Jammu Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ: 3.9 ತೀವ್ರತೆ ದಾಖಲು

ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ ದಾಖಲಾಗಿದೆ. ಜಮ್ಮು ಕಾಶ್ಮೀರದ ಬಂಡೀಫೊರಾದಲ್ಲಿ ಭೂಕಂಪ ಸಂಭವಿಸಿದೆ.

Jammu Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ: 3.9 ತೀವ್ರತೆ ದಾಖಲು
ಭೂಕಂಪ

Updated on: Mar 05, 2023 | 3:31 PM

ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ ದಾಖಲಾಗಿದೆ. ಜಮ್ಮು ಕಾಶ್ಮೀರದ ಬಂಡೀಫೊರಾದಲ್ಲಿ ಭೂಕಂಪ ಸಂಭವಿಸಿದೆ. ಬಂಡೀಪೋರಾದಲ್ಲಿ ಬೆಳಗ್ಗೆ 6.57ರ ಸುಮಾರಿಗೆ ಭೂಕಂಪ ಸಂಭವಿಸಿದೆ, ಭೂಕಂಪನವು ಭೂಮಿಯ ಹೊರಪದರದೊಳಗೆ 10 ಕಿಲೋಮೀಟರ್‌ಗಳಷ್ಟು ಅಕ್ಷಾಂಶ 34.42 ಡಿಗ್ರಿ ಉತ್ತರ ಮತ್ತು ರೇಖಾಂಶ 74.88 ಡಿಗ್ರಿ ಪೂರ್ವದಲ್ಲಿ ಸಂಭವಿಸಿದೆ.

ಎಲ್ಲಿಯೂ ಆಸ್ತಿಪಾಸ್ತಿ ನಷ್ಟದ ಕುರಿತು ವರದಿಯಾಗಿಲ್ಲ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಕೂಡ ಭೂಕಂಪ ಸಂಭವಿಸಿದೆ. ರಾತ್ರಿ 12.45ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ.

ಗುರುವಾರ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ 2.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಹಿಂದೆ 2022ರ ಡಿಸೆಂಬರ್​ನಲ್ಲಿ ಉತ್ತರಕಾಶಿಯಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:31 pm, Sun, 5 March 23