾರ್ಡ್ನ 12 ಸಂಖ್ಯೆಗಳು >< ಪಾನ್ ಕಾರ್ಡ್ನ 10 ಡಿಜಿಟ್ಗಳು> ಈ ಫಾರ್ಮೇಟ್ನಲ್ಲಿ ಬರೆದು, 567678 ಅಥವಾ 56161ಕ್ಕೆ ಎಸ್ಎಂಎಸ್ ಮಾಡಿದರೆ ಆಯಿತು.
ಉದಾಹರಣೆಗೆ ನಿಮ್ಮ ಆಧಾರ್ ನಂಬರ್ 108956743120 ಮತ್ತು ಪಾನ್ ನಂಬರ್ ABCD1234F ಎಂದಿಟ್ಟುಕೊಳ್ಳೋಣ. ಈಗ ನೀವು ಮೊದಲು UIDAI ಅಂತ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು, 108956743120 ABCD1234F ಅಂತ ಬರೆದು 567678 or 56161ಕ್ಕೆ ಕಳಿಸಿ. ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆದ ತಕ್ಷಣ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ.
UPSC Recruitment 2021: ಯುಪಿಎಸ್ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
Published On - 12:42 pm, Tue, 30 March 21