Jammu and Kashmir: ಪುಲ್ವಾಮಾದ ಜಾಮಾ ಮಸೀದಿಯಲ್ಲಿ ಭಾರಿ ಅಗ್ನಿ ಅವಘಡ

|

Updated on: May 10, 2023 | 2:50 PM

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ತ್ರಾಲ್​ ಪ್ರದೇಶದಲ್ಲಿರುವ ಮಸೀದಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ, ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಜಾಮಾ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Jammu and Kashmir: ಪುಲ್ವಾಮಾದ ಜಾಮಾ ಮಸೀದಿಯಲ್ಲಿ ಭಾರಿ ಅಗ್ನಿ ಅವಘಡ
ಮಸೀದಿಯಲ್ಲಿ ಬೆಂಕಿ
Image Credit source: India TV
Follow us on

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ತ್ರಾಲ್​ ಪ್ರದೇಶದಲ್ಲಿರುವ ಮಸೀದಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಈ ಅವಘಡಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ, ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಜಾಮಾ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ಟೆಂಡರ್‌ಗಳು ಬೆಂಕಿಯನ್ನು ಹತೋಟಿಗೆ ತರಲು ಕಾರ್ಯಾಚರಣೆಗೆ ಒಳಪಡಿಸಲಾಯಿತು ಎಂದು ಅವರು ಹೇಳಿದರು.

ಸ್ಥಳೀಯರಿಂದ ಬಂದ ಮಾಹಿತಿ ಪ್ರಕಾರ ಬೆಳಗ್ಗೆ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳಗಳನ್ನು ಕಳುಹಿಸಿ ಬೆಂಕಿ ನಂದಿಸಲಾಯಿತು. ಮಸೀದಿಯ ಮೇಲ್ಛಾವಣಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಜನರು ಹೇಳಿದರು.

ಮತ್ತಷ್ಟು ಓದಿ:ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ

ಮಸೀದಿಯ ಮೇಲ್ಛಾವಣಿಗೆ ಹೆಚ್ಚಿನ ಪ್ರಮಾಣದ ಮರವನ್ನು ಬಳಸಲಾಗಿದ್ದು, ಬೆಂಕಿಯು ಕಟ್ಟಡಕ್ಕೆ ವೇಗವಾಗಿ ಹರಡಿತು. ಬೆಂಕಿಯಿಂದಾಗಿ ಮಸೀದಿಯ ಮೇಲ್ಛಾವಣಿ ಮತ್ತು ಮೇಲ್ಭಾಗವು ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಇದರೊಂದಿಗೆ ಮಸೀದಿಯ ಪಕ್ಕದ ದಾರುಲ್-ಉಲೂಮ್‌ನಲ್ಲಿ ತಂಗಿದ್ದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬೆಂಕಿ ಅವಘಡದ ವೇಳೆ ಮದರಸಾದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಬೆಂಕಿ ಅನಾಹುತಕ್ಕೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಪ್ರಾಥಮಿಕ ತನಿಖೆಯು ವಿದ್ಯುತ್ ಸರ್ಕ್ಯೂಟ್‌ನಲ್ಲಿನ ಶಾರ್ಟ್‌ನಿಂದಾಗಿ ಸಂಭವಿಸಬಹುದು ಎಂದು ಸೂಚಿಸುತ್ತದೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿಲ್ಲ. ಅಲ್ಲದೆ ಈ ಘಟನೆಯಲ್ಲಿ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ