Viral Video: ಗಾಂಭೀರ್ಯದಿಂದ ಹಳಿಗಳ ಮೇಲೆ ಓಡಿದ ‘ಗಜಾನನ ಎಕ್ಸ್ಪ್ರೆಸ್’; ಪ್ರಯಾಣಿಕರನ್ನು ಎಚ್ಚರಿಸಿದ ಐಪಿಎಸ್ ಅಧಿಕಾರಿ
ಈ ವಿಡಿಯೋ ಮಾರ್ಚ್ 27ರಂದು ಪೋಸ್ಟ್ ಆಗಿದ್ದು, ಇಲ್ಲಿಯವರೆಗೆ 23 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಎರಡು ನೂರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಪ್ರಾಣಿಗಳ ವಿಡಿಯೋಗಳಲ್ಲಿ ಅತಿಹೆಚ್ಚಾಗಿ ವೈರಲ್ ಆಗುವುದು ಒಂದು ಕೋತಿಗಳದ್ದು, ಇನ್ನೊಂದು ಆನೆಗಳದ್ದು. ಹಾಗೇ ಈಗ ಹರಿದ್ವಾರ ರೈಲ್ವೆಸ್ಟೇಶನ್ಗೆ ಬಂದ ಒಂಟಿ ಸಲಗದ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗಿದೆ. ಈ ಸಲಗ ರೈಲ್ವೆ ಹಳಿಯ ಮೇಲೆ ಗಾಂಭೀರ್ಯದಿಂದ ಹೋಗುತ್ತಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಪೋಸ್ಟ್ ಮಾಡಿಕೊಂಡಿದ್ದು, ಹಲವರು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ಅನೇಕರು, ನಮಗೆ ನಗು ತಡೆಯಲು ಆಗುತ್ತಿಲ್ಲ ಎನ್ನುತ್ತಿದ್ದಾರೆ.
ಇದು ಹರಿದ್ವಾರ ರೈಲ್ವೆ ಸ್ಟೇಶನ್ ಆಗಿದ್ದು, ಒಂದು ಹಳಿಯ ಮೇಲೆ ರೈಲು ನಿಂತುಕೊಂಡಿದೆ. ಅದರ ಪಕ್ಕದ ಮೇಲೆ ಆನೆ ಹೋಗುತ್ತಿದೆ. ವಿಡಿಯೋ ಶೇರ್ ಮಾಡಿಕೊಂಡ ಐಪಿಎಸ್ ಅಧಿಕಾರಿ, ಗಜಾನನ ಎಕ್ಸ್ಪ್ರೆಸ್ ಕೆಲವೇ ಕ್ಷಣಗಳಲ್ಲಿ ಫ್ಲ್ಯಾಟ್ಫಾರಂ ನಂಬರ್ 6ನ್ನು ಹಾದುಹೋಗಲಿದ್ದು, ಪ್ರಯಾಣಿಕರು ತಮ್ಮ ಮೊಬೈಲ್, ಕ್ಯಾಮರಾವನ್ನು ಅಲರ್ಟ್ ಆಗಿಟ್ಟುಕೊಳ್ಳಿ. ಯಾವುದಕ್ಕೂ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದು ಫನ್ನಿಯಾಗಿ ಕ್ಯಾಪ್ಷನ್ ಬರೆದಿದ್ದಾರೆ.
ಈ ವಿಡಿಯೋ ಮಾರ್ಚ್ 27ರಂದು ಪೋಸ್ಟ್ ಆಗಿದ್ದು, ಇಲ್ಲಿಯವರೆಗೆ 23 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಎರಡು ನೂರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಹಾಗೇ, ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
यात्रीगण कृपया ध्यान दें, #गजानन_एक्सप्रेस कुछ ही समय मे प्लेटफार्म नंबर 6 से गुज़रेगी. अपने-अपने कैमरे निकाल लें और सुरक्षित दूरी बनाकर रखें… ?? pic.twitter.com/49xEve13pP
— Dipanshu Kabra (@ipskabra) March 27, 2021
ಇದನ್ನೂ ಓದಿ:ಸಿಡಿ ಪ್ರಕರಣದ ಯುವತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಸಾಧ್ಯತೆ; ನನಗೆ ಸುಸ್ತಾಗ್ತಿದೆ ಎಂದ ಯುವತಿ
Published On - 5:31 pm, Tue, 30 March 21