ಪಂಜಾಬ್ನ ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್(Jallianwala Bagh )ನ ಉದ್ಯಾನದಲ್ಲಿ ನಡೆದ ಹತ್ಯಾಕಾಂಡ ಘಟನೆಗೆ ಬರೋಬ್ಬರಿ 104 ವರ್ಷ. ದೇಶದ ಇತಿಹಾದಲ್ಲಿ ಕಂಡು ಕೇಳರಿಯದ ಭೀಕರ ಹತ್ಯಾಕಾಂಡ ಇದಾಗಿತ್ತು. ಅದು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬದ ದಿನವೇ ಈ ಹತ್ಯಾಕಾಂಡ ನಡೆದಿತ್ತು.
1919ರ ಏಪ್ರಿಲ್ 13 ರಂದು ನಡೆದಿದ್ದೇನು?
ಅಂದು ಎಲ್ಲೆಲ್ಲೂ ಯುಗಾದಿ ಸಂಭ್ರಮ ಮನೆ ಮಾಡಿತ್ತು. ಅಂದು ಪಂಜಾಬ್ನಲ್ಲಿ ಸಿಖ್ಖರು ಬೈಸಾಕಿ ಹಬ್ಬ ಆಚರಿಸಲು ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್ನಲ್ಲಿರುವ ಉದ್ಯಾನದಲ್ಲಿ ಪುರುಷರು, ಮಹಿಳೆಯರು, ಹಿರಿಯರು ಮಕ್ಕಳು ಎಲ್ಲರೂ ಆಗಮಿಸಿದ್ದರು.
ಸಂವಹನ ತಂತ್ರಜ್ಞಾನದಲ್ಲಿ ತುಂಬಾ ಹಿಂದುಳಿದಿದ್ದ ಪಂಜಾಬ್ನಲ್ಲಿ ಗ್ರಾಮೀಣ ಪ್ರದೇಶದಿಂದ ಪಂಜಾಬಿನಲ್ಲಿ ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿ ಏನೂ ಲಭ್ಯವಾಗುತ್ತಿರಲಿಲ್ಲ. ಶಾಸನಬದ್ಧವಾಗಿ ಅಂದು ಅಮೃತಸರದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ ಎಂದು ಬ್ರಿಟಿಷ್ ಸರ್ಕಾರ ಆದೇಶ ಹೊರಡಿಸಿತ್ತು.
ಈ ವೇಳೆ ಶಸ್ತ್ರಸಜ್ಜಿತವಾದ ಬ್ರಿಟಿಷ್ ಸೈನಿಕರ ತುಕಡಿ ಉದ್ಯಾನಕ್ಕೆ ಬಂದಿತ್ತು, ಮಷಿನ್ ಗನ್ ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನದ ಕಡಿದಾದ ದ್ವಾರದಿಂದ ಬರುವುದು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾಗಿದ್ದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಯಾವುದೇ ಎಚ್ಚರಿಕೆಯನ್ನು ಮುಂಚಿತವಾಗಿ ನೀಡದೇ ಉದ್ಯಾನಕ್ಕೆ ಪ್ರವೇಶಿಸಿ ಗುಂಡಿನ ದಾಳಿ ನಡೆಸುವಂತೆ ಆದೇಶಿಸಿದ್ದ ನೀಡಿಬಿಟ್ಟಿದ್ದ.
ಸುಮಾರು 15 ನಿಮಿಷಗಳ ಕಾಲ ಸತತವಾಗಿ ಗುಂಡಿನ ದಾಳಿ ನಡೆಸಿದ್ದರು, ಜೀವ ಭಯದಿಂದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದ್ದರು. ಸಾಕಷ್ಟು ಮಂದಿ ಬಾವಿಯೊಳಗೆ ಹಾರಿದ್ದರಂತೆ, ಬಾವಿಯೊಳಗಿಂದ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು.
ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಅಂದು ಸಾವನ್ನಪ್ಪಿದ್ದರು. ಆದರೆ ಅನಧಿಕೃತ ವರದಿ ಪ್ರಕಾರ ಸಾವಿರಾರು ಮಂದಿ ಮೃತಪಟ್ಟಿದ್ದರು.
ಡೈಯರ್ನ ಈ ಕೃತ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾದ ಕಾರಣ 1920ರಲ್ಲಿ ಆತ ರಾಜೀನಾಮೆ ನೀಡಿದ್ದ, ಉದಮ್ ಸಿಂಗ್ ಅವರು ಹತ್ಯಾಕಾಂಡದ ಹಿಂದಿನ ರೂವಾರಿ ಎನ್ನಲಾಗಿದ್ದ ಮೈಕೇಲ್ ಓಡೈರ್ನನ್ನು ಲಂಡನ್ನಲ್ಲಿ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದರು. ಬಳಿಕ ಉದಮ್ ಸಿಂಗ್ ಅವರನ್ನು ನೇಣುಗಂಬಕ್ಕೆ ಏರಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ