Amit Shah in West Bengal: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲಿದೆ: ಅಮಿತ್ ಶಾ
West Bengal Assembly Elections 2021: ಬಿಜೆಪಿ ಕಾರ್ಯಕರ್ತರೊಬ್ಬರ ಹಿರಿವಯಸ್ಸಿನ ಅಮ್ಮನ ಮೇಲೆ ಹಲ್ಲೆ ನಡೆದಿತ್ತು. ಆಕೆ ನಿನ್ನೆ ಮರಣ ಹೊಂದಿದ್ದಾರೆ. ಆದರೆ ಮಮತಾ ದೀದಿ ಮಹಿಳೆಯರ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನರು ಈ ರೀತಿಯ ದ್ವಂದ್ವದ ಬಗ್ಗೆ ಅರಿವು ಇದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನಂದಿಗ್ರಾಮ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುವೇಂದು ಅಧಿಕಾರಿ ಪರ ಚುನಾವಣಾ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಇಲ್ಲಿ 200ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪರಾಭವಗೊಳಿಸಿದರೆ ಇಡೀ ರಾಜ್ಯದ ಪರಿಬೊರ್ತನ್ (ಅಭಿವೃದ್ಧಿ) ಇಲ್ಲಿಂದಲೇ ಆರಂಭವಾಗುತ್ತದೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ.
ನಾನು ಇಲ್ಲಿಗೆ ಬಂದ ಕೂಡಲೇ ದುಃಖದ ಸುದ್ದಿಯೊಂದು ಸಿಕ್ಕಿತು. ಅದೇನೆಂದರೆ ಮಮತಾ ಬ್ಯಾನರ್ಜಿ ವಾಸಿಸುವ ಪ್ರದೇಶದಿಂದ 5 ಕಿಮೀ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಮಮತಾ ಬ್ಯಾನರ್ಜಿ ಈ ಪ್ರದೇಶದಲ್ಲಿ ಇರುವ ಹೊತ್ತಿನಲ್ಲಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಯುವುದಾದರೆ ಇಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿರುತ್ತಾರೆ? ಎಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿದ ಶಾ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರೊಬ್ಬರ ಹಿರಿವಯಸ್ಸಿನ ಅಮ್ಮನ ಮೇಲೆ ಹಲ್ಲೆ ನಡೆದಿತ್ತು. ಆಕೆ ನಿನ್ನೆ ಮರಣ ಹೊಂದಿದ್ದಾರೆ. ಆದರೆ ಮಮತಾ ದೀದಿ ಮಹಿಳೆಯರ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನರು ಈ ರೀತಿಯ ದ್ವಂದ್ವದ ಬಗ್ಗೆ ಅರಿವು ಇದೆ. ಇಡೀ ಬಂಗಾಳ ನುಸುಳುಕಾರರನ್ನು ಬಯಸುವುದಿಲ್ಲ, ಅವರು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವನ್ನು ಬಯಸುತ್ತಿದ್ದಾರೆ ಎಂದಿದ್ದಾರೆ.
ನಂದಿಗ್ರಾಮದಲ್ಲಿ ಇಂದು ಸೇರಿರುವ ಜನಸಮೂಹ ನೋಡಿದರೆ ಸುವೇಂದು ಅಧಿಕಾರಿ ಗೆಲ್ಲುವುದು ಖಚಿತ ಎಂದಿದ್ದಾರೆ ಶಾ. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಜನಸಮೂಹ ಜೈ ಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್, ಅಮಿತ್ ಶಾ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
#WATCH | Union Home Minister & BJP leader Amit Shah holds a roadshow in Nandigram, the Assembly constituency where BJP leader Suvendu Adhikari is contesting against CM & TMC chief Mamata Banerjee.#WestBengalPolls pic.twitter.com/3itmPwCaEK
— ANI (@ANI) March 30, 2021
ಹೂವಿನಿಂದ ಶೃಂಗಾರಗೊಳಸಿದ ವಾಹನದಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಅಮಿತ್ ಶಾ , ಪೂರ್ವ ಮಿಡ್ನಾಪುರದ ಬೆತುರಿಯಾ ಮತ್ತು ರಾಯಪುರ ನಡುವೆ 4 ಕಿಮೀ ರೋಡ್ ಶೋ ನಡೆಸಿದ್ದಾರೆ.
A #SaffronTsunami this afternoon at #Nandigram.
Visuals of Shri @AmitShah’s #MegaRoadShow.#BanglayEbarAsolPoriborton pic.twitter.com/9X7BNP7JdY
— Dharmendra Pradhan (@dpradhanbjp) March 30, 2021
ನಾಲ್ಕು ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 1ರಂದು ಚುನಾವಣೆ ನಡೆಯಲಿದ್ದು, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ. ನಂದಿಗ್ರಾಮ ಸುವೇಂದು ಅವರ ತವರು ಆಗಿದ್ದರೂ, ಭೂಸ್ವಾದೀನದ ವಿರುದ್ಧ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಅವರು ಗೆಲುವು ಸಾಧಿಸಿದ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಪಾಲಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
ಕಳೆದ ಮೂರು ದಿನಗಳಿಂದ ಮಮತಾ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯ, 30 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನದ ನಡೆಯಲಿದೆ. ಮಮತಾ ಬ್ಯಾನರ್ಜಿ ಕಳೆದ ಮೂರು ದಿನಗಳಿಂದ ನಂದಿಗ್ರಾಮ ಬಿಟ್ಟು ಹೊರಗೆ ಹೋಗಿಲ್ಲ. ಸೋಲಿನ ಭಯದಿಂದಾಗಿ ಆಕೆ ಆ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ, ಅದೇ ವೇಳೆ ಚುನಾವಣೆ ನಡೆಯಲಿರುವ ಇತರ ಕ್ಷೇತ್ರಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಮಮತಾ ಪರಾಭವಗೊಳ್ಳಲಿದ್ದಾರೆ. ಎರಡನೇ ಹಂತದ ಮತದಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
Published On - 4:01 pm, Tue, 30 March 21