ಬಿಹಾರ್, ಜಾರ್ಖಂಡ್ ಆರೋಗ್ಯ ಕ್ಷೇತ್ರದ ಸುಧಾರಣೆಗೆ ₹ 1 ಕೋಟಿ ದೇಣಿಗೆ ನೀಡಿದ ಅನಿವಾಸಿ ಭಾರತೀಯರು
ಅಮೆರಿಕದ ಟೆಕ್ಸಾಸ್ನಲ್ಲಿ ಯಶಸ್ವಿ ಉದ್ಯಮಿಯಾಗಿರುವ ಭಾಟಿಯಾ ಮೂಲತಃ ಪಾಟ್ನಾದವರು. ಅಮೆರಿಕದ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ.
ಪಾಟ್ನಾ: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಆರೋಗ್ಯ ಸುಧಾರಣೆಗೆಂದು ₹ 1 ಕೋಟಿ ದೇಣಿಗೆ ನೀಡಿದ್ದಾರೆ. ಈ ವಿಷಯವನ್ನು ‘ಉತ್ತರ ಅಮೆರಿಕದ ಬಿಹಾರ ಜಾರ್ಖಂಡ್’ ಒಕ್ಕೂಟ ತಿಳಿಸಿದೆ. ರಮೇಶ್ ಮತ್ತು ಕಲ್ಪನಾ ಭಾಟಿಯಾ ಕುಟುಂಬದ ಟ್ರಸ್ಟ್ ಬಿಹಾರ ಜಾರ್ಖಂಡ್ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಪರಿಸ್ಥಿತಿ ಸುಧಾರಣೆಗೆ 1,50,000 ಅಮೆರಿಕ ಡಾಲರ್ ಮೊತ್ತದಷ್ಟು ದೇಣಿಗೆಯನ್ನು ನೀಡಿದೆ ಎಂದು ಒಕ್ಕೂಟ ಹೇಳಿದೆ. ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸಲೆಂದು ಸಮಾನಮನಸ್ಕ ಭಾರತೀಯರು ‘ಪ್ರವಾಸಿ ಅಲ್ಯುಮ್ನಿ ನಿಶ್ಯುಲ್ಕ್’ ವೇದಿಕೆ ಸ್ಥಾಪಿಸಿಕೊಂಡಿದ್ದಾರೆ.
ರಾಂಚಿಯಲ್ಲಿ ಈ ವೇದಿಕೆಯು ಕ್ಲಿನಿಕ್ ಸ್ಥಾಪಿಸಿದ್ದು ಅಗತ್ಯವಿರುವವರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ಎರಡೂ ರಾಜ್ಯಗಳಲ್ಲಿ ಆರೋಗ್ಯ ಸೌಲಭ್ಯ ಸುಧಾರಿಸಬೇಕು. ಅಗತ್ಯವಿರುವ ಎಲ್ಲರಿಗೂ ಉಚಿತ ಮತ್ತು ಉತ್ತಮ ಆರೋಗ್ಯ ಸಿಗಬೇಕು ಎಂಬ ಉದ್ದೇಶದಿಂದ ಅನಿವಾಸಿ ಭಾರತೀಯರು ನೆರವು ನೀಡಲು ಮುಂದಾಗಿದ್ದಾರೆ.
ರಮೇಶ್ ಮತ್ತು ಕಲ್ಪನಾ ಭಾಟಿಯಾ ಅವರ ಉದಾರ ದೇಣಿಗೆಯಿಂದ ಎರಡೂ ರಾಜ್ಯಗಳಲ್ಲಿ ತಕ್ಕಮಟ್ಟಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿದೆ. ಆರೋಗ್ಯ ಸೇವೆಗಳನ್ನು ಸುಧಾರಿಸುವ ಪ್ರಯತ್ನಕ್ಕೆ ಈಚಿನ ದಿನಗಳಲ್ಲಿ ಅಮೆರಿಕ ಮತ್ತು ಭಾರತದಲ್ಲಿಯೂ ಸಾಕಷ್ಟು ಮಂದಿ ಧನ ಸಹಾಯ ಮಾಡುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಅವಿನಾಶ್ ಗುಪ್ತ ಹೇಳಿದ್ದಾರೆ.
ಅಮೆರಿಕದ ಟೆಕ್ಸಾಸ್ನಲ್ಲಿ ಯಶಸ್ವಿ ಉದ್ಯಮಿಯಾಗಿರುವ ಭಾಟಿಯಾ ಮೂಲತಃ ಪಾಟ್ನಾದವರು. ಅಮೆರಿಕದ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಮಸೂದೆ ಮಂಡನೆ ವಿರೋಧಿಸಿ ಬಿಹಾರ ವಿಧಾನಸಭೆಯಲ್ಲಿ ಗದ್ದಲ; ಪೊಲೀಸರ ಲಾಠಿ ಪ್ರಹಾರ ಖಂಡಿಸಿದ ಅಖಿಲೇಶ್ ಯಾದವ್
ಇದನ್ನೂ ಓದಿ: ಬಿಹಾರದಲ್ಲಿ ಕೊರೊನಾ ಲಸಿಕೆ ಉಚಿತ : ಚುನಾವಣಾ ಭರವಸೆ ಉಳಿಸಿಕೊಂಡ ನಿತೀಶ್ ಸರ್ಕಾರ
Published On - 4:05 pm, Tue, 30 March 21