ಒಂದೇ ಬೆಡ್ನಲ್ಲಿ ಇಬ್ಬರು ಕೊರೊನಾ ರೋಗಿಗಳು; ಕೊವಿಡ್ ಸೋಂಕಿನ ವಿಪರೀತ ಪ್ರಸರಣದಿಂದ ಈ ಆಸ್ಪತ್ರೆಯಲ್ಲಿ ಸಾಲುತ್ತಿಲ್ಲ ವ್ಯವಸ್ಥೆ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ಜಿಲ್ಲೆಗಳಲ್ಲಿ ನಾಗ್ಪುರವೂ ಒಂದು. ಸೋಮವಾರ ಒಂದೇ ದಿನ 31000 ಸೋಂಕಿನ ಕೇಸ್ಗಳ ದಾಖಲಾಗಿವೆ. ಇಲ್ಲಿ ಒಟ್ಟು 2,21,997 ಕೊರೊನಾ ಸೋಂಕಿತರು ಇದ್ದಾರೆ. ವೈರಲ್ ಆದ ಫೋಟೋಗಳನ್ನು ನೋಡಿ ಬಿಜೆಪಿ ಮುಖಂಡ ಚಂದ್ರಕಾಂತ್ ಬಾವಾಂಕುಲೆ ಕಿಡಿಕಾರಿದ್ದಾರೆ.
ನಾಗ್ಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಆಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗುತ್ತಿರುವುದಾಗಿ ವರದಿಯೂ ಆಗಿದೆ. ಈಗ ಅದಕ್ಕೆ ಸಾಕ್ಷಿಯೆಂಬಂತೆ ನಾಗ್ಪುರದ ಆಸ್ಪತ್ರೆಯೊಂದರ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋಗಳು ಕೊರೊನಾ ಭೀಕರತೆಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಈ ಫೋಟೋಗಳು ನಾಗ್ಪುರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (GMCH)ಯದ್ದು ಎನ್ನಲಾಗಿದ್ದು, ಅದರಲ್ಲಿ ಒಂದು ಬೆಡ್ ಮೇಲೆ ಇಬ್ಬರು ಕೊರೊನಾ ರೋಗಿಗಳನ್ನು ಮಲಗಿಸಿದ್ದನ್ನು ನೋಡಬಹುದು..!
ಒಂದು ಸಣ್ಣನೆಯ ಬೆಡ್ನಲ್ಲಿ ಇಬ್ಬರು ಕೊರೊನಾ ಸೋಂಕಿತರು ಮಲಗಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ, ಆಸ್ಪತ್ರೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನೀಡಿ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಇದು ಸ್ವಲ್ಪ ದಿನಗಳ ಹಳೇ ಫೋಟೋ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ದುಬಾರಿಯಾಗಿರುವುದರಿಂದ ಹೆಚ್ಚಿನ ಜನರು ಸರ್ಕಾರಿ ಆಸ್ಪತ್ರೆಯಾದ GMCHಗೆ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಒಂದು ಬೆಡ್ನಲ್ಲಿ ಇಬ್ಬರನ್ನು ಮಲಗಿಸುವ ಪರಿಸ್ಥಿತಿ ಎದುರಾಗಿತ್ತು ಎಂದೂ ತಿಳಿಸಿದ್ದಾರೆ.
GMCHನಲ್ಲಿ ಕೆಲಸದ ಒತ್ತಡ ಜಾಸ್ತಿ ಇದೆ. ಇಲ್ಲಿ ಬೆಡ್ಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದೇವೆ. ಈಗ ಒಂದು ಬೆಡ್ನಲ್ಲಿ ಒಬ್ಬನೇ ರೋಗಿಯನ್ನು ಮಲಗಿಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಗವಾಂಡೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ಜಿಲ್ಲೆಗಳಲ್ಲಿ ನಾಗ್ಪುರವೂ ಒಂದು. ಸೋಮವಾರ ಒಂದೇ ದಿನ 31000 ಸೋಂಕಿನ ಕೇಸ್ಗಳ ದಾಖಲಾಗಿವೆ. ಇಲ್ಲಿ ಒಟ್ಟು 2,21,997 ಕೊರೊನಾ ಸೋಂಕಿತರು ಇದ್ದಾರೆ. ವೈರಲ್ ಆದ ಫೋಟೋಗಳನ್ನು ನೋಡಿ ಬಿಜೆಪಿ ಮುಖಂಡ ಚಂದ್ರಕಾಂತ್ ಬಾವಾಂಕುಲೆ ಕಿಡಿಕಾರಿದ್ದಾರೆ. ಮಹಾರಾಷ್ಟ್ರದಲ್ಲಿ ಉಳಿದ ರೋಗಿಗಳಂತೆಯೇ ಕೊವಿಡ್-19 ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಾಗ್ಪುರ ಆಸ್ಪತ್ರೆಯಲ್ಲಿ ಸಾವು ಕುಣಿಯುತ್ತಿದೆ. ಇಷ್ಟಾದರೂ ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗದಗದಲ್ಲಿ 14 ವರ್ಷದ ಬಾಲಕಿ ಕೊಲೆ ಪ್ರಕರಣ; ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಸಿ.ಸಿ.ಪಾಟೀಲ್