ಬಿಹಾರದಲ್ಲಿ ಕೊರೊನಾ ಲಸಿಕೆ ಉಚಿತ : ಚುನಾವಣಾ ಭರವಸೆ ಉಳಿಸಿಕೊಂಡ ನಿತೀಶ್ ಸರ್ಕಾರ
ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಚುನಾವಣಾ ಪೂರ್ವ ಭರವಸೆ ಈಡೇರಿಸಲು ಮುಂದಾಗಿದ್ದು, ಉಚಿತವಾಗಿ ಲಸಿಕೆ ನೀಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪಾಟ್ನಾ: ಬಿಹಾರದ ಸರ್ಕಾರಿ ಆಸ್ಪತ್ರೆಗಳಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಉಚಿತವಾಗಿ ಕೊವಿಡ್ ಲಸಿಕೆ ನೀಡಿದ್ದು, ಲಸಿಕೆಯ ವೆಚ್ಚವನ್ನು ಬಿಹಾರ ಸರ್ಕಾರ ಭರಿಸಲಿದೆ. ಆ ಮೂಲಕ ಪ್ರತಿಯೊಂದು ಆಸ್ಪತ್ರೆಗೂ ಲಸಿಕೆ ಸಾಮರ್ಥ್ಯ ಒದಗಿಸಬೇಕು ಎಂಬ ನಿರ್ಧಾರವನ್ನು ಇಲ್ಲಿನ ಸರ್ಕಾರ ಮಾಡಿದೆ.
ಬಿಹಾರ ಸರ್ಕಾರ ವಿಧಾನ ಸಭಾ ಚುನಾವಣೆ ವೇಳೆ ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡುವ ಭರವಸೆ ನೀಡಿತ್ತು. ಅದರಂತೆ ಈಗ ಅಸ್ತಿತ್ವದಲ್ಲಿರುವ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಚುನಾವಣಾ ಪೂರ್ವ ಭರವಸೆ ಈಡೇರಿಸಲು ಮುಂದಾಗಿದ್ದು, ಉಚಿತವಾಗಿ ಲಸಿಕೆ ನೀಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಇಂದಿನಿಂದ ದೇಶಾದ್ಯಂತ ಎರಡನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗಿದೆ. 60 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, ಮಧುಮೇಹ ಸೇರಿದಂತೆ ಕೋವಿಡೇತರ 20 ಕಾಯಿಲೆಯನ್ನು ಎದುರಿಸುತ್ತಿರುವ 45ರಿಂದ 59 ವರ್ಷದೊಳಗಿನವರಿಗೂ ಲಸಿಕೆ ನೀಡಲಿದ್ದಾರೆ. ದೇಶದ 10000 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗಿದ್ದು, 25000 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗಿದೆ.
ಎರಡನೆ ಹಂತದ ಲಸಿಕೆ ನೀಡುವಿಕೆ ಪ್ರಕ್ರಿಯೆಗಾಗಿ ಕೊವಿನ್ 2.0 ಆ್ಯಪ್ ಅಪ್ಗ್ರೇಡ್ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1 ಕೊವಿಡ್ ಲಸಿಕೆಗೆ 250 ರೂಪಾಯಿ ಹಣ ಪಾವತಿಸಿ ಲಸಿಕೆ ಪಡೆಯಬೇಕಾಗಿದೆ. ಇನ್ನು ಲಸಿಕೆ ಪಡೆಯಲು ಕೊವಿನ್ ಌಪ್ ಮತ್ತು ಆರೋಗ್ಯಸೇತು ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಲಸಿಕಾ ಕೇಂದ್ರಕ್ಕೆ ತೆರಳಿ ನೋಂದಾಯಿಸಿಕೊಳ್ಳಲು ಕೂಡ ಅವಕಾಶ ಇದೆ.
ಕೊವಿನ್ ಆ್ಯಪ್ನಲ್ಲಿ ಆಸ್ಪತ್ರೆ ಸಾಮರ್ಥ್ಯದ ಬಗ್ಗೆ ತಿಳಿಸಲಾಗಿದ್ದು, ಸೇವಾ ಕೇಂದ್ರಗಳಲ್ಲಿ ಲಸಿಕೆಗಾಗಿ ರಿಜಿಸ್ಟ್ರೇಷನ್ಗೆ ಅವಕಾಶ ಕೂಡ ನೀಡಲಾಗಿದೆ. ಯಾವ ಕಂಪನಿಯೂ ಕೂಡ ಲಸಿಕೆ ಬೇಕು ಎಂದು ಆಯ್ಕೆ ಮಾಡಿಕೊಳ್ಳುವಂತಿಲ್ಲ ಹಾಗೂ ಒಂದು ಮೊಬೈಲ್ನಿಂದ ನಾಲ್ವರ ರಿಜಿಸ್ಟ್ರೇಷನ್ಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಸೂಚಿಸಿದ್ದು, ಕೇಂದ್ರ ಸಚಿವರು ಕೂಡ ಹಣ ನೀಡಿ ಲಸಿಕೆ ಪಡೆಯಬೇಕು ಎಂದು ಸರ್ಕಾರ ತಿಳಿಸಲಾಗಿದೆ.
ಇದನ್ನೂ ಓದಿ: Covid-19 Vaccine Cowin Registration: ಕೊರೊನಾ ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?