ದೆಹಲಿ: ಶುಕ್ರವಾರ ಇಸ್ರೇಲ್ ರಾಯಭಾರಿ ಕಚೇರಿಯ ಸಮೀಪ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಜೈಷ್ ಉಲ್ ಹಿಂದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಸ್ಫೋಟಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಂಘಟನೆ ಟೆಲಿಗ್ರಾಂ ಚಾನೆಲ್ವೊಂದರಲ್ಲಿ ಹಂಚಿಕೊಂಡಿದ್ದು, ಈ ಚಾಟ್, ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳಕ್ಕೆ ಸಿಕ್ಕಿದೆ. ಈ ಬ್ಲಾಸ್ಟ್ ನಡೆಸಿದ್ದನ್ನು ಸಂಘಟನೆ ಮಹಾನ್ ಕಾರ್ಯವೆಂಬಂತೆ ಚಾಟ್ನಲ್ಲಿ ಬಿಂಬಿಸಿಕೊಂಡಿದೆ.
ದೆಹಲಿಯಲ್ಲಿ ನಿನ್ನೆ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಪೊಲೀಸರ ವಿಶೇಷ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಲವು ಮಹತ್ವದ ವಸ್ತುಗಳನ್ನೂ ವಶಪಡಿಸಿಕೊಂಡಿದೆ. ಹಾಗೇ, ಘಟನೆಗೆ ಇರಾನ್ ಸಂಪರ್ಕ ಇದೆ ಎಂದು ಕೂಡ ಇಸ್ರೇಲ್ ಹೇಳಿತ್ತು.
ದೆಹಲಿಯ ಇಸ್ರೇಲಿ ರಾಯಭಾರಿ ಕಚೇರಿ ಬಳಿ ಸ್ಫೋಟ: ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಆ ಇಬ್ಬರು ಯಾರು?
Published On - 4:17 pm, Sat, 30 January 21