ಜಹಾಂಗೀರ್​​ಪುರಿ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿ ಅನ್ಸಾರ್ ಕೇಸ್ ದಾಖಲು, ಇಡಿಯಿಂದ ತನಿಖೆ ಆರಂಭ

| Updated By: ಸುಷ್ಮಾ ಚಕ್ರೆ

Updated on: Apr 23, 2022 | 12:42 PM

Jahangirpuri Violence: ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಕೇಂದ್ರ ಏಜೆನ್ಸಿಗೆ ಪತ್ರ ಬರೆದ ಒಂದು ದಿನದ ನಂತರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅನ್ಸಾರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಹಾಂಗೀರ್​​ಪುರಿ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿ ಅನ್ಸಾರ್ ಕೇಸ್ ದಾಖಲು, ಇಡಿಯಿಂದ ತನಿಖೆ ಆರಂಭ
ಜಹಾಂಗೀರ್​​ಪುರಿ ಹಿಂಸಾಚಾರ
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿಯಲ್ಲಿ (Jahangirpuri Violence) ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅನ್ಸಾರ್ ಶೇಖ್ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಅನ್ಸಾರ್ ಆಸ್ತಿ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಅನ್ಸಾರ್ ವಿರುದ್ಧ ಇಡಿ ತನಿಖೆ ಕೋರಿ ನಿನ್ನೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್‌ ಅಸ್ತಾನಾ ಪತ್ರ ಬರೆದಿದ್ದರು. ಕಳೆದ ವಾರ ಜಹಾಂಗೀರ್‌ಪುರಿ ಕೋಮು ಘರ್ಷಣೆಯ ಪ್ರಮುಖ ಆರೋಪಿ ಅನ್ಸಾರ್ ಶೇಖ್ ಮತ್ತು ಇತರ ಶಂಕಿತರ ಆಸ್ತಿಗಳ ಮೂಲಗಳ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಕೇಂದ್ರ ಏಜೆನ್ಸಿಗೆ ಪತ್ರ ಬರೆದ ಒಂದು ದಿನದ ನಂತರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅನ್ಸಾರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಡಿ ಅನ್ಸಾರ್ ಶೇಖ್ ಮತ್ತು ಇತರ ಶಂಕಿತರ ಎಲ್ಲಾ ಹಣಕಾಸುಗಳನ್ನು ಪರಿಶೀಲಿಸುತ್ತದೆ. ಕೋಮು ಉದ್ವಿಗ್ನತೆಯನ್ನು ಉತ್ತೇಜಿಸಲು ಯಾವುದೇ ಹಣವನ್ನು ಬಳಸಲಾಗಿದೆಯೇ ಎಂದು ತನಿಖೆ ಮಾಡುತ್ತದೆ. ದೆಹಲಿ ಕ್ರೈಂ ಬ್ರಾಂಚ್‌ನ ಮೂವರು ಸದಸ್ಯರ ತಂಡ ಆರೋಪಿಯ ಸಂಬಂಧಿಕರನ್ನು ವಿಚಾರಣೆ ನಡೆಸುತ್ತಿದೆ.

ಅನ್ಸಾರ್ ಶೇಖ್ ವಿದೇಶದಿಂದ ಹಣ ರವಾನೆ ಮಾಡಿರಬಹುದು ಎಂದು ಶಂಕಿಸಲಾಗಿದೆ ಮತ್ತು ದೆಹಲಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಅವರು ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ದೊಡ್ಡ ಭವನವನ್ನು ಹೊಂದಿದ್ದಾರೆ ಎಂದು ಪ್ರಕರಣದ ಪರಿಚಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘರ್ಷಣೆಯ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ಈಗಾಗಲೇ ಕಳೆದ ವಾರ ಘರ್ಷಣೆಗೆ ಕಾರಣವಾದ ದಿನಗಳಲ್ಲಿ ಅವರ ಚಲನವಲನಗಳನ್ನು ಪತ್ತೆಹಚ್ಚುತ್ತಿದ್ದಾರೆ. ಅವರ ಫೋನ್ ಕರೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಅನ್ಸಾರ್ ಶೇಖ್ ಸ್ಕ್ರ್ಯಾಪ್ ವ್ಯಾಪಾರಿಯಾಗಿದ್ದು, ಜಹಾಂಗೀರ್​ಪುರಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಏಪ್ರಿಲ್ 16ರಂದು ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಪೊಲೀಸರು ಅವರನ್ನು ಮತ್ತು ಇತರ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್​ನಲ್ಲಿ ಪೊಲೀಸರು ಅನ್ಸಾರ್ ಶೇಖ್ ಮತ್ತು ಇತರ ನಾಲ್ವರು ಐವರು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಸಿ ಬ್ಲಾಕ್‌ನಲ್ಲಿರುವ ಮಸೀದಿಯೊಂದರ ಬಳಿ ಧಾರ್ಮಿಕ ಮೆರವಣಿಗೆ ಸಾಗುತ್ತಿದ್ದಾಗ ಆ ಭಾಗದವರು ಜಗಳವಾಡಿದರು. ನಂತರ ಹೋರಾಟ ಘರ್ಷಣೆಗೆ ಕಾರಣವಾಯಿತು ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಕಳೆದ ವಾರ ನಡೆದ ಘರ್ಷಣೆಯ ನಂತರ ವರದಿಗಾರರಿಗೆ ನೀಡಿದ ಸಂದರ್ಶನದಲ್ಲಿ ಅನ್ಸಾರ್ ಶೇಖ್ ಅವರ ಪತ್ನಿ ಶಕೀನಾ ಬೇಗಂ, ಹಿಂಸಾಚಾರದಲ್ಲಿ ತನ್ನ ಪತಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. ಘರ್ಷಣೆಯ ಮೊದಲ ವರದಿಗಳು ಬಂದಾಗ ಆ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಉದ್ವಿಗ್ನತೆಯನ್ನು ಹರಡಲು ಅವರು ಮುಂದಾದರು. ನಾವು ಕೋಲ್ಕತ್ತಾ ಸಮೀಪದ ಸ್ಥಳದಿಂದ ಬಂದಿದ್ದೇವೆ ಮತ್ತು ಕಳೆದ 10 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನನ್ನ ಪತಿ ಹಿಂಸೆಯಲ್ಲಿ ಭಾಗಿಯಾಗಿಲ್ಲ. ಆರೋಪಗಳು ತಪ್ಪು ಎಂದು ಅವರು ಹೇಳಿದ್ದಾರೆ.

ಪೊಲೀಸರು ಘರ್ಷಣೆಗೆ ಸಂಬಂಧಿಸಿದಂತೆ ಏಳು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು 25 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಘರ್ಷಣೆಯಲ್ಲಿ ಭಾಗಿಯಾಗಿರುವ ಇನ್ನೂ 27 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯ ಜಹಾಂಗೀರ್​ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ನಿಂದ ತಡೆಯಾಜ್ಞೆ

ತೆರವು ಕಾರ್ಯಾಚರಣೆ ನಡೆದ ಜಹಾಂಗೀರ್​​ಪುರಿಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು; ಸಂತ್ರಸ್ತರ ಭೇಟಿಗೆ ತಡೆ