Jagan Plane: ಆಂಧ್ರ ಸಿಎಂ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2023 | 6:29 PM

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ದೆಹಲಿಗೆ ತೆರಳುತ್ತಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು. ಗನ್ನವರಂ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಬಳಿಕ ವಿಮಾನ ವಾಪಸ್‌ ಮರಳಿತು. ಗನ್ನವರಂ ವಿಮಾನ ನಿಲ್ದಾಣದಲ್ಲಿಯೇ ತುರ್ತು ಭೂಸ್ಪರ್ಶ ಮಾಡಿದೆ.

Jagan Plane: ಆಂಧ್ರ ಸಿಎಂ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ
Andhra CM
Follow us on

ದೆಹಲಿ: ಆಂಧ್ರಪ್ರದೇಶ (Andhra Pradesh) ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ದೆಹಲಿಗೆ ತೆರಳುತ್ತಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು. ಗನ್ನವರಂ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಬಳಿಕ ವಿಮಾನ ವಾಪಸ್‌ ಮರಳಿತು. ಗನ್ನವರಂ ವಿಮಾನ ನಿಲ್ದಾಣದಲ್ಲಿಯೇ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಅಲ್ಲಿಂದ ಜಗನ್ ತಕ್ಷಣವೇ ತಾಡೇಪಲ್ಲಿಗೆ ಹೊರಟರು. ಅವರು ದೆಹಲಿಗೆ ಮತ್ತೊಂದು ವಿಶೇಷ ವಿಮಾನದಲ್ಲಿ ಹೋಗಿದ್ದಾರೆ ಎಂದು ಹೇಳಲಾಗಿದೆ. ನಾಳೆ ದೆಹಲಿಯಲ್ಲಿ ಎಪಿ ಹೂಡಿಕೆ ಸಮಾವೇಶದ ಪೂರ್ವಸಿದ್ಧತಾ ಸಭೆ ನಡೆಯಲಿದೆ. ಜಗನ್ ಇದರಲ್ಲಿ ಭಾಗವಹಿಸಲಿದ್ದಾರೆ. ನಿಗದಿಯಂತೆ ಇಂದು ರಾತ್ರಿ ದೆಹಲಿ ತಲುಪಿ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ನಾಳೆ ಬೆಳಗ್ಗೆ ಜಗನ್ ದೆಹಲಿಗೆ ಹೋಗುತ್ತಾರೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿ ಕಚೇರಿ ಘೋಷಿಸಬೇಕಿದೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ ಅವರ ದೆಹಲಿ ಭೇಟಿ ಬಗ್ಗೆ ವ್ಯಾಪಕ ಪ್ರಚಾರ ಪಡೆದಿತ್ತು. ಸತತ ಎರಡು ದಿನಗಳ ಕಾಲ ಪ್ರವಾಸ ಮುಂದೂಡಲ್ಪಟ್ಟಿದ್ದರಿಂದ ಯಾವ ಕ್ಷಣದಲ್ಲಾದರೂ ದೆಹಲಿಗೆ ಹೋಗಬಹುದು ಎಂದಿದ್ದರು. ಆದರೆ ತಮ್ಮ ಪಯಣದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ 30 ಮತ್ತು 31 ರಂದು ಹೋಗುವುದಾಗಿ ತಿಳಿಸಿದ್ದರು. ಆದರೆ ಇದೀಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಜಗನ್ ದೆಹಲಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಸಿಎಂ ಜಗನ್ ಅವರು ಕೇಂದ್ರ ಸರ್ಕಾರದ ಅಧಿಕಾರಿಗಳ ನೇಮಕಾತಿಯನ್ನು ಕೇಳಿದ್ದಾರೆ ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನು ಓದಿ:Modi and Jagan Meet: ಪ್ರಧಾನಿ ಮೋದಿಯನ್ನು ಭೇಟಿಯಾದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಹಲವು ಯೋಜನೆಗಳ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಜಗನ್​​ಮೋಹನ್​ ರೆಡ್ಡಿ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ವಿಮಾನಗಳಲ್ಲಿ ಪ್ರಯಾಣಿಸುತ್ತಿಲ್ಲ. ಅವರು ವಿಶೇಷ ವಿಮಾನಗಳಲ್ಲಿ ಹೋಗುತ್ತಿದ್ದಾರೆ. ವಿದೇಶಕ್ಕೆ ಹೋಗುವಾಗಲೂ ವಿಶೇಷ ವಿಮಾನಕ್ಕೆ ಆದ್ಯತೆ ನೀಡಲಾಗುತ್ತದೆ. ಜಗನ್ ದೆಹಲಿ ಪ್ರವಾಸಕ್ಕೆ ಗನ್ನವರಂ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಸದಾ ಸಿದ್ಧವಾಗಿರುತ್ತದೆ ಎನ್ನಲಾಗಿದೆ. ಒಂದೇ ಕಂಪನಿಯು ಈ ವಿಮಾನಗಳನ್ನು ಸರ್ಕಾರಕ್ಕೆ ಗುತ್ತಿಗೆ ನೀಡಿದೆ. ಆದರೆ ಮುಖ್ಯಮಂತ್ರಿಯಂತಹ ವಿಐಪಿಗೆ ವಿಮಾನ ಸಿದ್ಧಗೊಳಿಸುವಾಗ ಮೊದಲೇ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ವಿಮಾನ ಹಾರಾಟ ನಡೆಸಿದ ನಂತರ ತಾಂತ್ರಿಕ ದೋಷ ಉಂಟಾಗಿರುವುದು ಸಣ್ಣ ವಿಷಯವಲ್ಲ ಎನ್ನಲಾಗಿದೆ. ತಾಂತ್ರಿಕ ದೋಷಕ್ಕೆ ಕಾರಣ ಮತ್ತು ಅದನ್ನು ತಕ್ಷಣ ಸರಿಪಡಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Mon, 30 January 23