What Bengal Thinks Today| ರಾಜಕೀಯ ಸಂಘರ್ಷಕ್ಕಿಳಿದರೆ ಅಭಿವೃದ್ಧಿ ಸೋಲುವುದು ಗ್ಯಾರೆಂಟಿ-ರಾಜ್ಯಪಾಲ ಧನಕರ್
ಇವತ್ತು ಬಂಗಾಳ ಏನು ಯೋಚಿಸುತ್ತಿದೆ ಎಂದು ಇಡೀ ಭಾರತ ಕುತೂಹಲದಿಂದ ನೋಡುತ್ತಿದ್ದು ಈ ವಿಚಾರ ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಇಲ್ಲಿನ ರಾಜಕೀಯ ಇಡೀ ದೇಶದ ಗಮನ ಸೆಳೆಯುತ್ತಿದೆ.

ತಾನು ಸಂವಿಧಾನ ಎತ್ತಿ ಹಿಡಿಯಲು ಬದ್ಧನಾಗಿದ್ದು ಯಾವ ಕಾರಣಕ್ಕೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಾರೆ ಎಂದು ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಹೇಳಿದ್ದಾರೆ. ಟಿವಿ9 ಬಾಂಗ್ಲಾ ಮತ್ತು ಟಿವಿ9 ಭಾರತ್ವರ್ಷ್ ಕೋಲ್ಕತ್ತಾದಲ್ಲಿ ಶನಿವಾರ ಏರ್ಪಡಿಸಿರುವ What West Bengal Think Today ಕಾನ್ಕ್ಲೇವ್ನಲ್ಲಿ ಭಾಗವಹಿಸಿದ ಧನಕರ್ ಈ ಕುರಿತು ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸರಕಾರದೊಂದಿಗೆ ಸಂಘರ್ಷಕ್ಕಿಳಿಯಲು ನಮ್ಮ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಹಾಗೇನಾದರೂ ಆದರೆ, ಅದರಿಂದ ಜನರಿಗೆ ತುಂಬಾ ತೊಂದರೆ ಆಗುವುದು ಗ್ಯಾರೆಂಟಿ. ನೋಡಿ, ನಾನು ಒಂದು ವಿಚಾರ ಹೇಳುತ್ತೇನೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿ ದೇಶಾದ್ಯಂತ 70 ಲಕ್ಷ ಜನ ಅನುಕೂಲ ಪಡೆದಿದ್ದಾರೆ. ಆದರೆ, ಪಶ್ಚಿಮ ಬಂಗಾಲದ ಒಬ್ಬನೇ ಒಬ್ಬ ರೈತ ಕೂಡ ಈ ಯೊಜನೆಯ ಅನುಕೂಲ ಪಡೆಯಲಾಗಲಿಲ್ಲ. ನನ್ನ ಅಭಿಪ್ರಾಯವೇನೆಂದರೆ, ರಾಜಕೀಯ ವಿಚಾರದಲ್ಲಿ ಸಂಘರ್ಷವಿರಬೇಕೆ ವಿನಃ ಅಭಿವೃದ್ಧಿ ವಿಚಾರದಲ್ಲಿ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಟಿವಿ9 ಏರ್ಪಡಿಸಿರುವ ಕಾನ್ಕ್ಲೇವ್ ಅನ್ನು ಹೊಗಳಿದ ರಾಜ್ಯಪಾಲ ಧನಕರ್ ಅವರು ಈ ವಿಚಾರ ಇದು ಬಹಳ ಪ್ರಸ್ತುತವಾಗಿದೆ. ಇಂದು ಬಂಗಾಲ ಯಾವುದನ್ನು ವಿಚಾರ ಮಾಡುತ್ತೋ, ಉಳಿದ ಪ್ರದೇಶಗಳು ಅದನ್ನು ನಾಳೆ ಅನುಸರಿಸುತ್ತವೆ ಎಂಬ ಮಾತೊಂದಿದೆ. ಆದರೆ ನಾವೀಗ ಬಂಗಾಲವನ್ನು ಪುನರ್ಶೋಧನೆ ಮಾಡುವ ಸಮಯ ಬಂದಿದೆ ಎಂದು ಹೇಳಿದರು.
ಸರಕಾರೀ ನೌಕರರು ಒಂದು ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಲಾಗದು. ಹಾಗೊಮ್ಮೆ ನೌಕರರು ಆ ರೀತಿ ವರ್ತಿಸಲು ಪ್ರಾರಂಭಿಸಿದರೆ ಆಗ ಪ್ರಜಾಪ್ರಭುತ್ವ ಸೋಲುವುದು ಗ್ಯಾರೆಂಟಿ. ನಾನು ರಾಜಕೀಯ ಪಾಲುದಾರ ಅಥವಾ ಮಧ್ಯಸ್ಥಗಾರನಲ್ಲ. ನನಗೆ ಜನರ ಹಿತ ಮುಖ್ಯ ಎಂದು ಧನಕರ್ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.
ಟಿವಿ9 ಸುದ್ದಿಸಂಸ್ಥೆ ವತಿಯಿಂದ ನೂತನ ಬಗೆಯ ಸಂವಾದ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಟಿವಿ9 ಬಾಂಗ್ಲಾ ಮತ್ತು ಟಿವಿ9 ಭಾರತ್ವರ್ಷ್ ವಾಹಿನಿಗಳ ಮೂಲಕ ಇದು ಆರಂಭಗೊಂಡಿದ್ದು, ‘ವಾಟ್ ಬೆಂಗಾಲ್ ಥಿಂಕ್ಸ್ ಟುಡೇ’ ಎನ್ನುವ ಶೀರ್ಷಿಕೆ ಅಡಿ ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾದಲ್ಲಿ ಇಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಟಿವಿ9 ಸಮೂಹದ ಸಿಇಓ ಬರುಣ್ ದಾಸ್, ಟಿವಿ9 ವಾಹಿನಿಗಳು ಇಂತಹ ಕಾರ್ಯಕ್ರಮವನ್ನು ಎಲ್ಲೆಡೆ ಆಯೋಜಿಸುವ ಗುರಿ ಹೊಂದಿವೆ. ಟಿವಿ9 ಬಾಂಗ್ಲಾ ಅತಿ ಶೀಘ್ರದಲ್ಲಿ ಉತ್ತುಂಗಕ್ಕೆ ಏರುವ ವಿಶ್ವಾಸವಿದ್ದು, ಬಂಗಾಲ ಇಂದು ಏನು ಯೋಚಿಸುತ್ತದೋ, ಭಾರತ ನಾಳೆ ಅದರ ಬಗ್ಗೆ ಯೋಚಿಸುತ್ತದೆ ಎಂಬ ಪ್ರಸಿದ್ಧ ಮಾತಿಗೆ ತಕ್ಕನಾಗಿ ಪಶ್ಚಿಮ ಬಂಗಾಲದಿಂದ ಸಂವಾದ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಇವತ್ತು ಬಂಗಾಲ ಏನು ಯೋಚಿಸುತ್ತಿದೆ (What Bengal Thinks Today) ಎಂದು ಇಡೀ ಭಾರತ ಕುತೂಹಲದಿಂದ ನೋಡುತ್ತಿದ್ದು ಈ ವಿಚಾರ ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಇಲ್ಲಿನ ರಾಜಕೀಯ ಇಡೀ ದೇಶದ ಗಮನ ಸೆಳೆಯುತ್ತಿದೆ. ಬಂಗಾಲ, ಒಡಿಶಾ, ಕೇರಳದಲ್ಲಿ ಬಿಜೆಪಿ ವಿಜಯ ಸಾಧಿಸಿದ ನಂತರವೇ ಬಿಜೆಪಿಯ ಸ್ವರ್ಣಯುಗ ಆರಂಭ ಎಂದು ಅಮಿತ್ ಶಾ ಸಹ ಒಮ್ಮೆ ಅಭಿಪ್ರಾಯಪಟ್ಟಿದ್ದರು. ಇಂತಹ ಬಂಗಾಲ ಮುಂದೆ ಹೇಗೆ ಹೆಜ್ಜೆ ಇಡಲಿದೆ ಎನ್ನುವುದು ಅತ್ಯಂತ ಪ್ರಮುಖವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜನರಿಗೆ ಬೇಕಾಗಿರುವುದು ಅಭಿವೃದ್ಧಿ. ಆದರೆ, ಅದರ ಕುರಿತಾಗಿ ಯೋಚಿಸುವ ರಾಜಕಾರಣಿಗಳ ಕೊರತೆ ಇದೆ ಎನ್ನಿಸುತ್ತಿದೆ. ಏನೇ ಆದರೂ ಕೊನೆಯಲ್ಲಿ ಜನರೇ ಗೆಲ್ಲಬೇಕು. ಬಂಗಾಲದ ಮುಂಬರುವ ಚುನಾವಣೆಯಲ್ಲಿಯೂ ಜನರ ಆಲೋಚನೆಗಳು ಗೆಲುವು ಸಾಧಿಸಬೇಕು. ಬಂಗಾಲ ಇಂದು ಏನು ಯೋಚಿಸುತ್ತದೆಯೋ ಭಾರತ ನಾಳೆ ಅದನ್ನು ಯೋಚಿಸುತ್ತದೆ ಎಂಬ ಮಾತು ನಿಜವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಭಾಗವಹಿಸಿದ್ದು, ರಾಜ್ಯದ ಮುಂಬರುವ ಚುನಾವಣೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
Published On - 5:59 pm, Sat, 30 January 21